ಬೆಳ್ಳಂದೂರಿನ ಪಬ್ ಮೇಲೆ ದಾಳಿ, ಆಫ್ರಿಕಾ ಡಿ.ಜೆಗಳು ಸೇರಿ 15 ಮಂದಿ ಬಂಧನ

ಬೆಂಗಳೂರು, ಜುಲೈ 30 : ಬೆಳ್ಳಂದೂರಿನ ಸೆಂಟ್ರಲ್‌ ಮಾಲ್ ನಲ್ಲಿರುವ 'ಚಾರ್‌ಕೋಲ್ ಶರಬ್ ಫ್ಯಾಕ್ಟರಿ' ಪಬ್ ಮೇಲೆ ವೈಟ್‌ಫೀಲ್ಡ್ ಪೊಲೀಸರು ದಾಳಿ ನಡೆಸಿ 15 ಮಂದಿಯನ್ನು ಬಂಧಿಸಿದ್ದಾರೆ.

'ಚಾರ್‌ಕೋಲ್ ಶರಬ್ ಫ್ಯಾಕ್ಟರಿ' ಪಬ್ ನಲ್ಲಿ ಅವಧಿ ಮೀರಿ ಅಬ್ಬರದ ಸಂಗೀತದೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದ ಆಫ್ರಿಕಾ ಖಂಡದ ಇಬ್ಬರು ಡಿಜೆಗಳು ಸೇರಿ ಒಟ್ಟು 15 ಮಂದಿಯನ್ನು ಬಂಧಿಸಿದ್ದಾರೆ.

Police raid on Bellandur Charkol pub 15 arrested over illegal night party

'ನಿಯಮದ ಪ್ರಕಾರ ರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಗಳು ವಹಿವಾಟ ನಡೆಸಬೇಕು. ಆದರೆ, 3 ಗಂಟೆಯಾದರೂ ಈ ಪಬ್ ನಲ್ಲಿ ಸಂಗೀತ-ನೃತ್ಯ ನಡೆಯುತ್ತಿತ್ತು. ಅಲ್ಲದೆ, ಗ್ರಾಹಕರಿಗೆ ಮಾದಕ ವಸ್ತುಗಳ ಪೂರೈಕೆಯೂ ಆಗುತ್ತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ನಸುಕಿನ ವೇಳೆ ದಾಳಿ ನಡೆಸಿದೆವು' ಎಂದು ಹಿರಿಯ ಆಧಿಕಾರಿಯೊಬ್ಬರು ತಿಳಿಸಿದರು.

'ಪಬ್ ಮಾಲೀಕ ಚಿದಂಬರಂ, ಆಫ್ರಿಕಾದ ಡಿಜೆಗಳಾದ ಇಸ್ಮಾಯಿಲ್ ಹಗ್, ಫಯಾಜ್‌ ಹುದಾ ಹಾಗೂ ಅಲ್ಲಿನ 12 ನೌಕರರನ್ನು ಬಂಧಿಸಿದ್ದೇವೆ. ಪಬ್ ನಲ್ಲಿ ಸಿಕ್ಕ 1 ಕೆ.ಜಿ. 200 ಗ್ರಾಂ ಗಾಂಜಾ ಹಾಗೂ ಸಂಗೀತ ಪರಿಕರಗಳನ್ನು ಜಪ್ತಿ ಮಾಡಿದ್ದೇವೆ' ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+