Property: ಬೆಂಗಳೂರಿನಲ್ಲಿ ಭೂಮಿ, ಮನೆ ಮಾರಾಟ ಹೆಚ್ಚಳ: ಖರೀದಿಗೆ ಬಂಪರ್ ಚ್ಯಾನ್ಸ್!
Property: ಬೆಂಗಳೂರಿನಲ್ಲಿ ಭೂಮಿಗೆ ಅಕ್ಷರಶಃ ಚಿನ್ನದ ಬೆಲೆ ಇದೆ. ಇದೀಗ ಭೂಮಿಗೆ ಬಂಗಾರದ ಬೆಲೆ ಬರುತ್ತಿರುವಾಗಲೇ ಭೂಮಿ ಹಾಗೂ ಮನೆಗಳ ಮಾರಾಟ ಜೋರಾಗಿ ನಡೆಯುತ್ತಿವೆ. ಮನೆ ಮತ್ತು ಭೂಮಿಗಳ ಮಾರಾಟದಿಂದಾಗಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರಲಿದೆ ಎಂದೂ ಅಂದಾಜಿಸಲಾಗುತ್ತಿದೆ. ಅಲ್ಲದೆ ಭೂಮಿ ಬೆಲೆ ಇಳಿಕೆಯಾಗಲಿದೆ ಎಂದೂ ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಹಲವು ಹೊಸ ಪ್ರಾಜೆಕ್ಟ್‌ಗಳನ್ನು ಹಾಕಿಕೊಳ್ಳಲಾಗಿದೆ. ಮೆಟ್ರೋ ವಿಸ್ತೀರ್ಣ ಹಾಗೂ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಜಾರಿಯಾಗುತ್ತಿವೆ. ಇದರಿಂದ ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಬೆಲೆ ಏರಿಕೆ ಕಾಣುತ್ತಲ್ಲೇ ಇದೆ. ಇದರ ನಡುವೆ ಮಾರಾಟ ಜೋರಾಗುತ್ತಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಬಗ್ಗೆ ಚರ್ಚೆ ಜೋರಾಗಿದೆ. ನಗರದಲ್ಲಿ ಆಸ್ತಿಗಳ ಬೆಲೆ ಗಗನಮುಖಿಯಾಗಿದೆ. ಆಸ್ತಿಗೆ ಒಳ್ಳೆಯ ಬೆಲೆ ಬರುತ್ತಿರುವಾಗಲೇ ಮಾರಾಟ ಜೋರಾಗಿದೆ. ಇದಕ್ಕೆ ಮುಖ್ಯ ಕಾರಣವಾಗುತ್ತಿರುವುದು ಎನ್‌ಆರ್‌ಐ (ಅನಿವಾಸಿ ಭಾರತೀಯರು) ಹಾಗೂ ಬದಲಾದ ಪರಿಸ್ಥಿತಿ. ಬೆಂಗಳೂರಿನಲ್ಲಿ ಜಾಗ ಮಾರಾಟ ಹೆಚ್ಚಾಗುತ್ತಿರುವುದರಿಂದ ರಿಯಲ್ ಎಸ್ಟೇಟ್ ಕುಸಿತಕ್ಕೂ ಇದು ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಎನ್‌ಆರ್‌ಐಗಳ ಹೂಡಿಕೆ ಹೆಚ್ಚಾಗಿದೆ. ಆದರೆ ಅಮೆರಿಕದಲ್ಲಿ ಆರ್ಥಿಕ ಕುಸಿತ ಹಾಗೂ ಹೊಸ ಆರ್ಥಿಕ ನೀತಿಯಿಂದ ತೀವ್ರ ಸಂಕಷ್ಟ ಎದುರಾಗಿದ್ದು. ಬೆಂಗಳೂರಿನ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಬೆಂಗಳೂರಿನಲ್ಲಿ ವಸತಿ ಬೇಡಿಕೆಗಳು ಹೆಚ್ಚಾಗುತ್ತಿವೆ.

ಅಮೆರಿಕ ಆರ್ಥಿಕ ನೀತಿ ತಂದ ಸಂಕಷ್ಟ: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೇಲೆ ಹೊಸ ಆರ್ಥಿಕ ನೀತಿಯನ್ನು ಜಾರಿ ಮಾಡಿದ್ದಾರೆ. ಈ ಹೊಸ ಆರ್ಥಿಕನೀತಿಯಿಂದ ಸಂಕಷ್ಟ ಎದುರಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೇರಿವೆ. ಆದರೆ, ಅಮೆರಿಕದಲ್ಲಿ ಜನ ಕೆಲಸ ಕಳೆದುಕೊಳ್ಳುವುದು ಹಾಗೂ ಆರ್ಥಿಕ ಸಂಕಷ್ಟದಂತಹ ಆತಂಕಕ್ಕೆ ಒಳಗಾಗಿದ್ದಾರೆ. ಎನ್ಆರ್‌ಐಗಳು ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಖರೀದಿ ಮಾಡಿದ್ದು. ಇದೀಗ ಭೂಮಿ ಮಾರಾಟಕ್ಕೆ ಮುಂದಾಗುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಮೇಲೆ ವಿವಿಧ ದೇಶಗಳ ಮೇಲೆ ವಿಪರೀತ ಸುಂಕವನ್ನು ವಿಧಿಸುತ್ತಿದ್ದಾರೆ. ಅಲ್ಲದೆ ಸರ್ಕಾರಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ವಿಪರೀತ ತೆರಿಗೆ ವಿಧಿಸಲಾಗುತ್ತಿದೆ. ಇದೆಲ್ಲವೂ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಎನ್‌ಆರ್‌ಐಗಳಿಗೆ ಸಂಕಷ್ಟ ಎದುರಾಗಿದೆ. ಕೆಲವರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದ್ದರೆ ಇನ್ನೂ ಕೆಲವರಿಗೆ ಹಣದುಬ್ಬರದ ಹೊಡೆತ ಬಿದ್ದಿದೆ.
ಬೆಂಗಳೂರಿನಲ್ಲಿ ಕೋವಿಡ್‌ನ ನಂತರ ಆಸ್ತಿಗಳ ಮಾರಾಟ ಹಾಗೂ ಖರೀದಿ ಜೋರಾಗಿದೆ. ಇನ್ನು ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ಸಹ ಭೂಮಿ ಖರೀದಿಗೆ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದರು. ಆದರೆ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹಾಗೂ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಕಾರಣದಿಂದ ಕೆಲವು ಕಂಪನಿಗಳು ಸ್ಥಳಾಂತರದ ಪ್ಲ್ಯಾನ್ ಮಾಡಿಕೊಳ್ಳುತ್ತಿವೆ. ಇದರಿಂದ ಅಲ್ಲಿನ ಉದ್ಯೋಗಿಗಳು ಸಹ ಭೂಮಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರಬಹುದು ಎಂದೂ ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಭೂಮಿ ಮಾರಾಟ ಪ್ರಕ್ರಿಯೆ ಜೋರಾಗಿದೆ. ಈ ರೀತಿ ಇರುವಾಗಲೇ ಇದು ಕುಸಿಯುವ ಲಕ್ಷಣಗಳು ಸಹ ಕಾಣಿಸುತ್ತಿವೆ ಎಂದು ಹೇಳಲಾಗಿದೆ. ನಗರದ ಹೊರ ವಲಯದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿರುವಾಗಲೇ ಒಳಭಾಗದಲ್ಲಿ ಭೂಮಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈಗ ಭೂಮಿ ಮತ್ತು ಜಾಗ ಖರೀದಿಗೆ ಒಳ್ಳೆಯ ಸಮಯ ಎಂದೇ ಹೇಳಲಾಗುತ್ತಿದೆ.












Click it and Unblock the Notifications