ದ್ವಿತೀಯ ಪಿಯು ಪರೀಕ್ಷೆಯಲ್ಲಿ ಲೋಪದೋಷ: ವಿದ್ಯಾರ್ಥಿಗಳಿಗೆ ಕೃಪಾಂಕ

ಬೆಂಗಳೂರು, ಮಾರ್ಚ್ 22: ಪ್ರಸ್ತುತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆಂಗ್ಲ ಮತ್ತು ಭೌತಶಾಸ್ತ್ರ ಪ್ರಸ್ನೆ ಪತ್ರಿಕೆಯಲ್ಲಿ ಲೋಪದೋಷಗಳಿದ್ದ ಕಾರಣ ಈ ಪ್ರಶ್ನೆಗಳಿಗೆ ಕೃಪಾಂಕ ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಆಂಗ್ಲ ಭಾಷೆಯಲ್ಲಿ 2 ಮತ್ತು ಭೌತಶಾಸ್ತ್ರ ವಿಷಯಕ್ಕೆ 6 ಒಟ್ಟಾರೆ 8 ಕೃಪಾಂಕ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಆಂಗ್ಲ ಭಾಷೆಯಲ್ಲಿ ಕೇಳಲಾಗಿರುವ ಕಡ್ಡಾಯ ಪ್ರಶ್ನೆಗೆ 2, ಭೌತಶಾಸ್ತ್ರ ಎಲ್ಲ ವಿದ್ಯಾರ್ಥಿಗಳಿಗೂ ಒಂದು ಕೃಪಾಂಕ ನೀಡಲಾಗುತ್ತದೆ. ವಿದ್ಯಾರ್ಥಿಗಳು ಐಚ್ಛಿಕ ಪ್ರಶ್ನೆಗಳಿಗೆ ಉತ್ತರಿಸಿದ್ದರೆ ಮಾತ್ರ ಉಳಿದ ಐದು ಕೃಪಾಂಕ ಸಿಗಲಿದೆ.

ಕೃಪಾಂಕ ನೀಡುವ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆ ವಿಷಯವಾರು ತಜ್ಞರು ಹಾಗೂ ಪ್ರಶ್ನೆ ಪತ್ರಿಕೆ ರೂಪಿಸಿದ ಸಮಿತಿಯೊಂದಿಗೆ ಸಭೆ ನಡೆಸಿ, ಆಕ್ಷೇಪಣೆಗಳನ್ನು ಪರಿಶೀಲಿಸಿ ಕೊನೆಗೆ 8ಕೃಪಾಂಕ ನೀಡಬಹುದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಕೃಪಾಂಕ ನೀಡಿರುವ ಪ್ರಶ್ನೆಗಳನ್ನು ಮೌಲ್ಯಮಾಪಕರಿಗೆ ನೀಡುವ ಸ್ಕೀಂ ಆಫ್ ಇವ್ಯಾಲ್ಯುಯೇಷನ್ ನಲ್ಲಿ ಗುರುತು ಹಾಕಲಾಗುತ್ತದೆ.

PU boars sanctions grace marks to English and Physics students

ಅಲ್ಲದೆ, ಸಾರ್ವಜನಿಕರಿಗೂ ತಿಳಿಸಲು ವೆಬ್‌ಸೈಟ್‌ ನಲ್ಲಿ ಪ್ರಶ್ನೆಗಳನ್ನು ಅಪ್‌ಲೋಡ್ ಮಾಡಲು ಇಲಾಖೆ ನಿರ್ಧರಿಸಿದೆ. 2018ರಲ್ಲಿ ದ್ವಿತೀಯ ಪಿಯುಸಿ ಭೌತಶಾಸ್ತ್ರ ಹಾಗೂ ಆಂಗ್ಲಭಾಷೆ ಪರೀಕ್ಷೆಯು ಮಾರ್ಚ್ 1 ಹಾಗೂ ಮಾರ್ಚ್ 17ರಂದು ನಡೆದಿದೆ. ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ತಿದ್ದುಪಡಿ 2017ರ ಮೇ 1ರಿಂದ ಜಾರಿಗೆ ಬಂದಿದೆ. ಇದರ ನಿಯಮ 22(ಬಿ) ಪ್ರಕಾರ ಪೌಲ್ಯಮಾಪನ ಹಂತದಲ್ಲಿ ಕೃಪಾಂಕಗಳನ್ನು ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+