Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಗುರುವಾರ ಕರೆಂಟ್ ಕಟ್

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜುಲೈ 24ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

66/11 ಕೆವಿ ಗರಾಗ್ ಸಬ್‌ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಜುಲೈ 24ರ ಗುರುವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Power Cut in Bengaluru s These Areas on July 24 Know details

ಕೆಳಕಂಡ ಭಾಗಗಳಲ್ಲಿ ಗುರುವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನಿಡಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಸಹ ನೀಡಿದೆ.

ಗುರುವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ತೈಲಗೆರೆ, ಬಿದಲೂರು, ಯಲಿಯೂರು, ಕೋರಮಂಗಲ, ಗೊಬ್ಬರಗುಂಟೆ ಗ್ರಾಮದ ಪ್ರದೇಶಗಳಲ್ಲಿ, ಕುಂದನ ಗ್ರಾಮ ಪಂಚಾಯತ್, ಬೆಂಗಳೂರು ಗ್ರಾಮಾಂತರ ಡಿಸಿ ಕಚೇರಿ, ರವೀಂದ್ರ ನಗರ, ಸಣ್ಣಮಾನಿಕೆರೆ, ಹೀರಾನಂದನಿ ದೇವನಹಳ್ಳಿ ಪಟ್ಟಣದ ಹಲವು ಲೇಔಟ್‌ಗಳು, ಗೋಕರೆ, ಭುವನಹಳ್ಳಿ, ಚಿಮಚನಹಳ್ಳಿ, ಕನ್ನಮಂಗಲ, ಯರ್ತಿಗಾನಹಳ್ಳಿ, ಕೊಯಿರಾ ಮತ್ತು ಆಲೂರು-ದುದ್ದನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಅಲ್ಲದೆ, ಕೊಯಿರಾ ಗ್ರಾಮ ಪಂಚಾಯತ್ ಸೇರಿದಂತೆ ಕುಂದಣ ಉಪಕೇಂದ್ರದ ಸಮೀಪ ಇರುವ ಪ್ರದೇಶಗಳು, ಬೊಮ್ಮವಾರ, ಸಂತೋಷ ನಗರ, ಪ್ರಶಾನಾಥ್‌ ನಗರ, ಚಿಕ್ಕಸನ್ನೆ, ಅವತಿ, ವಿಶ್ವನಾಥಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ತಿಳಿಸಿದೆ.

ಬುಧವಾರ ಎಲ್ಲೆಲ್ಲಿ ಕರೆಂಟ್‌ ಕಟ್‌: ಭೈರಸಂದ್ರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇಂದು (ಜುಲೈ 23) ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 66/11 ಬ್ರಿಗೇಡ್ ಮೆಡೋಸ್ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.

ಭೈರಸಂದ್ರ, ಹೊಸಪಾಳ್ಯ, ಎಂ.ಎಲ್.ಎ.ಗಾರ್ಡನ್‌, ಬಂಜಾರಪಾಳ್ಯ, ಅಗರ, ಕರಡಿಗುಡ್ಡ, ಸಿದ್ದನಪಾಳ್ಯ, ಅಭಯ ಕಾಲೇಜ್, ವ್ಯಾಲಿ ಸ್ಕೂಲ್, ಪಿಕಾಕ್‌ ಹೌಸ್‌, ಸಾಲುದೊಡ್ಡಿ, ತಾತಗುಣಿ ಕಾಲೋನಿ, ಲಕ್ಷ್ಮೀಪುರ, ಸಾಲುದೊಡ್ಡಿ ಗೇಟ್, ನವಗ್ರಾಮ, ವಡೇರಹಳ್ಳಿ, ಚೌಡೇಶ್ವರಿ ನಗರ, ರಾಮಚಂದ್ರಪ್ಪ ಲೇಔಟ್, ಕಾವೇರಿ ನಗರ, ರಮೇಶ್ ನಗರ, ಸಾಲುಹುಣಸೆ.

ಬಾದೇಕಟ್ಟೆ, ಉತ್ತರಿ, ತಿಮ್ಮೇಗೌಡನಪಾಳ್ಯ, ದಿಣ್ಣೆಪಾಳ್ಯ, ಊದಿಪಾಳ್ಯ, ಬಸಪ್ಪನ ಪಾಳ್ಯ, ಬಿ.ಎಂ.ಕಾವಲ್, ಓ.ಬಿ.ಚೂಡಹಳ್ಳಿ, ಮಂತ್ರಿ ಪ್ರಿಮೈಸ್, ಬ್ರಿಗೇಡ್ ಮೆಡೋಸ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯ ಉಂಟಾಗಲಿದೆ ಎಂದು ತಿಳಿಸಿದೆ.

ಹೆಚ್ಚುವರಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: 66 ಕೆ.ವಿ ಕನಕಪುರ ಟಿ.ಕೆ. ಹಳ್ಳಿಯ ಲೈನ್-3ರ 66/11 ಕೆ.ವಿ ಅಚ್ಚಲು ಮತ್ತು ಹೊನ್ನಿಗನಹಳ್ಳಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸಹ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆ ಹೊನ್ನಿಗನಹಳ್ಳಿ, ಸಾತನೂರು, ಕಾಡಹಳ್ಳಿ, ಬೊಮ್ಮನಹಳ್ಳಿ, ಅರೆಕಟ್ಟೆ-ದೊಡ್ಡಿ, ತೋಟಹಳ್ಳಿ ಮತ್ತು ಅಚ್ಚಲು ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯ ಉಂಟಾಗಲಿದೆ ಎಂದು ತಿಳಿಸಿದೆ.

ವಿದ್ಯುತ್ ಕಡಿತವಾಗುವ ಪ್ರದೇಶಗಳಲ್ಲಿನ ನಿವಾಸಿಗಳು ಮೊಬೈಲ್ ಫೋನ್‌, ಲ್ಯಾಪ್‌ಟ್ಯಾಪ್‌, ಬ್ಯಾಟರಿಗ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನ ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳಲು ಹಾಗೂ ಈ ಸಮಯದಲ್ಲಿ ವಿದ್ಯುತ್ ಉಪಕರಣಗಳನ್ನು ಅವಲಂಬಿಸುವುದನ್ನ ತಪ್ಪಿಸುವಂತೆ ಬೆಸ್ಕಾಂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+