Bengaluru Land Price: 21 ಎಕರೆ ಜಾಗವನ್ನು ₹450 ಕೋಟಿಗೆ ಖರೀದಿ ಮಾಡಿದ ಪ್ರೆಸ್ಟೀಜ್ ಗ್ರೂಪ್

ಬೆಂಗಳೂರು ಮೂಲಕ ರಿಯಲ್ ಎಸ್ಟೇಟ್ ಡೆವಲಪರ್ ಪ್ರೆಸ್ಟೀಜ್ ಗ್ರೂಪ್ ನಗರದಲ್ಲಿ 21 ಎಕರೆ ಭೂಮಿಯನ್ನು ಖರೀದಿ ಮಾಡಿದ್ದು, 1,800 ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.

ನಗರದ ಟೆಕ್ ಕಾರಿಡಾರ್ ವೈಟ್‌ಫೀಲ್ಡ್‌ನಲ್ಲಿ ಬರೋಬ್ಬರಿ ₹450 ಕೋಟಿ ನೀಡಿ 21 ಎಕರೆ ಭೂಮಿಯನ್ನು ಖರೀದಿ ಮಾಡಿದೆ. ಈ ಭೂಮಿಯಲ್ಲಿ ಸುಮಾರು 4 ಮಿಲಿಯನ್ ಚದರ ಅಡಿ ವಿಸ್ತೀರ್ಣದ ವಸತಿ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಹೇಳಿದೆ.

Prestige Group Acquires Bengaluru Land Parcel for 450 Crore

ಪ್ರೆಸ್ಟೀಜ್ ಗ್ರೂಪ್ ಈ ವರ್ಷ ಎರಡನೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಖರೀದಿ ಮಾಡಿದೆ. ಮಾರ್ಚ್ ತಿಂಗಳಿನಲ್ಲಿ ₹468 ಕೋಟಿ ವೆಚ್ಚದಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂ ಎಕ್ಸ್‌ಟೆನ್ಶನ್‌ನಲ್ಲಿ 62.5 ಎಕರೆಯನ್ನು ಸ್ವಾಧೀನಪಡಿಸಿಕೊಂಡಿತ್ತು. ಅದಾದ ಬಳಿಕ ಈಗ ಬೆಂಗಳೂರಿನಲ್ಲಿ ಜಾಗವನ್ನು ಖರೀದಿ ಮಾಡಿದೆ.

₹ 4,500 ಕೋಟಿ ಅಭಿವೃದ್ಧಿ ಮೌಲ್ಯ

ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್, ಈ ಬೃಹತ್ ಯೋಜನೆಯು ₹ 4,500 ಕೋಟಿಗಳ ಒಟ್ಟು ಅಭಿವೃದ್ಧಿ ಮೌಲ್ಯವನ್ನು (ಜಿಡಿವಿ) ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕದ ನಂತರ ಭೂಸ್ವಾಧೀನದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅನಾರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್‌ನ ಮಾಹಿತಿಯ ಪ್ರಕಾರ, 2022ರಲ್ಲಿ ವರ್ಷದಲ್ಲಿ 82 ಪ್ರಮುಖ ಒಪ್ಪಂದಗಳಲ್ಲಿ 2,508 ಎಕರೆ ಭೂಸ್ವಾಧೀನ ಮಾಡಿಕೊಂಡಿದ್ದರೆ, 2023ರಲ್ಲಿ 97 ಭೂ ವಹಿವಾಟುಗಳಲ್ಲಿ 2,707 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ವೈಟ್‌ಫೀಲ್ಡ್‌ನಲ್ಲಿ ಭೂಸ್ವಾಧೀನಪಡಿಸಿಕೊಂಡಿರುವುದು ಪ್ರೆಸ್ಟೀಜ್ ಗ್ರೂಪ್‌ನ ಮನೆ ಮಾರುಕಟ್ಟೆಯಲ್ಲಿ ಕಂಪನಿಯ ಮಾರಾಟವನ್ನು ಬಲಪಡಿಸುತ್ತದೆ, ಇದೇ ವರ್ಷ ಯೋಜನೆಯನ್ನು ಪ್ರಾರಂಭಿಸಲು ಮತ್ತು ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಪ್ರೆಸ್ಟೀಜ್ ಗ್ರೂಪ್‌ನ ಗುಂಪಿನ ಮುಖ್ಯ ಕಾರ್ಯನಿರ್ವಾಹಕ ವೆಂಕಟ್ ಕೆ ನಾರಾಯಣ ಹೇಳಿರುವುದಾಗಿ ವರದಿಯಾಗಿದೆ.

ಏಪ್ರಿಲ್ ಮೊದಲ ವಾರದಲ್ಲಿ ಪ್ರೆಸ್ಟೀಜ್ ₹18,000 ಕೋಟಿ ಮೌಲ್ಯದ ನಾಲ್ಕು ವಸತಿ ಯೋಜನೆಗಳನ್ನು ನಿರ್ಮಿಸಲು ₹ 2,001 ಕೋಟಿ ಸಂಗ್ರಹಿಸಲು ಅಬುಧಾಬಿ ಹೂಡಿಕೆ ಪ್ರಾಧಿಕಾರ (ADIA) ಮತ್ತು ಕೊಟಕ್ AIF ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ದೆಹಲಿ, ಮುಂಬೈ, ಬೆಂಗಳೂರು ಮತ್ತು ಗೋವಾದಲ್ಲಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಈ ಹೂಡಿಕೆಯನ್ನು ಬಳಸಲಾಗುತ್ತದೆ.

ಈ ವಹಿವಾಟನ್ನು ADIA-Kotak ಮತ್ತು Prestige ನಡುವೆ 60:40 ಜಂಟಿ ಉದ್ಯಮ ವೇದಿಕೆಯಾಗಿ ರಚಿಸಲಾಗಿದೆ, ಅರೆ ಸಾಲದ ರೂಪದಲ್ಲಿ ₹2,001 ಕೋಟಿ ಹೂಡಿಕೆ ಮಾಡುತ್ತಾರೆ. ಪ್ರೆಸ್ಟೀಜ್ ಉಳಿದ ಕೊಡುಗೆ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+