BBMP Property Tax: ₹700 ಕೋಟಿ ಅಧಿಕ ಆಸ್ತಿ ತೆರಿಗೆ ಸಂಗ್ರಹ: ಗುರಿ ಮುಟ್ಟದ ಪಾಲಿಕೆ!

ಬೆಂಗಳೂರು, ಮಾರ್ಚ್‌ 03: ಬೆಂಗಳೂರಿನಲ್ಲಿನ ಆಸ್ತಿಗಳ ತೆರಿಗೆ ಬಾಕಿ ಉಳಿದಂತೆ ಸಂಗ್ರಹಿಸಿಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP Property Tax) ಓಟಿಎಸ್, ರಿಯಾಯಿತಿ ಸೇರಿದಂತೆ ಅನೇಕ ಕ್ರಮಗಳನ್ನು ಜಾರಿಗೆ ತಂದಿತು. ಅದರ ಫಲವಾಗಿ ವರ್ಷದ ತೆರಿಗೆ ಸಂಗ್ರಹದಲ್ಲಿ ವಾರ್ಷಿಕ ಉದ್ದೇಶಿತ ಗುರಿಯ ಪೈಕಿ ಶೇಕಡಾ 87ರಷ್ಟು ಗುರು ಸಾಧಿಸಿದೆ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಾರ್ಷಿಕ ಆಸ್ತಿ ತೆರಿಗೆ ಗುರಿಯಲ್ಲಿ ಒಟ್ಟು 4,541 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಈ ಮೂಲಕ ಶೇಕಡಾ 87ರಷ್ಟು ಗುರಿ ಸಾಧಿಸಿದ್ದು, 13ರಷ್ಟು ಸಾಧನೆ ಆಗಿಲ್ಲ. ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅತ್ಯಧಿಕ ಹಣ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚುವರಿಯಾಗಿ 700 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

Property Tax BBMP 87 Percent Achieved in Property Tax Collection See Next Year Collection Target

ಸದರಿ ಆರ್ಥಿಕ ವರ್ಷದಲ್ಲಿ ಶೇಕಡಾ 100ರಷ್ಟು ಆಸ್ತಿ ತೆರಿಗೆ ವಸೂಲಿಗೆ ಪಾಲಿಕೆ ಅಧಿಕಾರಿಗಳು ಸಜ್ಜಾಗಿದ್ದಾರೆ. ಅದಕ್ಕಾಗಿ ಸೂಕ್ತ ಪ್ಲಾನ್ ಮಾಡಿಕೊಂಡಿದ್ದಾರೆ. ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಸದ್ಯ ಎಂಟು ವಲಯಗಳಲ್ಲಿ ಆಸ್ತಿ ಸಂಗ್ರಹಿಸಲಾಗಿದೆ. ಇದರಲ್ಲಲಿ ಯಾವ ವಲಯದಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ ಎಂಬ ಮಾಹಿತಿ ನೀಡಲಾಗಿದೆ.

ಈ ವಲಯದಲ್ಲಿ ಗರಿಷ್ಠ ತೆರಿಗೆ ಸಂಗ್ರಹ

ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯವು ಅತೀ ಹೆಚ್ಚು ಆಸ್ತಿ ಮಾಲೀಕರುಗೆ ಬಾಕಿ ಉಳಿಸಿಕೊಳ್ಳದೇ ತೆರಿಗೆ ಪಾವತಿಸಿದ್ದಾರೆ. ಈ ಕಾರಣದಿಂದ ಈ ವಲಯವೊಂದರಲ್ಲಿಯೇ 1,207 ಕೋಟಿ ರೂಪಾಯಿ ಗಳಿಕೆ ಆಗಿದೆ. ಯಲಹಂಕ ವಲಯfಲಗಲಿ ಶೇಕಡಾ 98 ರಷ್ಟು ಅಂದರೆ ಉದ್ದೇಶಿತ ಗುರಿ ಸಾಧಿಸಲಾಗಿದೆ. ಈ ವಲಯದಿಂದ ಬಿಬಿಎಂಪಿ 437 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿ ಆಗಿದೆ.

Property Tax BBMP 87 Percent Achieved in Property Tax Collection See Next Year Collection Target

ಉಳಿದಂತೆ ಬೊಮ್ಮನಹಳ್ಳಿ ಹಾಗೂ ಪಶ್ಚಿಮ ವಲಯಗಳಲ್ಲಿ ಆಸ್ತಿ ಮಾಲೀಕರಿಂದ ಬಾಕಿ ತೆರಿಗೆ ವಸೂಲಿ ಮಾಡುವಲ್ಲಿ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ವಿಫಲರಾಗಿದ್ದಾರೆ. ಇಲ್ಲಿ ನಿರೀಕ್ಷೆಯ ಗುರಿ ತಲುಪಲಾಗಿಲ್ಲ ಎಂದು ತಿಳಿದು ಬಂದಿದೆ. ಮುಂದಿನ 2025-26ರ ಹಣಕಾಸು ವರ್ಷದಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಆಸ್ತಿ ತೆರಿಗೆ ಸಂಗ್ರಹದ ಗುರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಕಳೆದ ಸಾಲಿನಲ್ಲಿ 2024-25 ಒಟ್ಟು 5,210 ಕೋಟಿ ರೂಪಾಯಿ ಆಸ್ತಿ ಸಂಗ್ರಹಿಸುವ ವಾರ್ಷಿಕ ಗುರಿ ಹಾಕಿಕೊಂಡಿತ್ತು. ಆದರೆ 4,541 ಕೋಟಿ ರೂ. ಸಂಗ್ರಹಿಸುವ ಮೂಲಕ ಪೂರ್ತಿ ಗುರಿ ಸಾಧಿಸುವಲ್ಲಿ ವಿಫಲವಾಗಿದೆ. ತೆರಿಗೆ ರಿಯಾಯಿತಿ, ಒನ್‌ ಟೈಮ್ ಪೇಮೆಂಟ್ ಸಿಸ್ಟಿಂ ಜಾರಿಗೆ ತಂದರೂ ವಿಫಲವಾಗಿದೆ.

ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟು 5,600 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಇದನ್ನು ಸಾಧಿಸಲು ಹರಾಜು ಪ್ರಕ್ರಿಯೆ, ಮುಟ್ಟುಗೋಲು ನಂತರ ಕಠಿಣ ಕ್ರಮ ಜಾರಿಗೆ ತರಲು ಚಿಂತನೆ ನಡೆಸಿದೆ. ಮುಂದಿನ ಆರ್ಥಿ ವರ್ಷ ಮುಗಿಯುವ ಮೊದಲು ಆಸ್ತಿ ಬಾಕಿದಾರರಿಂದ ಪಾವತಿ ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+