Bengaluru Kannada: ಬೆಂಗಳೂರಲ್ಲಿ ಕನ್ನಡವನ್ನು ಅತ್ಯಂತ ಕೀಳಾಗಿ ಕಾಣುವುದರಲ್ಲಿ ಇವರೇ ಮೊದಲಿಗರು: ಗೀತ ರಚನೆಕಾರ ಕವಿರಾಜ್
ಬೆಂಗಳೂರಿನಲ್ಲಿ ಕನ್ನಡ ಭಾಷೆ ವಿಚಾರವಾಗಿ ಮಹತ್ವದ ಗೀತ ರಚನೆಕಾರರಾದ ಕವಿರಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಲ್ಲಿ ಇವತ್ತು ಕನ್ನಡವನ್ನು ಅತ್ಯಂತ ಕೀಳಾಗಿ ಕಾಣುವುದರಲ್ಲಿ ಮೊದಲಿಗರು ಖಾಸಗಿ ಶಾಲಾ-ಕಾಲೇಜುಗಳು. ಅದರಿಂದಾಗಿ ಮಕ್ಕಳ ಮನಸ್ಸಿನಲ್ಲೇ, ಆರಂಭಿಕ ಹಂತದಲ್ಲೇ ಕನ್ನಡದ ಬಗ್ಗೆ ಕೀಳರಿಮೆ ಬೆಳೆಸುತ್ತಿದ್ದಾರೆ. ಅವರ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ, ಕನ್ನಡ ನಾಡಲ್ಲೇ ಕನ್ನಡ ಮಾತನಾಡಿದರೆ ದಂಡ ಹಾಕುವಷ್ಟರ ಮಟ್ಟಿಗೆ ಇವರ ದುರಹಂಕಾರವನ್ನು ಬೆಳೆಯಲು ಬಿಟ್ಟಿದ್ದೇವೆಂದರೆ ನಾವಿನ್ನೆಂತಾ ಅಭಿಮಾನ ಶೂನ್ಯರಿರಬೇಕು. ಇವರನ್ನು ರಿಪೇರಿ ಮಾಡಲಾಗದೇ ಹೋದರೆ ನಮ್ಮ ಹೋರಾಟಗಳೆಲ್ಲ ವ್ಯರ್ಥ ಅರಣ್ಯ ರೋಧನವಷ್ಟೇ ಎಂದು ಅವರು ಹೇಳಿದ್ದಾರೆ. ಇದಕ್ಕೆ ಹಲವು ಕನ್ನಡಿಗರು ಸಮ್ಮತಿಸಿದ್ದಾರೆ.

ಬರಹಗಾರ ವಲ್ಲೀಶ್ ಕುಮಾರ್ ಎಸ್ ಅವರು, ಶಾಲಾ ಮಟ್ಟದಲ್ಲಿ ಕನ್ನಡ ಒಂದು ವಿಷಯವಾಗಿ ಕಲಿಕೆ ಕಡ್ಡಾಯವಾಗಿ ಆಗಿಬಿಟ್ಟರೆ ಅನಿಯಂತ್ರಿತ ವಲಸೆಯಿಂದ ಆಗುವ ಎಷ್ಟೋ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಾಂತೇಶ್ ಚಿನ್ನ ಎನ್ನುವವರು ಇದಕ್ಕೆಲ್ಲ ಮೂಲ ಮತ್ತು ನಿಖರವಾದ ಉತ್ತರವೇನೆಂದರೆ ಖಾಸಗಿ ಶಾಲೆಗಳು ನಡೆಸುವವರನ್ನೇ ಗುರಿಯಾಗಿಸಬೇಕೇ ಹೊರತು, ಅಲ್ಲಿನ ಕೆಲವೇ ಕೆಲವರನ್ನು ಶಿಕ್ಷೆ ನೀಡಿದರೆ ಇದೆಂದು ಬಗೆಹರಿಯದ ಕಾರ್ಯ.. ಅದಕ್ಕೆ ಹೋರಾಟಗಳು ಆಗುತ್ತಲೇ ಇರುತ್ತೆ. ಹೋರಾಟ ಬದಲು ಕಟ್ಟು ನಿಟ್ಟಾಗಿ, ಸಂಬಂಧಪಟ್ಟ ಅದರ ಮಾಲೀಕರಿಗೆ ಶಿಕ್ಷೆ ಆಗಬೇಕು ಹಾಗೂ ಜೊತೆಗೆ ದಂಡವು ವಿಧಿಸಿ, ಸರ್ಕಾರಿ ಶಾಲೆಗಳಿಗೆ ಒತ್ತು ಕೊಡುವಂತೆ ಮಾಡಬೇಕು.
ಬಹುಶಃ ನಾವು ಕನ್ನಡದ ಅಭಿಮಾನಿಗಳು, ತುಂಬಾ ಸ್ವಾಭಿಮಾನಿಗಳು, ನಮ್ಮ ಭಾಷೆ ಕಷ್ಟದಲ್ಲಿ ಇದೆ ಅಂತ ಅನ್ಕೊಂಡು ರಸ್ತೆಗೆ ಇಳಿಯುತ್ತೇವೆ ಹೊರತು, ಸರಿಯಾದ ನ್ಯಾಯ ಸಿಗುವುದು ಕಮ್ಮಿಯೇ. ಆದರೆ ಕೆಲ ರಾಜಕಾರಣಿಗಳು ಮಾತ್ರ ತಮ್ಮ ಸ್ವಾರ್ಥಕ್ಕೆ ಅಂತ ಕನ್ನಡದ ಉಳಿವಿಗಾಗಿ ನಾವೂ ಇರುತ್ತೇವೆ ಎನ್ನುವ ಸುಳ್ಳು ಆಶ್ವಾಸನೆ ಕೊಡುತ್ತಲೇ ಇದ್ದಾರೆ. ಹಂತ ಹಂತವಾಗಿ ಕನ್ನಡವನ್ನು ಮೂಲೆಗುಂಪು ಆಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ನೆಟ್ಟಿಗರು ಇಷ್ಟೇ ಅಲ್ಲ ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವದಲ್ಲಿ ಅನವಶ್ಯಕವಾಗಿ ಪರಭಾಷಾ ಚಿತ್ರಗೀತೆಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುವುದು, ಇದು ಅತ್ಯಂತ ನೋವಿನ ಸಂಗತಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ವಿಶ್ವನಾಥ ಭಂಡಾರಿ ಎನ್ನುವವರು ಇದಕ್ಕೆ ಪ್ರಥಮ ಪರಿಹಾರವೆಂದರೆ, ಎಲ್ಲಾ ಖಾಸಗಿ ಶಾಲೆಗಳನ್ನು ಸರ್ಕಾರವೇ ವಹಿಸಿಕೊಂಡು ಕನ್ನಡ ಭಾಷೆಯನ್ನು ಕಡ್ಡಾಯ ಪ್ರಥಮ ಭಾಷೆಯಾಗಿ ಹಾಗೂ 1ನೇ ತರಗತಿಯಿಂದ ಕಾಲೇಜು ಶಿಕ್ಷಣದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು. ಆಗ ಎಲ್ಲರಿಗೂ ಕನ್ನಡ ಕಲಿಸಿದಂತಾಗುತ್ತದೆ ಹಾಗೂ ಯಾವುದೇ ಭೇದ ಭಾವವಿಲ್ಲದೆ ಎಲ್ಲರಿಗೂ ಉಚಿತ ಶಿಕ್ಷಣ ದೊರೆಯುತ್ತದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳಿನಿಂದ ಆಂಗ್ಲ ಶಾಲೆಗಳಲ್ಲಿ ನಡೆಯುತ್ತಿರುವ ಅದ್ದೂರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಹಿಂದಿ ಹಾಡುಗಳದ್ದೇ ಅಬ್ಬರ. ಬಾಯಿ ಮಾತಿಗೆ ನಾವೂ ಕನ್ನಡಿಗರೇ ಎನ್ನುವ ಮಾಲೀಕರ ದುರಾಸೆ ಮತ್ತು ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ. ಪ್ರಾಂಶುಪಾಲರಿಗೆ ಕನ್ನಡ ಪ್ರೇಮ ಇಲ್ಲದಿದ್ದರೆ ಶಾಲೆಯಲ್ಲಿ ಅಥವಾ ಶಾಲಾ ಕಾರ್ಯಕ್ರಮದಲ್ಲಿ ಕನ್ನಡ ನಿರೀಕ್ಷಿಸುವುದು ನಮ್ಮ ಮೂರ್ಖತನ ಎಂದು ಪ್ರಶಾಂತ್ ಮರೂರು ಎನ್ನುವವರು ಅಭಿಪ್ರಾಯಪಟ್ಟಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು











Click it and Unblock the Notifications