• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ಚರ! ಸ್ಯಾಟ್ ಲೈಟ್ ಬಸ್ ನಿಲ್ದಾಣದ ಕಳ್ಳರ ಬಗ್ಗೆ ಗಮನವಿರಲಿ!

|

ಬೆಂಗಳೂರು, ಮಾರ್ಚ್ 21: ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರೇ ಎಚ್ಚರ! ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಮೈಸೂರಿನತ್ತ ಪ್ರಯಾಣಿಸುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಬ್ಯಾಗ್ ಕದಿಯುವ ಕಳ್ಳ ಗ್ಯಾಂಗ್ ಸಕ್ರಿಯವಾಗಿದೆ. ಪ್ರಯಾಣಿಕರ ಬ್ಯಾಗ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ ಆತನಿಂದ ಬರೋಬ್ಬರಿ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಸಿದ್ಧಿಕ್ ಬಂಧಿತ ಆರೋಪಿ. ಈತ ಮೈಸೂರು ರಸ್ತೆಯಲ್ಲಿರುವ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿ ಟಿಕಾಣಿ ಹೂಡುತ್ತಿದ್ದ. ಹಣ, ಚಿನ್ನಾಭರಣ ಇರುವ ಪ್ರಯಾಣಿಕರ ಚಲನವಲನ ಗಮನಿಸುತ್ತಿದ್ದ. ಸ್ವಲ್ಪ ಮೈ ಮರೆತರೆ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ.

ಇತ್ತೀಚೆಗೆ ಸ್ಯಾಟ್ ಲೈಟ್ ಬಸ್ ನಿಲ್ದಾಣ ಸಮೀಪ ಸರಣಿ ಕಳ್ಳತನ ಪ್ರಕರಣ ವರದಿಯಾಗಿದ್ದವು. ಈ ಕುರಿತು ದಾಖಲಾದ ದೂರುಗಳನ್ನಾಧರಿಸಿ ಬ್ಯಾಟರಾಯನಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಸಿದ್ಧಿಕ್‌ನನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಹಲವಾರು ಪ್ರಯಾಣಿಕರ ಬ್ಯಾಗ್ ಕದ್ದಿರುವ ಸಂಗತಿ ಬಾಯಿಬಿಟ್ಟಿದ್ದಾನೆ. ಇನ್ನು ಇದೇ ರೀತಿ ಬ್ಯಾಗ್ ಕದಿಯುವ ಕಳ್ಳರ ಗ್ಯಾಂಗ್ ಸಕ್ರಿಯವಾಗಿದೆ.

   ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 14ಕ್ಕೆ ಏರಿಕೆ-2 ಹೊಸ ವಾರ್ಡ್ ಸೇರ್ಪಡೆಗೊಳಿಸಿದ ಬಿಬಿಎಂಪಿ | Oneindia Kannada

   ರಾತ್ರಿ ಪ್ರಯಾಣ ಎಚ್ಚರಿಕೆ: ಬೆಂಗಳೂರಿನಿಂದ ಮೈಸೂರಿಗೆ ಬಂದು ಹೋಗುವ ಬಸ್‌ಗಳು ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿರುತ್ತವೆ. ವಾರಂತ್ಯದ ದಿನಗಳಲ್ಲಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅದರಲ್ಲೂ ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕರು ಬಸ್‌ನಲಲ್ಲಿ ನಿದ್ದೆ ಮಾಡಿ ಮೈ ಮರೆತರೆ ಅಂತವರ ಬ್ಯಾಗ್‌ಗಳನ್ನು ಪ್ರಯಾಣಿಕರ ಸೋಗಿನಂತೆ ತೆಗೆದುಕೊಂಡು ಪರಾರಿಯಾಗುತ್ತಾರೆ. ಇನ್ನು ಬಸ್ ನಿಲ್ದಾಣದ ಬಳಿ ಹಣ ತೋರಿಸುವುದು, ಆಭರಣ ಪ್ರದರ್ಶನ ಮಾಡಿಕೊಂಡು ಹೋಗುವ ಪ್ರಯಾಣಿಕರನ್ನೇ ಈ ಕಳ್ಳರು ಟಾರ್ಗೆಟ್ ಮಾಡುತ್ತಾರೆ. ಹೀಗಾಗಿ ಪ್ರಯಾಣ ವೇಳೆ ಹಣ ಮತ್ತು ಆಭರಣ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸಲಹೆ ಮಾಡಿದ್ದಾರೆ.

   English summary
   Byatarayanapura police have arrested a thief who was targeting passengers traveling to Mysuru from Satellite Bus stand.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X