ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ: ಮೊಬೈಲ್ ವ್ಯಾಲೆಟ್ ಬಳಕೆಗೂ ಅವಕಾಶ

|
Google Oneindia Kannada News

ಬೆಂಗಳೂರು, ಜನವರಿ 11: ನಮ್ಮ ಮೆಟ್ರೋದಲ್ಲಿ ನಗದು ರಹಿತ ಪ್ರಯಾಣಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಇನ್ನೊಂದು ಹೆಜ್ಜೆ ಮುಂದಿರಿಸಿದೆ.

ನಗದು ರಹಿತ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಹಿಂದೆ ಸ್ಮಾರ್ಟ್ ಕಾರ್ಡ್ ಬಳಕೆಯನ್ನು ಜಾರಿಗೆ ತಂದಿತ್ತು. ಬಹು ಪ್ರಯಾಣದ ಸ್ಮಾರ್ಟ್ ಕಾರ್ಡ್ ಗಳ ಮಾರಾಟಕ್ಕೆ ಹಾಗೂ ರೀಚಾರ್ಜ್ ಮಾಡಲು ನಗದು, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಬಹುದಾಗಿದೆ. ಮೊಬೈಲ್ ವಾಲೆಟ್ ಅಥವಾ ಯುಪಿಐ ಬಳಸಿ ಪಾವತಿ ಮಾಡುವುದಕ್ಕೆ ಅವಕಾಶವಿರಲಿಲ್ಲ.

ನಮ್ಮ ಮೆಟ್ರೋ: ಪ್ರಯಾಣಿಕರ ಸೇವೆಯಲ್ಲಿ ಹೊಸ ದಾಖಲೆನಮ್ಮ ಮೆಟ್ರೋ: ಪ್ರಯಾಣಿಕರ ಸೇವೆಯಲ್ಲಿ ಹೊಸ ದಾಖಲೆ

ಹಾಗಾಗಿ ಟಿಕೇಟ್ ಕೌಂಟರ್ ಗಳಲ್ಲಿ ನಗದು ರಹಿತ ಪಾವತಿಗೆ ಅವಕಾಶ ಕಲ್ಪಿಸಲು ಪ್ರಿಪೇಯ್ಡ್ ಪಾವತಿ ಉಪಕರಣ(ಪಿಪಿಐ) ಒದಗಿಸುವ ಅರ್ಹ ಕಂಪನಿಗಳಿಂದ ಹಾಗೂ ಬ್ಯಾಂಕ್ ಗಳಿಂದ ಪ್ರಸ್ತಾವನೆ ಆಹ್ವಾನಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಮಾನ್ಯತೆ ಪಡೆದ ಕಂಪನಿ ಅಥವಾ ಬ್ಯಾಂಕ್ ಗಳು ಮಾತ್ರ ಪ್ರಸ್ತಾವನೆ ಸಲ್ಲಿಸಬಹುದು.

ಮೊಬೈಲ್ ಒನ್ ಅಪ್ಲಿಕೇಷನ್ ಮೂಲಕ ರೀಚಾರ್ಜ್

ಮೊಬೈಲ್ ಒನ್ ಅಪ್ಲಿಕೇಷನ್ ಮೂಲಕ ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಆನ್ ಲೈನ್ ರೀಚಾರ್ಜ್ ಗಾಗಿ ನಿಗಮವು ವಿವಿಧ ಪಾವತಿ ಗೇಟ್ ವೇಗಳ ನಡುವೆ ಸಮನ್ವಯ ಮೂಡಿಸಲು ಗೇಟ್ ವೇ ಸರ್ವರ್ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ನಿಗಮದ ವೆಬ್ ಸೈಟ್, ಕರ್ನಾಟಕ ಒನ್ ಪೋರ್ಟಲ್ ಅಥವಾ ಮೊಬೈಲ್ ಒನ್ ಅಪ್ಲಿಕೇಷನ್ ಮೂಲಕವೂ ರೀಚಾರ್ಜ್ ಮಾಡಬಹುದು. ಐಸಿಐಸಿಐ ಹಾಗೂ ಫೆಡರಲ್ ಬ್ಯಾಂಕ್ ಗ್ರಾಹಕರು ಸ್ವಯಂಚಾಲಿತವಾಗಿ ಸ್ಮಾರ್ಟ್ ಕಾರ್ಡ್ ಗೆ ಮೊತ್ತ ಜಮೆ ಮಾಡಿಸಿಕೊಳ್ಳುವ ವ್ಯವಸ್ಥೆಯೂ ಇದೆ.

ಸಂಕ್ರಾಂತಿ ವಿಶೇಷ ಪುಟ

ಪ್ರಸ್ತಾವನೆ ಸಲ್ಲಿಸುವ ಕಂಪನಿಗಳ ಸಾಮರ್ಥ್ಯ

ಪ್ರಸ್ತಾವನೆ ಸಲ್ಲಿಸುವ ಕಂಪನಿಗಳ ಸಾಮರ್ಥ್ಯ

ಪ್ರಸ್ತಾವನೆ ಸಲ್ಲಿಸುವ ಸಂಸ್ಥೆಗಳು ನಿತ್ಯಮೊಬೈಲ್ ವಾಲೆಟ್ ಅಥವಾ ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್ ಮೂಲಕ ಕನಿಷ್ಠ ಪಕ್ಷ ೧ ಸಾವಿರ ವಟಿವಾಟುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ಷರತ್ತು ವಿಧಿಸಲಾಗಿದೆ. ನಿಗಮವು ಪ್ರಸ್ತುತ ಪ್ರತಿ ನಿಲ್ದಾಣದಲ್ಲಿ ಕನಿಷ್ಠ ಎರಡು ಕಡೆ ಪ್ರಯಾಣಿಕರಿಗೆ ಟೋಕನ್ ವಿತರಣಾ ಕೇಂದ್ರಗಳನ್ನು ಹೊಂದಿದೆ. ಏಕ ಪ್ರಯಾಣದ ಟೋಕನ್ ವಿತರಣೆಗೆ ಸದ್ಯಕ್ಕೆ ನಗದು ಮಾತ್ರ ಸ್ವೀಕರಿಸಲಾಗುತ್ತಿದೆ.

ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

ಸಹಾಯ ಕೇಂದ್ರ ಸ್ಥಾಪಿಸಬೇಕು

ಸಹಾಯ ಕೇಂದ್ರ ಸ್ಥಾಪಿಸಬೇಕು

ಪಿಪಿಐ ಒದಗಿಸುವ ಕಂಪನಿ ಅಥವಾ ಬ್ಯಾಂಕ್ ಪಾವತಿಗೆ ಸಂಬಂಧಿಸಿದ ತಕರಾರುಗಳಿಗೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯಕೇಂದ್ರವನ್ನು ಆರಂಭಿಸಬೇಕು. ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರನ್ನು ನೇಮಿಸಬೇಕು ಎಂದು ಸೂಚಿಸಲಾಗಿದೆ. ಪಾವತಿ ಕುರಿತು ದೂರು ನೀಡಲು ಸಂಪರ್ಕ ಕೇಂದ್ರಗಳನ್ನು ಹೊಂದಿರಬೇಕು. ಇಂತಹ ವ್ಯಾಜ್ಯ ಇತ್ಯರ್ಥಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು.

ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು

ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು

ಪಾವತಿ ಸಲುವಾಗಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರಸು. ಒಂದು ಟಿಕೇಟ್ ಖರೀದಿಗೆ ಪ್ರಯಾಣಿಕರ ಖಾತೆಯಿಂದ ಒಂದಕ್ಕಿಂತ ಹೆಚ್ಚು ಬಾರಿ ಹಣ ಕಡಿತವಾದರೆ ಮೂರು ಸಿನಗಳ ಒಳಗೆ ಅದನ್ನು ಮರುಪಾವತಿ ಮಾಡಬೇಕು ಎಂದು ಸೂಚಿಸಲಾಗಿದೆ.

ಹಣ ವರ್ಗಾವಣೆ ವಿಳಂಬವಾಗುವುದನ್ನು ತಡೆಯಲು ಷರತ್ತುಗಳು

ಹಣ ವರ್ಗಾವಣೆ ವಿಳಂಬವಾಗುವುದನ್ನು ತಡೆಯಲು ಷರತ್ತುಗಳು

- ಹಣ ಪಾವತಿಸಿದ ಬಳಿಕ ಅದನ್ನು ಖಾತರಿ ಪಡಿಸಲು ಗ್ರಾಹಕರಿಗೆ ವಿಶಿಷ್ಟ ಸಂಖ್ಯೆ ಒದಗಿಸಬೇಕು. ಈ ಕೋಡ್ ನ ಆಧಾರದಲ್ಲಿ ಕೇಂದ್ರದ ಸಿಬ್ಬಂದಿ ಟೋಕನ್ ವಿತರಿಸುವುದಕ್ಕೆ ಸಾಧ್ಯವಾಗಬೇಕು. ಇದಕ್ಕಾಗಿ ಪ್ರತ್ಯೇಕ ತಂತ್ರಾಂಶವನ್ನು ಒದಗಿಸಬೇಕು.
-ಪ್ರಯಾಣಿಕರು ಟಿಕೇಟ್ ವಿತರಣಾ ಕೇಂದ್ರವನ್ನು ತಲುಪುವ ಮುನ್ನವೇ ಹಣ ಪಾವತಿಸಲು ಸಾಧ್ಯವಾಗುವ ವ್ಯವಸ್ಥೆ ಇರಬೇಕು.

-ಪಾವತಿ ಪ್ರಕ್ರಿಯೆ ಸುಲಲಿತವಾಗಿರಬೇಕು. ಹಣ ಪಾವತಿಸುವಾಗ ನಗದು ಪಾವತಿಗೆ ತಗಲುವುದಕ್ಕಿಂತ ಹೆಚ್ಚು ಸಮಯ ತಗುಲಬಾರದು

-ಒಂದು ಕೋಡ್ ಗೆ ಒಂದೇ ಬಾರಿ ಮಾತ್ರ ಟಿಕೇಟ್ ನನೀಡಲು ಸಾಧ್ಯವಾಗಬೇಕು. ಒಂದೇ ಕೋಡ್ ನ್ನು ಮತ್ತೆ ಬಳಸಲು ಸಾಧ್ಯವಾಗದಂತೆ ತಡೆಯುವ ವ್ಯವಸ್ಥೆ ಇರಬೇಕು.
- ಪ್ರತಿ ಪಾಳಿ ಮುಗಿದ ತಕ್ಷಣ ನಿಲ್ದಾಣದ ನಿಯಂತ್ರಣಾಧಿಕಾರಿ ಪ್ರತಿ ಕೌಂಟರ್‌ನಲ್ಲಿ ನಡೆದ ವಹಿವಾಟಿನ ವಿವರ ಪಡೆಯುವುದಕ್ಕೆ ಸಾಧ್ಯವಾಗಬೇಕು

English summary
BMRCL has invited proposals from financial institutions to install prepayment devices in metro stations to provide more cashless transcations for commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X