Property Tax: ಬೆಂಗಳೂರಲ್ಲಿ ಗುತ್ತಿಗೆದಾರರ ಬಿಲ್ ಸಮಸ್ಯೆ ಇಲ್ಲ: 80% ವಾಣಿಜ್ಯ ತೆರಿಗೆ ಬಾಕಿ, ಆಸ್ತಿ ಹರಾಜು: ಡಿಕೆ ಶಿವಕುಮಾರ್
ಬೆಂಗಳೂರು: ಬೆಂಗಳೂರು ಜಿಬಿಎ ಸೇರಿ ಇತರ ಇಲಾಖೆಗಳ ಗುತ್ತಿಗೆದಾರರ ಬಿಲ್ ಬಾಕಿ ವಿಚಾರವು ಹೆಚ್ಚು ಸದ್ದು ಮಾಡಿತ್ತು. ಇದೀಗ ಗುತ್ತಿಗೆದಾರರು ಬಾಕಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ, ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವುದೇ ಎಂದು ಕೇಳಿದಾಗ, "ಪಾಲಿಕೆಗಳಲ್ಲಿ ಕ್ರಾಂತಿಕಾರಿ ತೀರ್ಮಾನ ಮಾಡಿ ಬಿಲ್ ವಿತರಣೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಜಿಬಿಎ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರ ಸಮಸ್ಯೆ ಇಲ್ಲ. ಬೇರೆ ಕಡೆ ಕಾಮಗಾರಿಗಳ ಗುತ್ತಿಗೆದಾರರು ಈ ರೀತಿ ಕೇಳುತ್ತಿರಬಹುದು. ನಾವು ಸಮಸ್ಯೆ ಆದಷ್ಟು ಬಗೆಹರಿಸಿದ್ದೇವೆ. ಸುಮಾರು 90ರಷ್ಟು ಸಮಸ್ಯೆ ಬಗೆಹರಿಸಿದ್ದೇವೆ. ತಾಂತ್ರಿಕ ಕಾರಣಗಳಿಂದಾಗಿ 10ರಷ್ಟು ಮಾತ್ರ ಬಾಕಿ ಉಳಿದಿವೆ. ಬೆಂಗಳೂರು ರಸ್ತೆ ಕಾಮಗಾರಿ ವಿಚಾರದಲ್ಲಿ ಯಾವ ಗುತ್ತಿಗೆದಾರರ ಬಿಲ್ ಬಾಕಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪಾಲಿಕೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ರಾಜ್ಯ ಚುನಾವಣಾ ಆಯೋಗದ ಜವಾಬ್ದಾರಿಗೆ ಬಿಟ್ಟಿದ್ದು. ಕೋರ್ಟ್ ನಲ್ಲಿ ಅವರೇ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಚುನಾವಣೆ, ಆಯೋಗದ ಕೈಯಲ್ಲಿದೆ, ನಮ್ಮ ಕೈಯಲ್ಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
80% ವಾಣಿಜ್ಯ ತೆರಿಗೆ ಬಾಕಿ: ಬಾಕಿದಾರರ ಆಸ್ತಿಗಳ ಹರಾಜು
ಜಿಬಿಎ ಆಸ್ತಿ ತೆರಿಗೆ ಪಾವತಿ ಮಾಡದವರ ಆಸ್ತಿಗಳ ಹರಾಜಿಗೆ ಮುಂದಾಗಿರುವ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, ಇದು ದೊಡ್ಡ ಸಮಸ್ಯೆಯಲ್ಲ. ಸಣ್ಣ ಪುಟ್ಟ ಮನೆಯವರು ಹೊರತಾಗಿ ಉಳಿದವರು ಅವರು ಪ್ರತಿ ತಿಂಗಳು ಬಾಡಿಗೆ ಪಡೆಯುತ್ತಿದ್ದಾರೆ. ಶೇ.80 ಜನ ವಾಣಿಜ್ಯ ಆಸ್ತಿಗಳು 7-8 ವರ್ಷಗಳಿಂದ ತೆರಿಗೆ ಪಾವತಿ ಮಾಡಿಲ್ಲ. ಕೆಲವು ಮಾಜಿ ಶಾಸಕರ ಆಸ್ತಿಗಳಿವೆ. ನಾನು ಅವರ ಹೆಸರು ಹೇಳುವುದಿಲ್ಲ. ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ, ನಾವು ಹೇಗೆ ನಡೆದುಕೊಳ್ಳಬೇಕು?
ಅವಕಾಶ ನೀಡಬೇಕು ಎಂದು ಓಟಿಎಸ್ ವ್ಯವಸ್ಥೆ ಕಲ್ಪಿಸಿದ್ದೆವು. ತೆರಿಗೆ ಸಂಗ್ರಹ ಬಗ್ಗೆ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನಮಗೆ ಮಾನವೀಯತೆ ಇರುವುದಕ್ಕೆ ಓಟಿಎಸ್ ನೀಡಿದ್ದೆವು. ಇದರಿಂದ ಜನರಿಗೆ ಎಷ್ಟು ಅನುಕೂಲವಾಗಿದೆ ಎಂದು ನಮಗೆ ಗೊತ್ತಿದೆ. ಇದನ್ನು ಬಳಸಿಕೊಳ್ಳದಿದ್ದರ, ಪಾಲಿಕೆ ಅವರು ಏನು ಮಾಡಬೇಕು. ಕೆಲವರು ಕಟ್ಟಡ ನಕ್ಷೆ ಅನುಮೋದನೆಗೆ ಶೇಕಡಾ 35 ಪಾವತಿ ಮಾಡಿ ಶೇಕಡಾ 75 ಪಾವತಿ ಮಾಡದೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಂತಹವರಿಗೆ ನಕ್ಷೆ ಅನುಮೋದನೆ ಮಾಡಬೇಡಿ ಎಂದಿದ್ದೇನೆ. ಈ ರೀತಿ ಅನೇಕ ಡೆವಲಪರ್ ಗಳು ದುರುಪಯೋಗ ಮಾಡಿಕೊಂಡಿದ್ದಾರೆ. ಇಲ್ಲಿ ಬಡವರು 30x40 ನಿವೇಶನದಾರರು ಇಲ್ಲ. ಎಲ್ಲಾ ದೊಡ್ಡ ಶ್ರೀಮಂತರೆ ಇದ್ದಾರೆ ಎಂದು ತಿಳಿಸಿದರು.
ಓಟಿಎಸ್ ಯೋಜನೆ: 1200 ಕೋಟಿ ರೂ. ಆದಾಯ ಸಂಗ್ರಹ
ಓಟಿಎಸ್ ಯೋಜನೆಯಲ್ಲಿ 2.65 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಇದರಿಂದ ಪಾಲಿಕೆಗೆ 1200 ಕೋಟಿ ಸಂಗ್ರಹವಾಗಿದೆ. ಇದು ಐತಿಹಾಸಿಕ ನಿರ್ಧಾರ. ಮಂತ್ರಿ ಮಾಲ್ ನವರು 35 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಅವರಿಗೆ ಈ ರೀತಿ ಮಾಡುತ್ತಿಲ್ಲ ಬೇರೆಯವರಿಗೆ ಯಾಕೆ ಎಂದು ಕೇಳಿದಾಗ, "ನಾನು ಅಲ್ಲಿಗೆ ಬೀಗ ಹಾಕಿಸಿ, 8 ಕೋಟಿ ಹಣ ಪಾವತಿ ಮಾಡಿದ್ದಾರೆ. ಅವರಿಗೆ ನ್ಯಾಯಾಲಯ ಸ್ವಲ್ಪ ಕಾಲಾವಕಾಶ ನೀಡಿದೆ. 20 ಕೋಟಿ ಬಾಕಿ ಇದೆ ಎಂದು ವಿವರಿಸಿದರು.
ಬೆಂಗಳೂರಿಗೆ ರಾಜ್ಯ ಬಜೆಟ್ ನಲ್ಲಿ ಏನು ನಿರೀಕ್ಷೆ ಮಾಡಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮ್ಮ ಅಧಿಕಾರಿಗಳು ಪ್ರಸ್ತಾವನೆ ನೀಡಿದ್ದಾರೆ. ಉಳಿದ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಕೇಳಬಹುದು. ಸರ್ಕಾರದ ಬಳಿ ಇರುವ ಹಣದ ಮೇಲೆ ಅವರು ತೀರ್ಮಾನ ಮಾಡುತ್ತಾರೆ ಎಂದರು.
ಫೆ.26ರಂದು ಡಿಕೆಶಿ ದೆಹಲಿ ಭೇಟಿ?
ನೀವು ಫೆ.26 ರಂದು ನೀವು ದೆಹಲಿಗೆ ಹೋಗುತ್ತೀರಿ ಎಂದು ಶಾಸಕರ ಇಕ್ಬಾಲ್ ಹುಸೇನ್ ಹೇಳಿದ್ದಾರೆ, ಅವರು ಬಾಯಿಗೆ ಬೀಗ ಹಾಕಿಕೊಂಡರೆ ಒಳ್ಳೆಯದು. ನಾನು ಎಲ್ಲಾ ಇಕ್ಬಾಲ್ ಹುಸೇನ್ ಅವರಿಗೂ ಹೇಳುತ್ತಿದ್ದೇನೆ. ನನಗೆ ಒಳ್ಳೆಯದು ಮಾಡಬೇಕು ಎಂದು ಅಂದುಕೊಂಡಿದ್ದರೆ ಬಾಯಿಗೆ ಬೀಗ ಹಾಕಿಕೊಳ್ಳಲಿ ಎಂದರು. ಇನ್ನೂ ಸಿದ್ದರಾಮಯ್ಯ ಟ್ವಿಟ್ ವಿಚಾರದ ಬಗ್ಗೆ ಮಾತನಾಡದ ಅವರು, ನಾಳೆ ಕಾರವಾರಕ್ಕೆ ನಾವು ಹೋಗುತ್ತಿದ್ದು, ಅಲ್ಲಿ ಅವರ ಜೊತೆ ಮಾತನಾಡಿ ನಿಮಗೆ ಹೇಳುತ್ತೇನೆ ಎಂದರು.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Thalapathy Vijay Assets: ನಾಮಪತ್ರ ಸಲ್ಲಿಸಿದ ವಿಜಯ್, ಇವರ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ತಮಿಳುನಾಡು ಚುನಾವಣೆ 2026: ಟಿವಿಎಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್










Click it and Unblock the Notifications