• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಖಾಸಗಿ ಸಹಭಾಗಿತ್ವದಲ್ಲಿ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್‌ಗಳ ಅಭಿವೃದ್ಧಿ

|

ಬೆಂಗಳೂರು, ಮಾರ್ಚ್ 23: ಇಂದಿರಾ ನಗರದ ಬಿಡಿಎ ಕಾಂಪ್ಲೆಕ್ಸ್ ಪುನಶ್ಚೇತನ ಯೋಜನೆಯನ್ನು ಎಂಬಾಸಿ ಗ್ರೂಪ್ ಹಾಗೂ ಮೇವರಿಕ್ ಹೋಲ್ಡಿಂಗ್ಸ್ ಸಹಯೋಗದಲ್ಲಿ ಕೈಗೆತ್ತಿಕೊಳ್ಳಲು ಬಿಡಿಎ ಮುಂದಾಗಿದೆ.

ಈಗಾಗಲೇ ಮೇವರಿಕ್ ಇನ್‌ಫ್ರಾ ಸ್ಟ್ರಕ್ಚರ್ ಡೆವಲಪರ್ ಬೆಂಗಳೂರಿನ ಹಲವಾರು ಯೋಜನೆಗಳಲ್ಲಿ ಬಿಡಿಎ ಸಹಯೋಗದೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದು ಒಟ್ಟಾರೆ 7 ಶಾಂಪಿಂಗ್ ಕಾಂಪ್ಲೆಕ್ಸ್ ನ್ನು ಪುನಶ್ಚೇತನಗೊಳಿಸುವ ಯೋಜನೆಯಲ್ಲಿ ಭಾಗಿಯಾಗಿದೆ.

ಕೆಂಪೇಗೌಡ ಬಡಾವಣೆ ಸೈಟ್: ವಿಕಲಚೇತನರಿಗೆ ಕೋಟಾ ಹೆಚ್ಚಳ

ಕೋರಮಂಗಲ, ಸದಾಶಿವನಗರ, ಆರ್‌ಟಿನಗರ, ಎಚ್‌.ಎಸ್‌.ಆರ್. ಲೇಔಟ್, ವಿಜಯನಗರ ಹಾಗೂ ಆಸ್ಟಿನ್ ಟೌನ್, ಯೋಜನೆಗಳು, ಈ ವ್ಯಾಪ್ತಿಗೆ ಸೇರಿವೆ.

Private firms to rebuild 7 BDA complexes

ಎಚ್‌ ಎಸ್ ಆರ್ ಲೇಔಟ್‌ ನ 13 ವರ್ಷದ ಹಳೆಯ ಶಾಪಿಂಗ್ ಕಾಂಪ್ಲೆಕ್ಸ್ ನ್ನು ಅಭಿವೃದ್ಧಿಪಡಿಸುವ ಕಾಮಗಾರಿಯಲ್ಲೂ ಮೇವರಿಕ್ ಇನ್‌ಫ್ರಾ ಸ್ಟ್ರಕ್ಚರ್ ಜಂಟಿ ಸಹಯೋಗದಲ್ಲಿ ಪಾಲ್ಗೊಂಡಿದೆ.

ಈ ಎಲ್ಲಾ 11 ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಅಭಿವೃದ್ಧಿಪಡಿಸಿದ ನಂತರ ಶಾಪಿಂಗ್ ಕಾಂಪ್ಲೆಕ್ಸ್ ಗಳಿಂದ ಸದ್ಯ
ಬರುತ್ತಿರುವ 3.5 ಕೋಟಿ ರೂಗಳ ಆದಾಯವು 38.89 ಕೋಟಿ ರೂ ಹೆಚ್ಚಳವಾಗಲಿದೆ ಎಂದು ಬಿಡಿ ನಿರೀಕ್ಷಿಸಿದೆ. 7 ಶಾಪಿಂಗ್ ಕಾಂಪ್ಲೆಕ್ಸ್ ಗಳ ನಿರ್ವಹಣೆಗಾಗಿ ಬಿಡಿಎ 5 ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವ್ಯಯ ಮಾಡುತ್ತಿದ್ದು ಆದಾಯ ಮಾತ್ರ 3.57 ಕೋಟಿ ರೂಗಳು ಮಾತ್ರವಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಹಿನ್ನೆಲೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಪುನರ್ ಅಭಿವೃದ್ಧಿಪಡಿಸಿ ಗ್ರಾಹಕರಿಗೆ ಹೆಚ್ಚು ಇಷ್ಟವಾಗುವಂತೆ
ಮಾರ್ಪಾಟು ಮಾಡಿದರೆ ಆದಾಯವೂ 10 ಪಟ್ಟು ಹೆಚ್ಚಾಗಲಿದೆ ಎಂಬ ನಿರೀಕ್ಷೆ ಬಿಡಿಎ ಮುಂದಿದೆ.

ನಗರದ ಪ್ರಮುಖ ಸ್ಥಳಗಳಲ್ಲಿರುವ ಈ ಶಾಪಿಂಗ್ ಕಾಂಪ್ಲೆಕ್ಸ್ ಗಳಿಂದ ಹೆಚ್ಚು ಆದಾಯ ಗಳಿಸಿದರೆ ಬಿಡಿಎಗೂ ಹೊರೆ ತಪ್ಪುತ್ತದೆ. ಅಲ್ಲದೆ ಆದಾಯ ವೃದ್ಧಿಯಾಗುತ್ತದೆ ಎನ್ನುವುದ ಬಿಡಿಎ ಉದ್ದೇಶ ಅದಕ್ಕಾಗಿ ಖಾಸಗಿ ಕಂಪನಿಯೊಂದಿಗೆ ಕೈಜೋಡಿಸಿದೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಏಳು ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಪುನಃ ಅಭಿವೃದ್ಧಿಪಡಿಸಿದ ನಂತರ ಮುಂದಿನ 30 ವರ್ಷಗಳವರೆಗೆ ಲೀಸ್ ಆಧಾರದ ಮೇಲೆ ಖಾಸಗಿಯವರಿಗೆ ನೀಡುವುದು ಬಿಡಿಎ ಉದ್ದೇಶವಾಗಿದೆ.

ಶಾಪಿಂಗ್ ಕಾಂಪ್ಲೆಕ್ಸ್ ಮಾಲಿಕತ್ವ ಬಿಡಿಎದಾಗಿದ್ದರೂ 30 ವರ್ಷಗಳ ಕಾಲ ಅದರ ಸಂಪೂರ್ಣ ಹೊಣೆಗಾರಿಗೆ ಖಾಸಗಿ ಪಾಲಾಗಲಿದೆ. ಒಂದೆರೆಡು ತಿಂಗಳೊಳಗಾಗಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bengaluru Development Authority has chosen a joint venture of Embassy Group and Maverick holdings and investments to redevelop its Indiranagar shopping complex under the public private partnership model.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more