Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆಗಸ್ಟ್‌ 13ರ ಬುಧವಾರ ಕರೆಂಟ್ ಕಟ್

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಆಗಸ್ಟ್‌ 13ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಜುಲೈ 13ರಂದು ಬುಧವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ.

Power Cut in Bengaluru s These Areas on August 13 Know details

ಬೆಂಗಳೂರು ಗ್ರಾಮಾಂತರ ಮತ್ತು ಹರಿಹರ ತಾಲ್ಲೂಕುಗಳ ಹಲವು ಭಾಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ತಾತ್ಕಾಲಿಕ ವಿದ್ಯುತ್ ಕಡಿತ ಆಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಪ್ರಕಟಣೆಯಲ್ಲಿ ತಿಳಿಸಿದೆ.

ಕುದೂರು ವಿಭಾಗದ K-12 ಮತ್ತು F-14 ಫೀಡರ್‌ಗಳಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಪ್ರದೇಶಗಳಲ್ಲಿ ಆಗಸ್ಟ್ 13ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲೆಲ್ಕಿ ಪವರ್ ಕಟ್‌?: ಬಿಸ್ಕೂರು, ಕೋಡಿಹಳ್ಳಿ, ಸೂರಪ್ಪನಹಳ್ಳಿ, ಕನ್ನಿಸಂದ್ರ, ಮಲ್ಲಿಗುಂಟೆ, ಆಲದಕಟ್ಟೆ, ಅರಿಶಿನ ಕುಂಟೆ, ಕೆಲವೊಹಳ್ಳಿ, ಕಳ್ಳಿಪಾಳ್ಯ, ಮಾದಿಗೊಂಡನಹಳ್ಳಿ, ವೆಂಕಟ ಧ್ರುವಗಲ್ಯ, ಭೈರನೂರು, ವಾಜರಹಳ್ಳಿ, ಕೆಂಚಯ್ಯನ ಪಾಳ್ಯ, ಅಂಚೆಪಾಳ್ಯ, ಮದ್ದೂರು, ಅರೆಪಾಳ್ಯ, ಹೂಜೆಗಲ್ಲಿ, ಪರಸಂದ್ರ, ಮಾಣಿಗನಹಳ್ಳಿ, ಚೀಲೂರು, ಬೈರಾಪುರ, ಹೊಸ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ ಎಂದು ಬೆಸ್ಕಾಂ ತಿಳಿಸಿದೆ.

ಹರಿಹರ ತಾಲೂಕಿನಲ್ಲಿ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಹರಿಹರ ತಾಲ್ಲೂಕಿನಲ್ಲಿ ಆಗಸ್ಟ್ 14ರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೆಳ್ಳುಡಿ ಶಾಖೆಯ ಭಾನುವಳ್ಳಿ ವಿದ್ಯುತ್ ವಿತರಣಾ ಪ್ರದೇಶದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಭಾನುವಳ್ಳಿ, ಲಕ್ಕಶೆಟ್ಟಿಹಳ್ಳಿ, ಕಮಲಾಪುರ, ಹೊಳೆಸಿರಿಗೆರೆ, ರಾಮತೀರ್ಥ, ನಾಗೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಹೆಸ್ಕಾಂ ಎಚ್ಚರಿಕೆ: ಹೆಸ್ಕಾಂ ವತಿಯಿಂದ ತುರ್ತು ನಿರ್ವಹಣೆ ಕಾರ್ಯ ಕೈಗೊಂಡ ಹಿನ್ನೆಲೆ ಆಗಸ್ಟ್‌ 10ರ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಸುವರ್ಣ ಸೌಧ ಉಪ ಕೇಂದ್ರ, ಸದಾಶಿವ ನಗರ ಹಾಗೂ ನೆಹರು ನಗರ ಉಪ ಕೇಂದ್ರದಿಂದ ವಿತರಣೆಯಾಗುವ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಿತ್ತು.

ಸುವರ್ಣ ವಿಧಾನಸೌಧ ಉಪ ಕೇಂದ್ರದ ವ್ಯಾಪ್ತಿಯ ಕೆಎಚ್‌ಬಿ ಕಾಲನಿ, ವೃದ್ಧಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣ ಸೌಧ ಲೇನ್‌-1 ಮತ್ತು 2, ಬಸವೇಶ್ವರ ವೃತ್ತ, ಜೋಶಿ ಗಲ್ಲಿ, ನಾರ್ವೇಕರ್‌ ಗಲ್ಲಿ, ಆಚಾರ್ಯ ಗಲ್ಲಿ, ಗದೆ ಮಾರ್ಗ, ಶಹಾಪುರ, ಗಣೇಶಪುರ ಗಲ್ಲಿ, ಪವಾರ್‌ ಗಲ್ಲಿ, ಬಸವನ ಗಲ್ಲಿ, ಸರಾಫ್‌ ಗಲ್ಲಿ, ಬಿಚ್ಚು ಗಲ್ಲಿ, ಗ್ವಿಟ್‌ ಗಲ್ಲಿಯ 1 ರಿಂದ 5 ಕ್ರಾಸ್‌, ಮಾರುತಿ ನಗರ, ಹರಿಕಾಕಾ ಕಾಂಪೌಂಡ್‌, ಪರ್ಯಾಯ ಸುವರ್ಣ ಸೌಧ, ಸಾಯಿ ಕಾಲೋನಿ.

ಹಲಗಾ ರಸ್ತೆ, ಹಳೇ ಬೆಳಗಾವಿ, ಖಾಸಬಾಗ್‌, ಬಸವನ ಗಲ್ಲಿ, ಬಜಾರ್‌ ಗಲ್ಲಿ, ಮಾರುತಿ ಗಲ್ಲಿ, ಸದಾಶಿವ ನಗರ ಹಾಗೂ ನೆಹರು ನಗರ ಉಪಕೇಂದ್ರದ ವ್ಯಾಪ್ತಿಯ ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣ ವಾಡಿ, ಬಸವ ಕಾಲನಿ, ಆಜಂ ನಗರ, ಸಂಗಮೇಶ್ವರ ನಗರ, ಕೆಎಲ್‌ಇ ಎರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿ ನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಟ ರೋಡ್‌, ಇಂಡಾಲ್‌ ಏರಿಯಾ, ಸಿವಿಲ್‌ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+