A-Khata: ಎ.ಖಾತಾಗೆ ಪರಿವರ್ತನೆ: ಆಸ್ತಿಗಳ ಮಾಲೀಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು, ಅಕ್ಟೋಬರ್ 15: ಬೆಂಗಳೂರು ಮಹಾನಗರ ಪಾಲಿಕೆ (BBMP) ವತಿಯಿಂದ ನಗರದ ಆಸ್ತಿ ದಾಖಲೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ "ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿರ್ಮಾಣಗಳಿಗೆ ಎ-ಖಾತಾ ನೀಡುವ' ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.

ಸರ್ಕಾರದ ಮಾರ್ಗದರ್ಶನದಲ್ಲಿ ಈ ಯೋಜನೆಯು ಬೆಂಗಳೂರಿನ ಲಕ್ಷಾಂತರ ನಾಗರಿಕರಿಗೆ ತಮ್ಮ ಆಸ್ತಿಗಳಿಗೆ ಕಾನೂನಾತ್ಮಕ ಸ್ಪಷ್ಟತೆ ಮತ್ತು ಮಾನ್ಯತೆ ಒದಗಿಸುವ ಪ್ರಮುಖ ಉದ್ದೇಶ ಹೊಂದಿದೆ. ಈ ಕ್ರಮವು ಅಕ್ರಮ ಬಿ-ಖಾತಾ ಆಸ್ತಿಗಳನ್ನು ಕಾನೂನು ಚೌಕಟ್ಟಿಗೆ ತರುವ ಸರ್ಕಾರದ ದೀರ್ಘಕಾಲದ ಪ್ರಯತ್ನದ ಭಾಗವಾಗಿದೆ. ಈಗಾಗಲೇ ಇ-ಖಾತಾ ಅಭಿಯಾನಗಳು ಸಾಕಷ್ಟು ನಡೆದಿವೆ. ಇದೀಗ ಬಿ-ಖಾತಾ ದಿಂದ ಎ-ಖಾತಾ ಪರಿವರ್ತನೆಗೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲಾಗುತ್ತದೆ.

Property Revolution GBA Launches B-Khata to A-Khata Conversion Scheme Online Enrollment

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ: ಪಾರದರ್ಶಕತೆಗೆ ಒತ್ತು

ಈ ಯೋಜನೆಯಲ್ಲಿ ಬಿ-ಖಾತಾ ಆಸ್ತಿಗಳ ಪರಿವರ್ತನೆ ಮತ್ತು ಹೊಸ ಕಟ್ಟಡಗಳಿಗೆ ಎ-ಖಾತಾ ಪಟ್ಟಿ ನೋಂದಣಿಗಾಗಿ ಸಂಪೂರ್ಣ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ನಾಗರಿಕರು ಜಿಬಿಎ ಅಧಿಕೃತ ಜಾಲತಾಣಗಳಾದ bbmp.karnataka.gov.in/BtoAKhata ಮತ್ತು bpas.bbmp.gov.in ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಈ ಆನ್‌ಲೈನ್ ವ್ಯವಸ್ಥೆಯು ಕೇವಲ ₹2000ಗಳ ನಿಗದಿತ ಶುಲ್ಕದೊಂದಿಗೆ ಕಾರ್ಯನಿರ್ವಹಿಸಲಿದೆ.ಎಲ್ಲಾ ಅರ್ಜಿಗಳ ಪಾರದರ್ಶಕ ಪರಿಶೀಲನೆ ಮತ್ತು ಡಿಜಿಟಲ್ ದಾಖಲೆಗಳ ಅಪ್‌ಲೋಡ್‌ಗೆ ಅನುವು ಮಾಡಿಕೊಡುತ್ತದೆ. "ಒಂದು ಕ್ಲಿಕ್‌ನಲ್ಲಿ ನೋಂದಣಿ" ಎಂಬ ಸರಳೀಕೃತ ವ್ಯವಸ್ಥೆಯ ಮೂಲಕ ಜನರಿಗೆ ಯಾವುದೇ ತೊಂದರೆಯಾಗದಂತೆ ಪ್ರಕ್ರಿಯೆಗೊಳಿಸುವುದಕ್ಕೆ ಆದ್ಯತೆ ನೀಡಲಾಗಿದೆ.

ಪರಿವರ್ತನೆಯಿಂದ ಲಾಭ: ಆಸ್ತಿ ಸ್ವಾಮ್ಯಕ್ಕೆ ಭದ್ರತೆ

ಈ ಯೋಜನೆಯ ಪ್ರಮುಖ ಪ್ರಯೋಜನವೆಂದರೆ ಬಿ-ಖಾತಾ ಮಾಲೀಕರಿಗೆ ಸ್ಪಷ್ಟ ಮತ್ತು ಕಾನೂನುಬದ್ಧವಾದ ಸ್ವಾಮ್ಯ ಹಕ್ಕುಗಳು ಲಭ್ಯವಾಗುವುದು. ಎ-ಖಾತಾ ಮಾನ್ಯತೆ ಪಡೆದ ನಂತರ, ಆಸ್ತಿ ಮಾಲೀಕರು ಬ್ಯಾಂಕ್ ಸಾಲ ಪಡೆಯಲು, ಕಾನೂನು ಬದ್ಧವಾಗಿ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಖರೀದಿಗೆ ಮತ್ತು ಕಟ್ಟಡ ನಿರ್ಮಾಣಕ್ಕೆ ಸುಲಭವಾಗಿ ಅನುಮತಿ ಪಡೆಯಲು ಸಾಧ್ಯವಾಗುತ್ತದೆ. ಇದರೊಂದಿಗೆ, ನಗರ ಯೋಜನೆ ಮತ್ತು ಆಸ್ತಿ ತೆರಿಗೆ ನಿರ್ವಹಣೆ ಸುಧಾರಿಸುವ ಮೂಲಕ ಬೆಂಗಳೂರಿನ ಆರ್ಥಿಕ ಸ್ಥಿತಿ ಮತ್ತು ಅಭಿವೃದ್ಧಿಗೆ ದೊಡ್ಡ ಬಲ ಸಿಗಲಿದೆ ಎಂದು ಸರ್ಕಾರದ ಉದ್ದೇಶವಾಗಿದೆ.

ಸಿಎಂ ಸಿದ್ದರಾಮಯ್ಯ ಅವರು, ನಾಗರಿಕರ ಸೌಕರ್ಯಕ್ಕಾಗಿ ಸರ್ಕಾರ ಪ್ರಜಾಪ್ರಭುತ್ವದ ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಇದು ಬೆಂಗಳೂರಿನ ಆಸ್ತಿ ನಿರ್ವಹಣೆಯಲ್ಲಿ ನೂತನ ಅಧ್ಯಾಯ ಎಂದು ತಿಳಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರನ್ನು ವಿಶ್ವದ ಮಟ್ಟದ ನಗರವನ್ನಾಗಿ ರೂಪಿಸಲು ಪಾರದರ್ಶಕ ಆಸ್ತಿ ದಾಖಲೆ ವ್ಯವಸ್ಥೆ ಅತ್ಯಗತ್ಯ. ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಈ ಹಿಂದೆಯೇ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+