ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೂರ್ತಿ ಮುರುಘಾ ಶರಣರ ವಿರುದ್ದ ಫೋಕ್ಸೋ ಪ್ರಕರಣ: ಮಠದ ವಕೀಲ ಪ್ರತಿಕ್ರಿಯೆ ಏನು?

|
Google Oneindia Kannada News

ಬೆಂಗಳೂರು, ಆಗಸ್ಟ್ 27: ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಮಠದ ಪರವಾಗಿ ವಕೀಲರು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮಠದ ಹಿರಿಯ ಸ್ವಾಮೀಜಿ ಶಿವಮೂರ್ತಿ ಮುುರುಘಾ ಶರಣರು ವಿರುದ್ದ ಮಕ್ಕಳು ದೂರನ್ನು ನೀಡಿರುವುದರಿಂದ ಶ್ರೀಗಳು ಮಾತಾನಾಡುವುದಿಲ್ಲ. ಸ್ವಾಮೀಜಿಗೆ ಬಹಳ ಮನಸ್ಸಿಗೆ ನೋವಾಗಿದೆ. ಇದೊಂದು ಷಡ್ಯಂತ್ರದ ಭಾಗ ದೂರಿನ ಅಂಶ ತಿಳಿದ ಬಳಿಕ ಸ್ವಾಮೀಜಿ ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ.

POSCO case file aginest Muruga Mutt Swamiji: Advocates Official reaction here

ಮುರುಘಾ ಮಠದ ಬಳಿ ವಕೀಲ ವಿಶ್ವನಾಥಯ್ಯ ಹೇಳಿಕೆ:
ಮುರುಘಾಮಠ ಶಿವಮೂರ್ತಿ ಮುರುಗ ಶರಣರ ವಿರುದ್ದ ಪೋಕ್ಸೋ ಕಾಯ್ದೆ ಮೈಸೂರಿನಲ್ಲಿ ಪ್ರಕರಣ ದಾಖಲು ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಬಳಿ ವಕೀಲ ವಿಶ್ವನಾಥಯ್ಯ ಹೇಳಿಕೆ ನೀಡಿದ್ದು, "ಮಾಧ್ಯಮಗಳಲ್ಲಿ ಬಂದ ಸುದ್ದಿಯಿಂದ ಸ್ವಾಮೀಜಿ ಅವರಿಗೆ ನೋವಾಗಿದೆ. ಮಕ್ಕಳು ಮೈಸೂರು ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರ ಗೊತ್ತಾಗಿದೆ. ದೂರಿನ ಪೂರ್ಣ ವಿವರ ನಮಗೆ ಗೊತ್ತಿಲ್ಲ. ಇದರಿಂದ ಸ್ವಾಮೀಜಿ ಅವರಿಗೆ ಬಹಳ ನೋವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಆದರೆ ಯಾವುದೋ ಮಠದ ವಿರೋಧಿ ಶಕ್ತಿ ಅತೀ ಆಸೆಯಿಂದ ಇಂಥ ಕೆಲಸ ಮಾಡಿರಬಹುದು. ಮಕ್ಕಳನ್ನು ದುರ್ಬಳಕೆ ಮಾಡಿಕೊಂಡು ದೂರು ನೀಡಿದ್ದಾರೆ" ಎಂದು ಹೇಳಿದ್ದಾರೆ.

ದೂರಿನ ಹಿಂದೆ ವಿರೋಧಿ ಶಕ್ತಿಗಳ ಕೈವಾಡ
"ಇದರ ಹಿಂದೆ ವಿರೋಧಿ ಶಕ್ತಿಗಳ ಕೈವಾಡ ಇದೆ ಎಂದು ತಿಳಿದು ಬಂದಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಹೆಚ್ಚಿನದಾಗಿ ದೂರಿನ ಅಂಶಗಳು ಬಂದ ಮೇಲೆ ಸ್ವಾಮೀಜಿ ಮಾತನಾಡುತ್ತಾರೆ. ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ. ಅವರು ತಪ್ಪು ದೂರು ನೀಡಿದ್ದರೆ ಮುರುಘೇಶ ಅವರಿಗೆ ಬುದ್ದಿ ನೀಡಲಿ. ತಪ್ಪಿನ ಅರಿವಾಗಿ ಅವರು ಕೇಸ್ ವಾಪಸ್ ಪಡೆಯಲಿ. ಎಲ್ಲಾ ಭಕ್ತ ವೃಂದದ ಪರವಾಗಿ ದೇವರಲ್ಲಿ ಪ್ರಾರ್ಥಿಸುವೆ" ಚಿತ್ರದುರ್ಗದ ಮುರುಘಾ ಮಠದ ಬಳಿ ವಕೀಲ ವಿಶ್ವನಾಥಯ್ಯ ಎಂದು ತಿಳಿಸಿದ್ದಾರೆ.

POSCO case file aginest Muruga Mutt Swamiji: Advocates Official reaction here

ದೂರಿನ ಸಾರಾಂಶವೇನು?
ಮುರುಘಾಮಠದ ಸ್ವಾಜೀಜಿಗಳಾದ ಶಿವಮೂರ್ತಿ ಮುರುಘಾ ಶರಣರು ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಮೂರುವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ. ಇವರಿಗೆ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿಗಳಾದ ಬಸವಾದಿತ್ಯ , ಲಾಯರ್ ಗಂಗಾಧರಯ್ಯ, ಲೀಡರ್ ಪರಮ ಶಿವಯ್ಯ ಸಹಾಯವನ್ನು ಮಾಡಿರುತ್ತಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಮೈಸೂರಿನ ಮುಂದೆ ಹಾಜರು ಪಡಿಸಿರುತ್ತಾರೆ. ಮಕ್ಕಳ ಹೇಳಿಕೆಯನ್ನು ಪಡೆದಿರುವ ವೇಳೆ ಲೈಂಗಿಕ ದೌರ್ಜನ್ಯ ನೀಡಿರುವುದು ತಿಳಿದು ಬಂದಿರುತ್ತದೆ. ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿಯನ್ನು ಮಾಡಿದ್ದು ಮಕ್ಕಳಿಗೆ ತಾತ್ಕಾಲಿಕವಾಗಿ ಒಡನಾಡಿ ಸಂಸ್ಥೆಯಲ್ಲಿ ವಸತಿಯನ್ನು ಕಲ್ಪಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

English summary
Chitradurga Muruga Math Shivamurthy Muruga Sharanaru against POCSO Math Advocate Official reaction here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X