Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಬುಧವಾರ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜೂನ್ 25ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಜೂನ್ 25ರ ಬುಧವಾರ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ವುರವಂಕಪುರಂ ಪಾಮ್ ಬೀಚ್ ವಿದ್ಯುತ್ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 25ರಂದು ಎಲ್ಲೆಲ್ಲಿ ಕರೆಂಟ್ ಕಟ್?: ಹಳೇಹಳ್ಳಿ, ಮಾರ್ಗೊಂಡನಹಳ್ಳಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗುಬ್ಬಿ ಅಡ್ಡ ರಸ್ತೆ, ಕ್ಯಾಲಸನಹಳ್ಳಿ, ಪುರವಂಕರ ಅಪಾರ್ಟ್‌ಮೆಂಟ್, ಪೂರ್ಣಪ್ರಜ್ಞ, ಮಾರಗೊಂಡನಹಳ್ಳಿ, ಗವಿಗುಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಅಲ್ಲದೆ ಅಂದೇ ಶೋಭಾ ಇಂದ್ರಪ್ರಸ್ಥ ವಿದ್ಯುತ್ ಉಪಕೇಂದ್ರದಲ್ಲೂ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಹಾಗೂ ಗ್ಲೋಬಲ್ ಮಾಲ್‌ನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.
ಮಂಗಳವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಜೂನ್ 24ರ ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಸಿದೆ. ಕೆಆರ್ ಲೇಔಟ್, ಶಾರದ ನಗರ, ಅರೇಹಳ್ಳಿ, ಇಟ್ಟಮಡು, ಎಜಿಎಸ್ ಲೇಔಟ್, ಟಿಜಿ ಲೇಔಟ್, ಭುವನೇಶ್ವರಿ ನಗರ, ಕದಿರೇನಹಳ್ಳಿ, ನಾಯ್ಡು ಲೇಔಟ್ ಮತ್ತು ಸುಮತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.
ಅಲ್ಲದೆ, ವಿಜಯನಗರ ವಿಭಾಗದ ಇಸ್ರೋ ಲೇಔಟ್, ಸುಬ್ರಹ್ಮಣ್ಯಪುರ ಮತ್ತು ಬನಶಂಕರಿ ವಿದ್ಯುತ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್‌ನಿಂದ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವ ಕಾರಣ ಕೇಂದ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಇಳಯಸನಗರ, ವಿವೇಕಾನಂದ ಕಾಲೋನಿ, ಪ್ರಗತಿಪುರ, ಸರಬಂಡೆ ಪಾಳ್ಯ, ಪ್ರತಿಭಾ ಇಂಡಸ್ಟ್ರಿಯಲ್ ಏರಿಯಾ, ಸುಪ್ರೀಮ್ ಲೆದರ್ ಗಾರ್ಮೆಂಟ್ಸ್, ಚಂದ್ರಾನಗರ, ಕಾಶಿನಗರ, ವಿಕ್ರಮನಗರ, ನಂಜಪ್ಪ ಲೇಔಟ್, ಬಿಕಾಸಿಪುರ, ಟೀಚರ್ಸ್ ಕಾಲೋನಿ, ಬೇಂದ್ರೆ ನಗರ, ಮಿನಿಯಾಜ್ ನಗರ, ಕನಕನಗರ, ಉತ್ತರಹಳ್ಳಿ, ಆದರ್ಶ್ ಅಪಾರ್ಟ್‌ಮೆಂಟ್ 1 ಮತ್ತು 2 ಸುತ್ತಮುತ್ತಲಿನ ಪ್ರದೇಶಗಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿದೆ.
ಮಾರುತಿ ಲೇಔಟ್, ಭರತ್ ಲೇಔಟ್, ದೊಡ್ಡಕಲ್ಲಸಂದ್ರ, ಅಗ್ರಹಾರ, ವಿಠಲ್ ನಗರ, ಯಾದಲಾಂ ನಗರ, ಅರೇಹಳ್ಳಿ, ಇಟ್ಟುಮಡು, ಎಜಿಎಸ್ ಲೇಔಟ್, ಚಿಕ್ಕಲ್ಲಸಂದ್ರ ಟಿ.ಜಿ.ಲೇಔಟ್, ಭುವನೇಶ್ವರಿನಗರ, ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ವೀರಭದ್ರನಗರ, ಬ್ಯಾಂಕ್ ಕಾಲೋನಿ, ತ್ಯಾಗರಾಜ ನಗರ, ಬಸವನಗುಡಿ, ಬನಶಂಕರಿ 3ನೇ ಹಂತ, ಕತ್ರಿಗುಪ್ಪೆ, ಗಿರಿನಗರ 4ನೇ ಫೇಸ್, ಐಟಿಐ ಲೇಔಟ್, 100 ಅಡಿ ರಿಂಗ್ ರೋಡ್, ಕಾಮಾಕ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.












Click it and Unblock the Notifications