Power cut: ಬೆಂಗಳೂರಿನ ವಿವಿಧ ಭಾಗದಲ್ಲಿ ಇಂದು - ನಾಳೆ ಪವರ್ ಕಟ್, ನಿಮ್ಮ ಏರಿಯಾ ಇದೆಯಾ ನೋಡಿ..
ಬೆಂಗಳೂರಿಗರೇ ಗಮನಿಸಿ... ಇಂದು ನಾಳೆ ಅಂದರೆ ನವೆಂಬರ್ 25 ಹಾಗೂ ನವೆಂಬರ್ 26ಕ್ಕೆ ಬೆಂಗಳೂರಿನ ವಿವಿಧ ಭಾಗದಲ್ಲಿ ವಿದ್ಯುತ್ ವ್ಯತ್ಯಾಸವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಗರದ ವಿವಿಧ ಭಾಗಗಳಲ್ಲಿ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ವಿವಿಧ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಮುಖ್ಯವಾಗಿ ಹಳೆಯ ಬೆಂಗಳೂರಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಾಸ ಹೆಚ್ಚಾಗಿ ಇದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ವಿವಿಧ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ. ನಗರದ ವಿವಿಧ ಭಾಗದಲ್ಲಿ 5 ರಿಂದ 7 ಗಂಟೆಯ ವರೆಗೂ ವಿದ್ಯುತ್ ಕಡಿತವಾಗಲಿದೆ. ಅದರಲ್ಲಿ ನಿಮ್ಮ ಏರಿಯಾ ಇದೆಯಾ ನೋಡಿಕೊಳ್ಳಿ....
ಬೆಂಗಳೂರಿನಲ್ಲಿ ಸೋಮವಾರ ಹಾಗೂ ಮಂಗಳವಾರ ವಿವಿಧ ಭಾಗದಲ್ಲಿ ಮುಂಜಾನೆಯಿಂದಲೇ ವಿದ್ಯುತ್ ಕಡಿತವಾಗಲಿದೆ. ಪ್ರದೇಶವಾರು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಸುಗಮ ವಿದ್ಯುತ್ ಪೂರೈಕೆಗಾಗಿ ಸಬ್‌ಸ್ಟೇಷನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ವಿದ್ಯುತ್ ಲೈನ್‌ಗಳಲ್ಲಿ ತುರ್ತು ನಿರ್ಹವಣೆ ಮಾಡುವ ಅವಶ್ಯಕತೆ ಇರುವುದರಿಂದ ವಿದ್ಯುತ್ ಕಡಿತ ಮಾಡುತ್ತಿರುವುದಾಗಿ ಬೆಸ್ಕಾಂ ಹೇಳಿದೆ.

ಬೆಂಗಳೂರಲ್ಲಿ ಎಲ್ಲೆಲ್ಲಿ ಪವರ್ ಕಟ್
ನವೆಂಬರ್ 25ಕ್ಕೆ ವಿದ್ಯುತ್ ವ್ಯತ್ಯಾಸವಾಗುವ ಪ್ರದೇಶಗಳು
ಪ್ರಶಾಂತ್ ನಗರ ಮುಖ್ಯರಸ್ತೆ: ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ವಿದ್ಯುತ್ ಪೂರೈಕೆ ಇರಲ್ಲ. ಸಪ್ತಗಿರಿ ಲೇಔಟ್, ಪಾಪರೆಡ್ಡಿ ಲೇಔಟ್, ಪಾಣತ್ತೂರು ದಿನ್ನೆ, ವಸಂತ ಲೇಔಟ್, ಲಕ್ಷ್ಮೀ ನರಸಿಂಹ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಕಾವೇರಪ್ಪ ಲೇಔಟ್‌ನಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ವಿದ್ಯುತ್ ಕಡಿತ ಇರಲಿದೆ.
ಇನ್ನು ದಾಬಸ್‌ಪೇಟೆ ಸುತ್ತಮುತ್ತ ಬೆಳಿಗ್ಗೆ 10.30ರಿಂದ ಸಂಜೆ 4 ಗಂಟೆಯ ವರೆಗೆ ಪವರ್ ಕಟ್ ಇರಲಿದೆ. ಸೋಮೇಶ್ವರ ಭಾಗದಲ್ಲಿ ಮಧ್ಯಾಹ್ನ 1ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಪವರ್ ಇರಲ್ಲ. ನಗರಗೆರೆ ಹಾಗೂ ಸುಬ್ಬಳ್ಳಿ ಕ್ರಾಸ್‌ನಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ, ಹೊಸಬುದ್ಯಾ, ನರೇಪಲ್ಲಿ, ಟಿಬಿ ಕ್ರಾಸ್, ಅಬಕವಾರಿಪಲ್ಲಿ ಭಾಗದಲ್ಲಿ ಮಧ್ಯಾಹ್ನ 12.30ರಿಂದ 2.30ರ ವರೆಗೆ ಪವರ್ ಇರಲ್ಲ.
ಎಸ್‌ಎಸ್ ಲೇಔಟ್ ಎ ಬ್ಲಾಕ್, ಎಸ್‌ಎಸ್ ಮಾಲ್ , ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮೀ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಜಿಎಚ್. ಪಾರ್ಕ್ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸಂಜೆ 4 ಗಂಟೆಯ ವರೆಗೆ, ಶಿವ ಬ್ಯಾಂಕ್ ಭಾರತ್ ಕಾಲೋನಿ, ಶೆಕಪ್ಪ ನಗರ, ಕೆ ಬಿ ನಗರ, ಗೋಶಾಲ, ರುದ್ರಪ್ಪ ರೈಸ್ ಮಿಲ್ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಾಸ ಆಗಲಿದೆ. ಇನ್ನು ಎಸ್‌ಎಚ್ ಹಳ್ಳಿ, ಹೊನ್ನಕಾಲುವೆ, ಹೊಸಳ್ಳಿ, ಚಿಕ್ಕಯೆಮ್ಮಿಗನೂರು ಭಾಗದಲ್ಲೂ ಸಂಜೆ 4 ರವರೆಗೆ ಪವರ್ ಕಟ್ ಇರಲಿದೆ.
ಟಿಬಿ ನಗರ, ಮುತ್ತುಗದೂರು, ಕಾಗ್ಗಲಗೆರೆ ಭಾಗದಲ್ಲಿ ಸಂಜೆ ನಾಲ್ಕರ ವರೆಗೆ ಹಾಗೂ ಬ್ರಹ್ಮಸಂದ್ರ ಗೊಲ್ಲರಹಟ್ಟಿ, ಜೋಡಿದೇವರಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಜೆ 5 ರವರೆಗೆ ಹಾಗೂ ದೊಡ್ಡಅಗ್ರಹಾರ, ಚಿಕ್ಕಅಗ್ರಹಾರ, ಕಂಚಿಗಾನಹಳ್ಳಿ ಭಾಗದಲ್ಲಿ ಸಂಜೆ ವರೆಗೆ ಪರವ್ ಕಟ್ ಆಗಲಿದೆ.
ನವೆಂಬರ್ 26ಕ್ಕೆ ಪವರ್ ಕಟ್ ಆಗಲಿರುವ ಪ್ರದೇಶ
ರಾಜಾಜಿನಗರ ಬೆಸ್ಕಾಂ ವಿಭಾಗದಲ್ಲಿ ಪವರ್ ಕಟ್ ಆಗಲಿದೆ. ಪಿ.ಸಿ ಲೇಔಟ್, 7ನೇ ಮುಖ್ಯರಸ್ತೆ ಪೋಸ್ಟ್ ಆಫೀಸ್ ರೋಡ್, ಹೊಸಹಳ್ಳಿ ಹಾಗೂ ವಿಜಯನಗರ ಭಾಗದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ.
ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.












Click it and Unblock the Notifications