ಬೆಂಗಳೂರಿನ ರಸ್ತೆ ಗುಂಡಿಗಳು, ಬಿಬಿಎಂಪಿ ಕೊಟ್ಟ ಲೆಕ್ಕ
ಬೆಂಗಳೂರು, ನವೆಂಬರ್ 6 : ಬೆಂಗಳೂರು ನಗರದಲ್ಲಿ ಇನ್ನೂ 884 ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಹೊಸದಾಗಿ ನಗರದಲ್ಲಿ 300 ಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ನವೆಂಬರ್ 4ರಂದು ಬಿಬಿಎಂಪಿ ನಗರದ ರಸ್ತೆಗುಂಡಿಗಳ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಒಟ್ಟು 696 ಗುಂಡಿಗಳಿವೆ. ಹೊಸದಾಗಿ 300 ಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 152 ಗುಂಡಿಗಳನ್ನು ಮುಚ್ಚಲಾಗಿದ್ದು, 884 ಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ ಎಂದು ಪಾಲಿಕೆ ಹೇಳಿದೆ.

ನಗರದ ಎಲ್ಲಾ ವಾರ್ಡ್‌ಗಳ ರಸ್ತೆಗಳಲ್ಲಿರುವ ಗುಂಡಿಗಳನ್ನು ನವೆಂಬರ್ 5ರೊಳಗೆ ಮುಚ್ಚುತ್ತೇವೆ ಎಂದು ಪಾಲಿಕೆ ಹೇಳಿತ್ತು. ನಿಮ್ಮ ಬಡಾವಣೆಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆಯೇ? ಎಂಬುದಕ್ಕೆ ಜನರೇ ಉತ್ತರ ಹೇಳಬೇಕು.
ವಲಯವಾರು ಅಂಕಿ-ಸಂಖ್ಯೆಗಳು (ನ.4ವರದಿಯಂತೆ)
* ಬೊಮ್ಮನಹಳ್ಳಿ ವಲಯ - 145
* ದಾಸರಹಳ್ಳಿ - 25
* ಮಹದೇವಪುರ - 0
* ಯಲಹಂಕ -
* ದಕ್ಷಿಣ - 223
* ಪೂರ್ವ - 113
* ಪಶ್ಚಿಮ - 0











Click it and Unblock the Notifications