ನಿನ್ನೆ ರಾತ್ರಿ ಯಶವಂತಪುರ ರೈಲ್ವೆನಿಲ್ದಾಣದಲ್ಲಿ ಮೋದಿ ಅಭಿಮಾನಿಗಳು ಮಾಡಿದ್ದೇನು?

Recommended Video

      ನಿನ್ನೆ ನಡೆದ ಘಟನೆಗೆ ಬೆಚ್ಚಿ ಬಿದ್ದ ಮಂದಿ: Lok Sabha Elections 2019 | Oneindia kannada

      ಬೆಂಗಳೂರು, ಏ 23: ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಇದುವರೆಗಿನ ಮಾಹಿತಿಯ ಪ್ರಕಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿರುಬಿಸಿಲಿನ ನಡುವೆಯೂ ಜನ ಮತಗಟ್ಟೆಯ ಕಡೆ ಮುಖಮಾಡಿದ್ದಾರೆ.

      ರಾಜ್ಯದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯುತ್ತಿದೆ. ತಮ್ಮತಮ್ಮ ಮತ ಚಲಾಯಿಸಲು ರಾಜಧಾನಿ ಬೆಂಗಳೂರಿನಿಂದ ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಕಡೆ ಹೋಗಲು, ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಜನಸಾಗರವೇ ಹರಿದಿತ್ತು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಕೆಲವೊಂದು ಟ್ರೈನುಗಳು ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ರೈಲ್ವೆನಿಲ್ದಾಣಕ್ಕೆ ಆಗಮಿಸಿದ್ದವು. ಆ ವೇಳೆ, ಪ್ರಯಾಣಿಕರು ಮೋದಿ..ಮೋದಿ.. ಎನ್ನುತ್ತಾ ಯಶವಂತಪುರ ರೈಲ್ವೆನಿಲ್ದಾಣವನ್ನು ಸಂಪೂರ್ಣ ಮೋದಿಮಯ ಮಾಡಿದರು.

      ಮೋದಿಪರ ಘೋಷಣೆಯ ವಿಡಿಯೋವನ್ನು ಪ್ರಯಾಣಿಕರು ತಮ್ಮತಮ್ಮ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಮತ್ತು ಅದು ವೈರಲ್ ಆಗುತ್ತಿದೆ ಕೂಡಾ..

      Pro Modi slogan in Yeshwanthpur railway station on April 22

      ಇದು ನಿನ್ನೆ ಸಂಜೆ ಯಶವಂತಪುರ ರೈಲುನಿಲ್ದಾಣದಲ್ಲಿ ಕಂಡುಬಂದ ದೃಶ್ಯ. ದೇಶದೆಲ್ಲೆಡೆ #ಮತ್ತೊಮ್ಮೆಮೋದಿ ಅಲೆ ಎದ್ದಿರುವುದಕ್ಕೆ ಇದೇ ಸಾಕ್ಷಿ. ಇವರೆಲ್ಲರೂ ಮತ ಚಲಾಯಿಸಲು ರಜೆ ಹಾಕಿ ಬೆಂಗಳೂರಿನಿಂದ ತವರೂರಿಗೆ ತೆರಳುತ್ತಿದ್ದಾರೆ. ಉತ್ತರ ಕರ್ನಾಟಕದ ಜನತೆ ಇವರಿಂದ ಸ್ಪೂರ್ತಿ ಪಡೆದು ಅತಿಹೆಚ್ಚು ಸಂಖ್ಯೆಯಲ್ಲಿ ಮತದಾನಮಾಡಬೇಕಾಗಿ ಮನವಿಮಾಡುತ್ತೇನೆ ಎಂದು ಬಿಜೆಪಿ ಮುಖಂಡ ಆರ್ ಅಶೋಕ್ ಕೂಡಾ ಆ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

      ನಿನ್ನೆ ರಾತ್ರಿ ಬೆಂಗಳೂರಿನ ಯಶವಂತಪುರ ರೈಲ್ವೆ ಸ್ಟೇಷನ್ ನಲ್ಲಿನ ಜನಜಂಗುಳಿ, ಜನರ ಮುಖದಲ್ಲಿ ಮತದಾನ ಮಾಡಲು ಹೊರಟ ಉತ್ಸಾಹ, ಹೆಮ್ಮೆ ನೋಡಿದರೆ ತಿಳಿಯುತ್ತದೆ ನಿಜವಾದ ಮೋದಿ ಮೋಡಿ ಏನು ಎನ್ನುವುದು.ನಮ್ಮ ಮೋದಿ ನಮ್ಮ ಹೆಮ್ಮೆ ಎಂದು ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ಕೂಡಾ ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+