ರೌಡಿ ಶೀಟರ್ ಅಲೀಂ ಮೇಲೆ ಗುಂಡು ಹಾರಿಸಿದ ಪೊಲೀಸರು!
ಬೆಂಗಳೂರು, ಜನವರಿ 24: ಕೆಲ ದಿನಗಳ ಹಿಂದೆ ಪೇದೆ ರಾಜೇಂದ್ರ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಬೆಂಗಳೂರು ರೌಡಿ ಶೀಟರ್ ಅಲೀಂ ಎಂಬಾತನ ಮೇಲೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಪೊಲೀಸರು ಗುಂಡಿನ ದಾಳಿ ನಡೆಸಿದರು.
ಕ್ಷುಲ್ಲಕ ಕಾರಣಕ್ಕಾಗಿ ಪೊಲೀಸ್ ಪೇದೆ ಅಲೀಂ ಮೇಲೆ ಹಲ್ಲೆ ನಡೆಸಿದ್ದ, ಈ ಕಾರಣಕ್ಕೆ ಅಲೀಂನನ್ನು ಬಂಧಿಸಲು ಪೊಲೀಸರ ತಂಡ ತೆರಳಿತ್ತು. ನೈಸ್ ರಸ್ತೆಯಲ್ಲಿ ಇದ್ದಾನೆ ಎಂಬ ಮಾಹಿತಿ ಪಡೆದ ಜೀವನ್ ಭೀಮಾ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಲಿಂಗರಾಜು ನೇತೃತ್ವದ ತಂಡ ದಾಳಿ ನಡೆಸಿತು.

ಈ ವೇಳೆ ಮರು ದಾಳಿ ನಡೆಸಲು ರೌಡಿ ಶೀಟರ್ ಅಲೀಂ ಯತ್ನಿಸಿದ್ದರಿಂದ ಲಿಂಗರಾಜು ಅವರು ಆತ್ಮರಕ್ಷಣೆಗಾಗಿ ರೌಡಿ ಅಲೀಂ ಕಾಲಿಗೆ ಗುಂಡು ಹಾರಿಸಿದ್ದಾರೆ. ಸಂದರ್ಭದಲ್ಲಿ ವೆಂಕಟೇಶ್ ಎಂಬ ಪೇದೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications