Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಜನವರಿ 3ರಿಂದ 19ರ ವರೆಗೂ ಇರೋದಿಲ್ಲ ಕರೆಂಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಜನವರಿ 3ರಿಂದ 19ರ ವರೆಗೂ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
220/66/11ಕೆ.ವಿ ಇ.ಪಿ.ಐ.ಪಿ. ಸ್ಟೇಷನ್‌ನಲ್ಲಿ 31.5 ಎಂ.ವಿ.ಎ. ಶಕ್ತಿ ಪರಿವರ್ತಕ -3ರ ರಿಟ್ರೋಫಿಲ್ಲಿಂಗ್ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಬೆಂಗಳೂರಿನ ಹಲವೆಡೆ ಜನವರಿ 3ರಿಂದ 19ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್ ಕಟ್?: ಎಲ್ ಅ್ಯಂಡ್ ಟಿ, ಆರ್‌ಎಂಝೆಡ್ ನೆಕ್ಸ್ಟ್ (RMZ Next), ರಾಗಿಹಳ್ಳಿ-ಸಿದ್ದಾಪುರ ಗೇಟ್, ಇಪಿಐಪಿ ಲೇಔಟ್, ಟಿಸಿಎಸ್ ಸಾಫ್ಟ್ವೇರ್, ಎಸ್‌ಜೆಆರ್ ಟೆಕ್ ಪಾರ್ಕ್, ಎಂ/ಎಸ್ ವಿಎಸ್ಎನ್ಎಲ್ ಫೀಡರ್, ರಿಲಯನ್ಸ್ ಬಿಗ್ ಬಜಾರ್, ಓರಿಯಂಟಲ್ ಹೋಟೆಲ್, ಏರ್‌ಟೆಲ್, ಗೋಪಾಲನ್ ಎಂಟರ್ಪ್ರೈಸಸ್, ಸದಾ ಟೆಕ್ ಪಾರ್ಕ್, ಕ್ವಾಲ್ಕಾಮ್, ಕ್ವಾಲ್ಕಾಮ್-2, ಜಿಇ ಬಿಇ ಕಂಪನಿ, ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಸ್ಕಾಂ ಸಲಹೆ ಏನು?: ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತಚ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೋ ಅಂತಹ ಭಾಗಗಳ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್, ಬ್ಯಾಟರಿ ಸೇರಿದಂತೆ ಇತರೆ ಚಾರ್ಜಿಂಗ್ ಸಾಧನಗಳನ್ನು ಮುಂಜಾಗ್ರತಾ ಕ್ರಮವಾಗಿ ಜಾರ್ಜ್ ಮಾಡಿಟ್ಟುಕೊಳ್ಳುವಂತೆ ಸಲಹೆ ನೀಡಿದೆ.
ಅಲ್ಲದೆ, ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಸಹಾಯವಾಣಿ ಸಂಖ್ಯೆ 1912 ಕರೆ ಮಾಡಬಹುದು. ಈ ಸಹಾಯವಾಣಿಗೆ ಕರೆ ಮಾಡಿದರೆ, ಕೇಂದ್ರದ ಗ್ರಾಹಕ ಸೇವಾ ಪ್ರತಿನಿಧಿಗಳು ದೂರುಗಳನ್ನು ಸಂಬಂಧಿಸಿದ ಬೆಸ್ಕಾಂ ಉಪ ವಿಭಾಗಗಳಿಗೆ ರವಾನಿಸಿ ಶೀಘ್ರದಲ್ಲೇ ಪರಿಹಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ಜನವರಿ 2 ಮತ್ತು 3ರಂದು ವಿದ್ಯುತ್ ವ್ಯತ್ಯಯ: ತುರ್ತು ಕಾಮಗಾರಿ ನಿರ್ವಹಣೆ ಹಿನ್ನೆಲೆ ಜನವರಿ 2 ಹಾಗೂ ಜನವರಿ 3ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಇಂದು ಎಲ್ಲೆಲ್ಲಿ ಕರೆಂಟ್ ಕಟ್?: ನಾಗರಭಾವಿ, ಮಂಜುನಾಥ ನಗರ, ಕಾಳಿದಾಸ ಬಡಾವಣೆ, ಶಾಂತಿನಗರ, ಕೊಟ್ಟಿಗೆಪಾಳ್ಯ, ನೀರು ಸರಬರಾಜು ಮತ್ತು ಪಂಪಿಂಗ್ ಸ್ಟೇಷನ್ ಪ್ರದೇಶಗಳು, ಸುತ್ತಮುತ್ತಲಿನ ವಸತಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನಿರ್ವಹಣಾ ಕಾರ್ಯಗಳ ಆಧಾರದ ಮೇಲೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಇದು ಮುಂದುವರೆಯಲಿದೆ ಎಂದು ತಿಳಿಸಿದೆ. ಒಂದು ವೇಳೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೆಲಸ ಮುಗಿದರೆ, ವಿದ್ಯುತ್ ಸರಬರಾಜು ಬೇಗ ಪುನಃಸ್ಥಾಪನೆಯಾಗಲಿದೆ ಎಂದು ತಿಳಿಸಿದೆ.
ಶನಿವಾರ ಎಲ್ಲೆಲ್ಲಿ ಕರೆಂಟ್ ಕಟ್?: ಜನವರಿ 3ರ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 220/66/11ಕೆ.ವಿ ಇ.ಪಿ.ಐ.ಪಿ ಸ್ಟೇಷನ್‌ನಲ್ಲಿ 31.5 ಎಮ್.ವಿ.ಎ ಶಕ್ತಿ ಪರಿವರ್ತಕ -3 ರ ರಿಟ್ರೋಫಿಲ್ಲಿಂಗ್ ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ಮಧ್ಯಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುವುದು.
ಎಲ್ & ಟಿ, ಆರ್‌ಎಂಝೆಡ್ ನೆಕ್ಸ್ಟ್, ರಾಗಿಹಳ್ಳಿ-ಸಿದ್ದಾಪುರ ಗೇಟ್, ಇಪಿಐಪಿ ಲೇಔಟ್, ಟಿಸಿಎಸ್ ಸಾಫ್ಟ್ವೇರ್, ಎಸ್‌ಜೆಆರ್ ಟೆಕ್ ಪಾರ್ಕ್, ಎಂ/ಎಸ್ ವಿಎಸ್ಎನ್ಎಲ್ ಫೀಡರ್, ರಿಲಯನ್ಸ್ ಬಿಗ್ ಬಜಾರ್, ಓರಿಯಂಟಲ್ ಹೋಟೆಲ್, ಏರ್‌ಟೆಲ್, ಗೋಪಾಲನ್ ಎಂಟರ್ಪ್ರೈಸಸ್, ಸದಾ ಟೆಕ್ ಪಾರ್ಕ್, ಕ್ವಾಲ್ಕಾಮ್, ಕ್ವಾಲ್ಕಾಮ್-2, ಜಿಇ ಬಿಇ ಕಂಪನಿ, ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.












Click it and Unblock the Notifications