ಬೆಂಗಳೂರು-ನೆಲಮಂಗಲದ ಮೇಲೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣ ಇದರಿಂದ ಮಾತ್ರ ಸಾಧ್ಯ
Expressway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವೇಗಳ ಜಾಲ ವಿಸ್ತರಣೆ ಆಗುತ್ತಲಿದೆ. ಕೆಲವು ಹೆದ್ದಾರಿಗಳು ಉದ್ಘಾಟನೆ ಹಂತದಲ್ಲಿದ್ದರೆ, ಇನ್ನೂ ಹಲವು ಕಾಮಗಾರಿ ಹಾಗೂ ಡಿಪಿಆರ್ ಹಂತದಲ್ಲಿವೆ. ಈ ನಡುವೆಯೇ ಇದೀಗ ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಕುರಿತು ಮಹತ್ವದ ಅಪ್ಡೇಟ್‌ವೊಂದು ಲಭ್ಯವಾಗಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ರಾಜ್ಯದಲ್ಲಿ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾಗಿ ವಾಹನ ಸಂಚಾರ ಮಾಡುತ್ತಿವೆ. ಇನ್ನು ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಇದು ಇನ್ನೂ ಉದ್ಘಾಟನೆ ಆಗಿಲ್ಲ. ಇದಕ್ಕೆ ಕಾರಣವೂ ಕೂಡ ಇದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿ ವಿಳಂಬ ಹಿನ್ನೆಲೆ ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಲಿದೆ. ಈ ವರ್ಷದ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಇದರ ಲೋಕಾರ್ಪಣೆಯಾಗಲಿದೆ ಎನ್ನುವ ಮಾಹಿತಿ ಇದೆ.

ಬೆಂಗಳೂರು - ಪುಣೆ ಪ್ರಯಾಣ ಸಮಯದ ವಿವರ: ಈ ನಡುವೆಯೇ ಇದೀಗ ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಗೆ ಕೇಂದ್ರದಿಂದ ಅನುಮೋದನೆ ದೊರೆತರೆ ಬೆಂಗಳೂರು - ಪುಣೆ ಪ್ರಯಾಣಕ್ಕೆ ಕೇವಲ 7 ಗಂಟೆ ಸಾಕಾಗುತ್ತದೆ.
ಬೆಂಗಳೂರು-ಪುಣೆಗೆ ರಸ್ತೆಯಲ್ಲಿ ಪ್ರಸ್ತುತ ಪ್ರಯಾಣ ಸಮಯ 11-15 ಗಂಟೆಗಳವರೆಗೆ ಆಗುತ್ತದೆ. ಆದರೆ, ಹೊಸ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಆದರೆ, ಈ ಪ್ರಯಾಣದ ಸಮಯವು 6ರಿಂದ 7 ಗಂಟೆಗಳಿಗೆ ಇಳಿಕೆಯಾಗಲಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪ್ರಯಾಣ ಮಾಡಿದರೆ ಸುಮಾರು 8,00ಕ್ಕೂ ಅಧಿಕ ಕಿಲೋ ಮೀಟರ್ ದೂರವನ್ನು ಕ್ರಮಿಸಬೇಕಾಗಿದೆ.
ಏನೆಲ್ಲಾ ಪ್ರಯೋಜನಗಳಿವೆ?: ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಗೆ 2026ರಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಗುವ ಸಾಧ್ಯತೆಯಿದೆ. ಈ ಯೋಜನೆಯು NH-48 ನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಆಗಲಿದೆ. ಸುಮಾರು 700 ಕಿಲೋ ಮೀಟರ್ ಉದ್ದದ ಈ ಆರು ಪಥಗಳ ಹೆದ್ದಾರಿ ನಿರ್ಮಾಣದಿಂದ ಪುಣೆ - ಬೆಂಗಳೂರು ನಡುವಿನ ಪ್ರಯಾಣ ಸಮಯ ಗಣನೀಯವಾಗಿ ಕಡಿತ ಆಗಲಿದೆ. ಈ ಮೂಲಕ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಇದು ಪ್ರಮುಖ ಸಂಪರ್ಕ ಸೇತುವೆಯಾಗಲಿದೆ ಎನ್ನಲಾಗುತ್ತದೆ.
ಇದು ಬಹುದಿನಗಳ ಬೇಡಿಕೆ ಆಗಿರುವ ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗೆ ಕೇಂದ್ರ ಸಚಿವ ಸಂಪುಟವು 2026ರಲ್ಲಿ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 2023ರಲ್ಲಿ ಈ ಯೋಜನೆಗೆ ಅನುಮೋದನೆ ಸಿಗಬೇಕಿತ್ತು. ಇದಕ್ಕೆ ಅನುಮೋದನೆ ದೊರೆತರೆ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ನಲ್ಲಿನ ದೀರ್ಘಕಾಲದ ದಟ್ಟಣೆಗೆ ಬಹುದೊಡ್ಡ ಪರಿಹಾರ ಸಿಕ್ಕಂತಾಗಲಿದೆ.
ಈ ಯೋಜನೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಲವು ಭಾರೀ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೂ ಯೋಜನೆಗೆ ಕೇಂದ್ರದಿಂದ ಅಂತಿಮ ಅನುಮತಿ ಇನ್ನೂ ಸಿಕ್ಕಿಲ್ಲ. ಸಚಿವ ಸಂಪುಟದ ಅನುಮೋದನೆ ನಂತರವೇ ಭೂಸ್ವಾಧೀನ ಪ್ರಾರಂಭ ಆಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ ಅಂತಾ ವರದಿಯಾಗಿದೆ.
ಈ ರಸ್ತೆಯ ಕಾರ್ಯಯೋಜನೆಯ ಪ್ರಕ್ರಿಯೆಗೆ ಸುಮಾರು ಎರಡು ವರ್ಷಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪುಣೆ-ಬೆಂಗಳೂರನ್ನು ಸಂಪರ್ಕಿಸುವ ಮತ್ತು ಹೆಚ್ಚಿನ ಸಂಚಾರ ದಟ್ಟಣೆ ಇರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾರಿ ಸಂಚಾರ ಹೊರೆ ಇರುವುದರಿಂದ ಪ್ರಸ್ತಾವಿತ ಕಾರಿಡಾರ್ ಬೇಕೇ ಬೇಕೆಂದು ಪರಿಗಣಿಸಲಾಗಿದೆ.
ರಾಷ್ಟ್ರೀ ಹೆದ್ದಾರಿ 48ರಲ್ಲಿ ನಿರಂತರ ನಿರ್ಮಾಣ ಕಾರ್ಯವು ಸಂಚಾರವನ್ನು ಮತ್ತಷ್ಟು ನಿಧಾನಗತಿ ಆಗಿದ್ದು, ಇದರಿಂದ ವಾಹನ ಸವಾರರು ಬೇಸತ್ತಿದ್ದಾರೆ. ಅಲ್ಲದೆ, ಪ್ರಯಾಣಕ್ಕೆ ಹೆಚ್ಚು ಸಮಯವನ್ನು ಸಹ ತೆಗೆದುಕೊಳ್ಳುತ್ತಿದೆ. ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿದ ಬಳಿಕ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಆಗುತ್ತದೆ. ಇದರಿಂದಾಗಿ ವಾಹನ ಚಾಲಕರು ಪುಣೆ ಹೊರ ವರ್ತುಲ ರಸ್ತೆಯಿಂದ ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಅನ್ನು ಕೇವಲ 7 ಗಂಟೆಗಳಲ್ಲಿ ತಲುಪಬಹುದು. ಇದೀಗ ಸದ್ಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾಮಗಾರಿ ನಡೆಯುತ್ತಿದ್ದು, ನೆಲಮಂಗಲ ಭಾಗದಲ್ಲಿ ವಾಹನ ಸಂಚಾರ ನಿಧಾನಗತಿಯಾಗಿದೆ.












Click it and Unblock the Notifications