Bengaluru Power Cut: ಜುಲೈ 19 ಶನಿವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜುಲೈ 19 ಶನಿವಾರ ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಜುಲೈ 19ರ ಬೆಳಗ್ಗೆ 10ರಿಂದ ಮಧ್ಯಾಹ್ನ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ.

ಶನಿವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಈ ವ್ಯತ್ಯಯವು ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವೆಲ್ ಕ್ಯಾಸ್ಟ್ ಉಪಕೇಂದ್ರ ವ್ಯಾಪ್ತಿಯ ಪೀಣ್ಯ ವಿಭಾಗದ ಎನ್ -7 ಉಪ ವಿಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಡಿತವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರವೀಂದ್ರ ನಗರ, ಪ್ರಸನ್ನನಾಥ್ ನಗರ, ಶಾಂತೋಷ್ ನಗರ, ಏರ್‌ಪೋರ್ಸ್ ಜಲ್ಲಹಳ್ಳಿ ಪಶ್ಚಿಮ, ವೈಷ್ಣವಿ ನಕಾಶ್ತ್ರ ಅಪಾರ್ಟ್‌ಮೆಂಟ್, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಗತಿ ರಸ್ತೆ, ತ್ರಿವೇಣಿ, ಎಚ್ಎಚ್‌ವಿ, ಡಿಎಂಜಿ, ಕೃಷ್ಣ ಫ್ಯಾಬ್ರಿಕೇಶನ್ಸ್, ಜೆಮಿನಿ ಇಂಡಸ್ಟ್ರೀಸ್, ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ಎಂಎಸ್ಐಎಲ್ ಪ್ರಿಂಟಿಂಗ್ ಪ್ರೆಸ್, ಎಸ್ ರಮೇಶ್ ರಸ್ತೆ, ವಿಪ್ರೋ ವೆಲ್ಕಾಸ್ಟ್ ಫ್ಯಾಕ್ಟರಿ ಐಟಿಸಿ, ವೋಲ್ವೋ, ಅವೆರಿ ಡೆನ್ಮಿಷನ್, ಹಿಟಾಚ್ ಇಂಡಸ್ಟ್ರೀಸ್, ಗೀತಾ ಟಿಂಬರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ.
ಈ ಪ್ರದೇಶಗಳಲ್ಲಿ ವಾಸ ಮಾಡುವ ನಿವಾಸಿಗಳು ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್, ಬ್ಯಾಟರಿಗ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನ ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳಲು ಹಾಗೂ ಈ ಸಮಯದಲ್ಲಿ ವಿದ್ಯುತ್ ಉಪಕರಣಗಳನ್ನು ಅವಲಂಬಿಸುವುದನ್ನ ತಪ್ಪಿಸುವಂತೆ ಸೂಚನೆ ನೀಡಿದೆ.
ಶುಕ್ರವಾರ ಎಲ್ಲೆಲ್ಲಿ ಕರೆಂಟ್ ಕಟ್?: ಬೆಸ್ಕಾಂ ವಿದ್ಯುತ್ ನಿರ್ವಹಣೆ ಕಾಮಗಾರಿ ಹಿನ್ನೆಲೆ ಜುಲೈ 17 ಮತ್ತು 18ರಂದು ಯಶವಂತಪುರ, ಆರ್‌ಟಿ ನಗರ, ನಂದಿನಿ ಲೇಔಟ್ ಸೇರಿದಂತೆ ಬೆಂಗಳೂರಿನ ಹೆಚ್ಚಿನ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
66/11 ಕೆವಿ ನಂದಿನಿ ಲೇಔಟ್ ಉಪಕೇಂದ್ರ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸುಬ್ರಮಣ್ಯ ನಗರ, ಎ, ಬಿ, ಸಿ & ಡಿ ಬ್ಲಾಕ್, ಗಾಯತ್ರಿ ನಗರ, ಕೃಷ್ಣಾನಂದ ನಗರ, ಆರ್‌ಎಂಸಿ ಯಾರ್ಡ್, ಮಾರಪ್ಪನ ಪಾಳ್ಯ, ಯಶವಂತಪುರ ಕೈಗಾರಿಕಾ ಪ್ರದೇಶ, ದೂರವಾಣಿ ವಿನಿಮಯ ಕೇಂದ್ರ, ಶಂಕರ್ ನಗರ, ಶ್ರೀಕಂಠೇಶ್ವರ ನಗರ, ಸೋಮೇಶ್ವರ ನಗರ, ಎಪಿಎಂಸಿ ಯಾರ್ಡ್, ಮಹಾಲಕ್ಷ್ಮಿ ಲೇಔಟ್, ಗಣೇಶ ಬ್ಲಾಕ್, ಆಂಜನೇಯ ದೇವಸ್ಥಾನ ರಸ್ತೆ, ಸರಸ್ವತಿ ಪುರಂ.
ಎಜಿಬಿ ಲೇಔಟ್, ಪರಿಮಳ ನಗರ, ಶ್ರೀನಿವಾಸ್ ನಗರ, ಜೈಮಾರುತಿ ನಗರ, ರವಿ ಬಡವಣೆ, ಸಾಕಮ್ಮ ಬಡಾವಣೆ, ಭೇಲ್ ಲೇಔಟ್, ಜೆ.ಎಸ್.ನಗರ, ಜೆ.ಸಿ.ನಗರ, ಕುರುಬರಹಳ್ಳಿ, 60, 11ನೇ ಅಡಿ ರಸ್ತೆ, 9ನೇ, 11ನೇ ಅಡಿ ರಸ್ತೆ 13ನೇ, 14ನೇ ಮತ್ತು 15ನೇ ಮುಖ್ಯ, ಜೆ.ಸಿ.ನಗರ, ಪಿಡಬ್ಲ್ಯೂಡಿ, ಇಡಬ್ಲ್ಯೂಎಸ್, ಎಎಂಆರ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿತ್ತು
ರಾಜಕುಮಾರ ಸಮಾಧಿ ರಸ್ತೆ ಗೆಳೆಯರ ಬಳಗ ವೃತ್ತ, ಶ್ರೀರಾಮ ನಗರ, ಮುನೇಶ್ವರ ಬ್ಲಾಕ್, ಜೆಸಿ ನಗರ 1ನೇ ಮುಖ್ಯ ರಸ್ತೆ, ಸತ್ಯನಾರಾಯಣ ಲೇಔಟ್, ಮೈಕೋ ಲೇಔಟ್, ಹ್ಯಾಪಿ ಹೋಮ್ಸ್, ಸತ್ವ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿತ್ತು.












Click it and Unblock the Notifications