ಜಯನಗರ : ಮಹಿಳಾ ಗೃಹಾಲಂಕಾರಪ್ರಿಯರಿಗೊಂದು ಆಹ್ವಾನ!

ಬೆಂಗಳೂರು, ಜೂನ್ 21: ಪ್ರೊಜೆಕ್ಟ್ ಈವ್ ತನ್ನ 'ದಿ ಶಿ ಸೆಶನ್ಸ್' ಡ್ರೀಮ್ ಕ್ಯಾಚರ್ ಕಾರ್ಯಾಗಾರವನ್ನು ಜೂನ್ 23, 2018ರಂದು ತನ್ನ ಜಯನಗರದ ಮಳಿಗೆಯಲ್ಲಿ ಹಮ್ಮಿಕೊಂಡಿದೆ.

ಬೆಂಗಳೂರಿನ ಎಲ್ಲಾ ಮಹಿಳಾ ಗೃಹಾಲಂಕಾರಪ್ರಿಯರಿಗೊಂದು ಆಹ್ವಾನ! ತಜ್ಞರು ನಡೆಸಿಕೊಡುವ ಡ್ರೀಮ್ ಕ್ಯಾಚರ್ ಆರ್ನ್‍ಮೆಂಟ್ ತಯಾರಿಸುವ ಕಾರ್ಯಾಗಾರದಲ್ಲಿ ನೀವೂ ಪಾಲ್ಗೊಳ್ಳಿ. ನಿಮ್ಮ ಒಳಾಂಗಣದ ಅಲಂಕಾರಕ್ಕೆ ಕಣ್ಮನ ಸೆಳೆಯುವ ಡ್ರೀಮ್ ಕ್ಯಾಚರ್ ನೊಂದಿಗೆ ಒಂದು ಅದ್ಭುತವಾದ ಆಭರಣವೊಂದನ್ನು ಸೇರಿಸಿ!

ಡ್ರೀಮ್ ಕ್ಯಾಚರ್ ನಿಮ್ಮ ಮನೆಯ ಅಲಂಕಾರ ಹೆಚ್ಚಿಸುವುದಷ್ಟೇ ಅಲ್ಲ, ನಿಮ್ಮ ಕೆಟ್ಟ ಕನಸುಗಳು ಮತ್ತು ಋಣಾತ್ಮಕ ಶಕ್ತಿಯನ್ನು ತಡೆಯುವಂತಹ ಮ್ಯಾಜಿಕ್ ಕೆಲಸವನ್ನು ಮಾಡುತ್ತದೆ ಎನ್ನುತ್ತಾರೆ ತಜ್ಞರು.

Project Eve The She Sessions Dreamcatcher Workshop Jayanagar

ಕಾರ್ಯಾಗಾರದಲ್ಲಿ, ಕೆಟ್ಟ ಕನಸುಗಳನ್ನು ಹಿಡಿದಿಡುವ ಮಾಂತ್ರಿಕ ವೆಬ್‍ಗಳ ನೇಯ್ಗೆಯ ಕಲೆಯನ್ನು ಕಲಿಯಿರಿ.

ನಿಮ್ಮ ಫೇವರಿಟ್ ಡ್ರೀಮ್ ಕ್ಯಾಚರ್ ಅನ್ನು ನೇಯ್ಗೆ ಮಾಡಲು ಆಸಕ್ತಿಯುಳ್ಳವರು ಪ್ರೊಜೆಕ್ಟ್ ಈವ್‍ಗೆ ಭೇಟಿ ನೀಡಿ!

ದಿನಾಂಕ: 23ನೇ ಜೂನ್, 2018, ಶನಿವಾರ
ಸಮಯ: ಸಂಜೆ 3.
ಸ್ಥಳ : ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು

'ಪ್ರಾಜೆಕ್ಟ್ ಈವ್ ಬಗ್ಗೆ': ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.

ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25 ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು! ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ.

ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‍ಗಳು, ಚಾರ್ಜಿಂಗ್ ಡಾಕೆಟ್‍ಗಳು ಮತ್ತು ಎಕ್ಸ್‍ಪ್ರೆಸ್ ಚೆಕ್‍ ಔಟ್‍ನ ಸೌಲಭ್ಯಗಳೂ ಇಲ್ಲಿ ಲಭ್ಯ!

ಪ್ರಾಜೆಕ್ಟ್ ಈವ್‍ನ ಸ್ವಂತ ಬ್ರ್ಯಾಂಡ್‍ಗಳ ಜೊತೆಗೆ ಈ ಮಳಿಗೆಯಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಜಗತ್ತಿನ ಕಣ್ಣು ಕೋರೈಸುವ ಉಡುಪುಗಳು ಇಲ್ಲಿ ಸದಾ ಸಿಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+