ಭಾರತ-ಪಾಕ್ ನಡುವೆ ಉದ್ವಿಗ್ನತೆ: ಬೆಂಗಳೂರಿಗರೇ ಹುಷಾರ್;‌ ಡಿ ಕೆ ಶಿವಕುಮಾರ್‌ ಕೊಟ್ಟ ಮಾಹಿತಿ ಇಲ್ಲಿದೆ

ಬೆಂಗಳೂರು, ಮೇ 10: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವಂತೆಯೇ ರಾಜ್ಯದ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ವ್ಯಾಪ್ತಿಗೆ ಬರುವ ಜಲಾಶಯಗಳು ಮತ್ತು ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿನ ಭದ್ರತೆ ಕರ್ನಾಟಕ ಸರ್ಕಾರ ಒದಗಿಸಲಾಗಿದೆ. ಅಲ್ಲದೇ ಬೆಂಗಳೂರಿನ ಭದ್ರತೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಹೇಳಿದರು. ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟ ಸಂದೇಶವನ್ನು ರವಾನಿಸುತ್ತೇವೆ. ದೇಶದ ಐಕ್ಯತೆ ಗಮನದಲ್ಲಿಟ್ಟುಕೊಂಡು ಯೋಧರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾಗಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಇತರೆ ವಿಚಾರ ಚರ್ಚೆ ಮಾಡಿ ನಂತರ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಣೆಕಟ್ಟುಗಳಿಗೆ ಭದ್ರತೆ ಒದಗಿಸಿರುವ ಬಗ್ಗೆ ಕೇಳಿದಾಗ, "ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಅಣೆಕಟ್ಟುಗಳಿಗೆ ಭದ್ರತೆ ಒದಗಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಸರ್ಕಾರ ಈ ಕ್ರಮ ಕೈಗೊಂಡಿದೆ. ತಾಂತ್ರಿಕ ಸಿಬ್ಬಂದಿಗಳ ಹೊರತಾಗಿ ಯಾವುದೇ ಪ್ರವಾಸಿಗರಿಗೆ ಅಣೆಕಟ್ಟಿನ ಬಳಿ ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದ್ದೇವೆ. ಇದು ದೇಶದ ವಿಚಾರ ಸಾರ್ವಜನಿಕರು ಈ ವಿಚಾರವಾಗಿ ಸಹಕಾರ ನೀಡಬೇಕು ಎಂದು ತಿಳಿಸಿದರು.

Police Officials Are Taking Necessary Measures Regarding Security In Bengaluru DK Shivakumar

ಜೆ.ಹೆಚ್ ಪಟೇಲರ ಕಾಲದಲ್ಲಿ ಇದನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದರು. ನಂತರ ನೀರು, ವಿದ್ಯುತ್ ಸಂಸ್ಥೆಗಳು ಸರ್ಕಾರದ ನಿಯಂತ್ರಣದಲ್ಲೇ ಇಟ್ಟುಕೊಳ್ಳಬೇಕು ಎಂದು ತೀರ್ಮಾನಿಸಿದೆವು. ದೆಹಲಿ ಹಾಗೂ ಮುಂಬೈನಲ್ಲಿ ವಿದ್ಯುತ್ ಸರಬರಾಜನ್ನು ಖಾಸಗಿಯವರಿಗೆ ನೀಡಿದ್ದಾರೆ. ನನ್ನ ಬಳಿಗೂ ದೊಡ್ಡ ಕಂಪನಿಗಳು ಬಂದು ಇದನ್ನು ನಮಗೆ ಹಸ್ತಾಂತರ ಮಾಡಿ ನಾವು ಇದನ್ನು ನಡೆಸುತ್ತೇವೆ ಎಂದು ಕೇಳಿದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದರು.

Take a Poll

ಕೊಳಚೆ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪ್ರತ್ಯೇಕವಾಗಿ ಸಭೆ ಮಾಡಿ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ನೀರನ್ನು ಸಂಸ್ಕರಿಸಲು ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕುಗಳ ನೆರವು ಪಡೆಯಲಾಗುವುದು. ಇನ್ನು ಕಸ ವಿಲೇವಾರಿ ವಿಚಾರವಾಗಿ ಕೆಲವರು ಮಾಫಿಯಾ ಮಾಡಿಕೊಂಡಿದ್ದರು. ನಾವು ತನಿಖೆ ಮಾಡಿಸಿದ್ದೇವೆ. ನ್ಯಾಯಾಲಯ ಈಗ ನಮಗೆ ಟೆಂಡರ್ ಕರೆಯಲು ಅವಕಾಶ ನೀಡಿದೆ. ಬೆಂಗಳೂರಿನ ಅಭಿವೃದ್ಧಿಗೆ ಕಸ ವಿಲೇವಾರಿ, ಕೊಳಚೆ ನೀರು, ಕುಡಿಯುವ ನೀರು, ವಿದ್ಯುತ್, ಸಂಚಾರ ಕ್ಷೇತ್ರಗಳ ಬಗ್ಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ನೆಲಮಂಗಲದ ಯೋಜನೆ ವಿಚಾರವಾಗಿ ರೈತರು ವಿರೋಧ ಮಾಡುತ್ತಿದ್ದಾರೆ ಎಂದು ಕೇಳಿದಾಗ, "ಅಲ್ಲಿ ವಿರೋಧ ಮಾಡುತ್ತಿರುವವರು ರೈತರಲ್ಲ. ಅವರು ರೈತ ವಿರೋಧಿಗಳು ನಾವು ಬಿಡಬ್ಲ್ಯೂಎಸ್ಎಸ್ ಬಿ ವತಿಯಿಂದ ನೀರನ್ನು ಸಂಸ್ಕರಿಸಿ ನೀಡುತ್ತಿದ್ದೇವೆ. ಕೋಲಾರಕ್ಕೆ ಹೋಗಿ ನೋಡಲಿ. ವಿರೋಧ ಮಾಡುವವರಿಗೆ ತಲೆಕೆಡಿಸಿಕೊಳ್ಳಲು ಆಗುವುದಿಲ್ಲ. ಕೆರೆಗಳಿಗೆ ತುಂಬಿಸಿದ ನೀರು ಭೂಮಿಯ ಮೂಲಕ ಇಂಗುವಾಗ ಮತ್ತಷ್ಟು ಶುದ್ಧೀಕರಣವಾಗುತ್ತದೆ. ಆಮೂಲಕ ಅಂತರ್ಜಲ ಏರಿಕೆಯಾಗುತ್ತದೆ. ವೃಷಭಾವತಿ ನೀರು ಅರ್ಕಾವತಿ ಮೂಲಕ ನಮಗೆ ನೀರು ಬರುತ್ತಿಲ್ಲವೇ? ಕನಕಪುರ ಟೌನ್ ನಲ್ಲಿ ಹರಿಯುವ ನೀರು ಇದೇ ಆಗಿದೆ. ನಾವು ಅದನ್ನು ಕುಡಿದು ಗಟ್ಟಿಯಾಗಿಲ್ಲವೇ?" ಎಂದು ತಿರುಗೇಟು ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+