Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜನವರಿ 18ರಂದು ಕರೆಂಟ್‌ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಶನಿವಾರ ಜನವರಿ 18ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ & ಭಾನುವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕೆಪಿಟಿಸಿಎಲ್‌ನ ವಿದ್ಯುತ್‌ ಮಾರ್ಗಗಳ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ಜನವರಿ 18 ಹಾಗೂ 19ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Power Cut in Bengaluru s These Areas on January 18 Know details

220/66/11 ಕೆವಿ ಐ.ಟಿ.ಐ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಈ ಕೆಳಕಂಡ ಪ್ರದೇಶಗಳಲ್ಲಿ 2025ರ ಜನವರಿ 18 ರಂದು ಬೆಳಗ್ಗೆ 10ರಿಂದ ಸಂಜೆ ಗಂಟೆವರೆಗೆ 5 ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವಿದ್ಯುತ್‌ ಕಟ್‌?: ಜೈ ಭುವನೇಶ್ವರ ಲೇಔಟ್, ಕೆಆರ್ ಪುರಂ ಮುಖ್ಯರಸ್ತೆ, ದೀಪಾ ಆಸ್ಪತ್ರೆ ಸುತ್ತಮುತ್ತ, ವಿನಾಯಕ ಲೇಔಟ್, ಅಜಿತ್ ಲೇಔಟ್, ಟಿಸಿ ಪಾಳ್ಯ ಸಿಗ್ನಲ್, ಭಟ್ಟರಹಳ್ಳಿ, ಚಿಕ್ಕಬಸವನಪುರ ಮತ್ತು ಯರಪ್ಪನ ಪಾಳ್ಯ, ಕುವೆಂಪು ನಗರ, ರಾಮಮೂರ್ತಿ ನಗರ, ಎನ್‌ಆರ್‌ಐ ಲೇಔಟ್ ರಾಮಮೂರ್ತಿ ನಗರ, ಸಿಎಎನ್‌ವಿ ಲೇಔಟ್ ರಾಮಮೂರ್ತಿ ಮೇನ್ ರಸ್ತೆ, ರಾಘವೇಂದ್ರ ವೃತ್ತ, ಆಲ್ಫಾ ಗಾರ್ಡನ್, ಸ್ವತಂತ್ರ ನಗರ, ರಾಜೇಶ್ವರಿ ಲೇಔಟ್, ಮುನೇಶ್ವರ ಲೇಔಟ್.

ಕೋ ಕೋನಟ್ ಗಾರ್ಡನ್, ಬೆಥೆಲ್ ನಗರ, ಬೃಂದಾವನ ಲೇಔಟ್, ಕೆಆರ್‌ಆರ್ ಲೇಔಟ್, ಕೇಂಬ್ರಿಡ್ಜ್ ಲೇಔಟ್, ಕೇಂಬ್ರಿಡ್ಜ್ ಗಾರ್ಡನ್ ಲೇಔಟ್ ಮತ್ತು ವಾರಣಾಸಿ ಲೇಕ್, ಗ್ಯಾಸ್ ಗೌಡೌನ್ ಮುಖ್ಯ ರಸ್ತೆ, ಎನ್‌ಆರ್‌ಐ 5 ನೇ ಮುಖ್ಯ ರಸ್ತೆ, ಗ್ರೀನ್‌ವುಡ್ ಲೇಔಟ್, ಪ್ರತಿಷ್ಠಾನ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಜೆಕೆ ಹಳ್ಳಿ, ಸನ್‌ಶೈನ್‌ ಲೇಔಟ್, ಗಾರ್ಡನ್ ಸಿಟಿ ಕಾಲೇಜು.

ಲೇಕ್ ವ್ಯೂ ಸಿಟಿ, ಆನಂದಪುರ, ಮಾನ್ಸೂನ್ ಪಬ್ಲಿಕ್ ಸ್ಕೂಲ್ ರಸ್ತೆ, ಸಾಯಿ ಗಾರ್ಡನ್, ಮದರ್ ಥೆರೆಸಾ ಸ್ಕೂಲ್ ರಸ್ತೆ, ಹೊಯ್ಸಳ ನಗರ 1ನೇ ಮುಖ್ಯ, 2ನೇ ಮುಖ್ಯ, 3ನೇ ಮುಖ್ಯ ಮತ್ತು 6ನೇ ಮುಖ್ಯ, ಬಿಡಬ್ಲುಎಸ್‌ಎಸ್‌ಬಿ ಮತ್ತು ರಾಮಮೂರ್ತಿ ಮುಖ್ಯ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಅಲ್ಲದೆ, ಆದರ್ಶ್ ಟೆಕ್ ಪಾರ್ಕ್, ಜೆಕೆ ಹೋಟೆಲ್, ಕ್ವಾಲ್ಕಾಮ್ ಎಂಟರ್‌ಪ್ರೈಸಸ್, ಎಸ್‌ಎಪಿ ಲ್ಯಾಬ್, ಗೋಪಾಲನ್ ಎಂಟರ್‌ಪ್ರೈಸಸ್, ವಿ.ಕೆ.ಟೆಕ್ ಪಾರ್ಕ್, ರಾಮಗೊಂಡನಹಳ್ಳಿ, ನೇತ್ರಾ ಟೆಕ್ ಪಾರ್ಕ್, ಶ್ರೀ ರಾಬರ್ಟ್ ಕ್ರಿಸ್ಟೋಫರ್ಸ್, ಶ್ರೀ ಚೈತನ್ಯ ಪ್ರಾಪರ್ಟೀಸ್, ಕ್ವಾಲ್ಕಾಮ್ ಬ್ಲಾಕ್ 2, ಮೈಂಡ್ ಟ್ರೀ, ಜಿಂಜರ್ ಹೋಟೆಲ್, ಆಶಿಶ್ ಸಿಮ್ರಾನ್, ವೈದೇಹಿ ಆಸ್ಪತ್ರೆ, ಎಸ್‌ಜೆಆರ್‌ ಟೆಕ್ ಪಾರ್ಕ್, ಸಂತೋಷ್ ಟವರ್ಸ್, ಶೈಲೇಂದ್ರ ಟೆಕ್ ಪಾರ್ಕ್, ಕ್ವಾಲ್ಕಾಮ್ ಸಿ ಬ್ಲಾಕ್, ಇಪಿಐಪಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್‌ ವ್ಯತ್ಯಯ ಆಗಲಿದೆ.

ವಿಕ್ಟೋರಿಯಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಎಸ್‌ಜೆಪಿ ರಸ್ತೆ, ಒಟಿಸಿ ರಸ್ತೆ, ಎಸ್‌ಪಿ ರಸ್ತೆ, ಅವೆನ್ಯೂ ರಸ್ತೆ, ಗೌಡೌನ್ ರಸ್ತೆ, ಟ್ಯಾಕ್ಸಿ ಸ್ಟ್ಯಾಂಡ್, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್, ಮಿಂಟೊ, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ.ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಎಂಟಿಬಿ ರಸ್ತೆ, ಕುಂಬಾರ ಗುಂಡಿ ರಸ್ತೆ, ಶಿವಾಜಿ ರಸ್ತೆ, ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್.

ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್ ರಸ್ತೆ, ನಗರತ್ ಪೇಟೆ, ಎನ್,ಆರ್ ರಸ್ತೆ, ಒಟಿಸಿ ರಸ್ತೆಯ ಭಾಗ, ಪಿಸಿ ಲೇನ್, ಪಿಪಿ ಲೇನ್, ಊಸ್ಮಾನ್ ಖಾನ್ ರಸ್ತೆ, ಎಸ್‌ಜೆಪಿ ಪಾರ್ಕ್, ಬಸಪ್ಪ ವೃತ್ತ, ಕೆಆರ್ ರಸ್ತೆ, ಕೋಟೆ ಬೀದಿ, ಕಲಾಸಿಪಾಳ್ಯ ಮುಖ್ಯ ರಸ್ತೆ, ಪಟ್ನೂಲ್‌ಪೇಟೆ.

ಹಳೆ ಕಸಾಯಿಖಾನೆ ರಸ್ತೆ, ಕುಂಬಾರಪೇಟೆ ಮುಖ್ಯರಸ್ತೆ, ಅಪ್ಪುರಾಯಪ್ಪ ಲೇನ್, ಎಂಬಿಟಿ ರಸ್ತೆ, ಪಿಳ್ಳಪ್ಪ ಲೇನ್, ಸಿಆರ್ ಸ್ವಾಮಿ ಬೀದಿ, ಚಿಕ್ಕಪೇಟೆ, ಆರ್.ಟಿ.ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಒಟಿ ಪೆಟ್, ಒಟಿಸಿ ರಸ್ತೆ, ಬೆಳ್ಳಿಬಸವಣ್ಣ ದೇವಸ್ಥಾನದ ಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ಜಯದೇವ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್.ಎಸ್ ಪಾಳ್ಯ ಇಂಡಸ್ಟ್ರಿಯರ್ ಏರಿಯಾ, ಜಾಹ್ನಾವಿ ಎನ್‌ಕ್ಲೇವ್, ಅನಂತ ಲೇಔಟ್, ಜಯನಗರ 4, 9ನೇ ಟಿ ಬ್ಲಾಕ್, ಜಯನಗರ ಈಸ್ಟ್ ಎಂಡ್, ಎಬಿಸಿಡಿ ರಸ್ತೆ, ಬಿಹೆಚ್‌ಇಎಲ್ ಲೇಔಟ್.

ಎಸ್‌ಆರ್‌ಕೆ ಗಾರ್ಡನ್, ಎನ್‌ಎಲ್ ಲೇಔಟ್, ತಿಲಕ್ ನಗರ, ಶಾಂತಿ ನಗರ, ಜಯದೇವ ಆಸ್ಪತ್ರೆ, ಎನ್.ಎಸ್.ಪಾಳ್ಯ ಮ್ಯೇನ್ ರೋಡ್, ಜಿಆರ್‌ಬಿ ಮೇನ್ ರೋಡ್, ಬಿಸ್ಮಿಲ್ಲಾ ನಗರ, ಶೊಭಾ ಅಪಾರ್ಟ್‌ಮೆಂಟ್, ವೇಗಾ ಸಿಟಿ ಮಾಲ್, ಏರ್‌ಟೆಲ್‌ ಆಫೀಸ್, ಬನ್ನೇರುಘಟ್ಟ ಮುಖ್ಯ ರಸ್ತೆ, ಕೆಇಬಿ ಕಾಲೋನಿ, ಗುರಪ್ಪನ ಪಾಳ್ಯ, ಬಿಟಿಎಂ ಮೊದಲನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+