Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನದಿಂದ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಆಗಸ್ಟ್ 16ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಆಗಸ್ಟ್ 16ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ. ಹಾಗಾದ್ರೆ ಯಾವ್ಯಾವ ಪ್ರದೇಶಗಳಲ್ಲಿ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬೆಂಗಳೂರು ನಗರದ 220/66/11 ಕೆವಿಇಪಿಐಪಿ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ -3ರ ನಿರ್ವಹಣಾ ಕಾಮಗಾರಿ ಹಿನ್ನೆಲೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆಗಸ್ಟ್ 16ರ ಶನಿವಾರ ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೂ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇಂದು ಎಲ್ಲೆಲ್ಲಿ ಪವರ್ ಕಟ್?: ಎಲ್ & ಟಿ, ಆರ್‌ಎಂಝಡ್ ನೆಕ್ಸ್ಟ್, ಇಪಿಪಿ ಲೇಔಟ್, ಟಿಸಿಎಸ್ ಸಾಫ್ಟ್‌ವೇರ್, ಎಸ್‌ಜೆಆರ್ ಟೆಕ್ ಪಾರ್ಕ್, ಇಪಿಪಿ ಲೇಔಟ್, ಎಂ/ಎಸ್‌ವಿಎಸ್ಎನ್ಎಲ್ ಫೀಡರ್, ರಿಲಯನ್ಸ್ ಮಾರ್ಕೆಟ್, ಒರಿಯೆಂಟಲ್ ಹೋಟೆಲ್, ಇಪಿಪಿ ಲೇಔಟ್, ಬುಶ್ರಾ ಟೆಕ್ ಪಾರ್ಕ್, ಕ್ವಾಲ್‌ಕಾಮ್, ಕ್ವಾಲ್ಕಾಮ್ 2, ಜಿ.ಇ.ಬಿ.ಇ ಕಂಪನಿ, ಬಾಗ್ಮನೆ ನಿಯೋನ್ ಬ್ಲಾಕ್, ಇಪಿಪಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಇನ್ನು ವಿದ್ಯುತ್ ಪೂರೈಕೆಯಲ್ಲಿ ಕಡಿತ ಉಂಟಾಗುವ ಪ್ರದೇಶಗಳಲ್ಲಿ ವಾಸ ಮಾಡುವ ನಿವಾಸಿಗಳು ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್, ಬ್ಯಾಟರಿಗ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನ ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳಲು ಬೆಸ್ಕಾಂ ಮುಂಜಾಗ್ರತಾ ಕ್ರಮವಾಗಿ ಸೂಚನೆ ನೀಡಿದೆ.
ಎಲ್ಲೆಲ್ಲಿ ಕರೆಂಟ್ ಕಟ್?: ವಿದ್ಯುತ್ ಉಪ ಕೇಂದ್ರದ ನಿರ್ವಹಣಾ ಕಾಮಗಾರಿ ಹಿನ್ನೆಲೆ ಇಂದು (ಆಗಸ್ಟ್ 16) ದಾವಣಗೆರೆ ನಗರದ ಹಲವೆಡೆ ಬೆಳಗ್ಗೆ 9ರಿಂದ ಸಂಜೆ 5:30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಲಾಗಿದೆ.
ಹರೋನಹಳ್ಳಿ, ಹೊನ್ನೇಬಾಗಿ, ಮುದಿಗೆರೆ, ಮಾವಿನಹೊಳೆ, ಅಜ್ಜಿಹಳ್ಳಿ ಗ್ರಾಮಗಳ ವಿದ್ಯುತ್ ಮಾರ್ಗದ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಅಲ್ಲದೆ, ಸಂತೇಬೆನ್ನೂರು ಉಪಸ್ಥಾವರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡ ಹಿನ್ನೆಲೆ ಇಂದು ಬೆಳಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಸಂತೇಬೆನ್ನೂರು,ಸಿದ್ಧನಮಠ, ಕಾಕನೂರು, ಬೆಳ್ಳಿಗನೂಡು, ಹಿರೇಕೋಗಲೂರು,ಚಿಕ್ಕುಡ, ಅರಳಿಕಟ್ಟೆ, ತಣಿಗೆರೆ, ಚಿಕ್ಕಬೆನ್ನೂರು, ದೊಡ್ಡಮಲ್ಲಾಪುರ, ದೊಡ್ಡಬ್ಬಿಗೆರೆ, ಕಸ್ತೂರಬಾ ಗ್ರಾಮ, ಮರಡಿ, ತೋಪೇನಹಳ್ಳಿ, ಮೆದಿಕೆರೆ,ಕೊಂಡದಹಳ್ಳಿ, ಕುಳೇನೂರು, ದೊಡ್ಡರಿಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications