ಬೆಂಗಳೂರು ಪೊಲೀಸರಿಗೆ ತಲೆನೋವು ತಂದ ಬೈಕ್‌ಗಳು!

ಬೆಂಗಳೂರು, ಏಪ್ರಿಲ್ 23 : ಬೆಂಗಳೂರು ನಗರದಲ್ಲಿ ಬೈಕ್ ಪಾರ್ಕಿಂಗ್ ಸಮಸ್ಯೆ ಎಲ್ಲರಿಗೂ ತಿಳಿದಿದೆ. ಆದರೆ, ಈ ಲಾಕ್ ಡೌನ್ ಸಮಯದಲ್ಲಿ ವಾಹನ ಸಂಚಾರ ವಿರಳವಾಗಿರುವಾಗ ಪಾರ್ಕಿಂಗ್ ಸಮಸ್ಯೆ ಉಂಟಾಗಿದೆ.

ಲಾಕ್ ಡೌನ್ ಸಮಯದಲ್ಲಿ ಬೈಕ್ ಎತ್ತಿಕೊಂಡು ಎಲ್ಲಿಗೆ ಹೋಗುತ್ತಿರಿ? ಎಂದು ಜನರು ಚಿಂತಿಸಬೇಕಾಗಿಲ್ಲ. ಈಗ ಪಾರ್ಕಿಂಗ್ ಸಮಸ್ಯೆ ಎದುರಾಗಿರುವುದು ಬೆಂಗಳೂರು ಪೊಲೀಸರಿಗೆ. ಎಲ್ಲಾ ಪೊಲೀಸ್ ಠಾಣೆಗಳ ಮುಂದೆ ಸಾಲು-ಸಾಲು ಬೈಕ್‌ಗಳು ನಿಂತಿವೆ.

ಬೆಂಗಳೂರು ಪೊಲೀಸರು ಲಾಕ್ ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ. ಆದ್ದರಿಂದ, ಅನಗತ್ಯವಾಗಿ ಸಂಚಾರ ನಡೆಸುವ ಬೈಕ್, ಕಾರುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

Police Facing Parking Problem For Sized Bikes

ಹೀಗೆ ವಶಕ್ಕೆ ಪಡೆದ ಬೈಕ್‌ಗಳನ್ನು ಅಂದೇ ವಾಪಸ್ ನೀಡುತ್ತಿಲ್ಲ. ಮೇ ತಿಂಗಳ ತನಕ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದುವರೆಗೂ ನಗರದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಬೈಕ್ ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದ ಬೈಕ್‌ಗಳನ್ನು ಸಂಚಾರಿ ಪೊಲೀಸ್ ಠಾಣೆ ಮುಂದೆ ನಿಲ್ಲಿಸಲಾಗುತ್ತಿತ್ತು. ಆದರೆ, ಈಗ ಆ ಜಾಗಗಳು ಭರ್ತಿಯಾಗಿವೆ. ಮತ್ತೊಂದು ಕಡೆ ವಶಕ್ಕೆ ಪಡೆದ ಬೈಕ್‌ಗಳು ಠಾಣೆಗೆ ಬರುತ್ತಲೇ ಇದೆ. ಇದರಿಂದಾಗಿ ಪೊಲೀಸರಿಗೆ ತಲೆನೋವು ಉಂಟಾಗಿದೆ.

ಶಾಲಾ-ಕಾಲೇಜುಗಳ ಆವರಣದಲ್ಲಿನ ಫೀಲ್ಡ್‌ಗಳನ್ನು ಪಾರ್ಕಿಂಗ್ ಲಾಟ್‌ ಆಗಿ ಬದಲಾವಣೆ ಮಾಡಲಾಗಿದೆ. ಮೈದಾನದಲ್ಲಿ ಬೈಕ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಬಿಸಿಲು, ಮಳೆ ಎಲ್ಲದಕ್ಕೂ ಹೊಂದಿಕೊಂಡು ಬೈಕ್‌ ಅಲ್ಲಿ ನಿಂತಿವೆ.

ಬುಧವಾರ ಒಂದೇ ದಿನ ನಗರದಲ್ಲಿ 100ಕ್ಕೂ ಅಧಿಕ ಬೈಕ್ ವಶಪಡಿಸಿಕೊಳ್ಳಲಾಗಿದೆ. ಒಟ್ಟಾಗಿ ಪಾರ್ಕ್ ಮಾಡಿದ ಬೈಕ್‌ಗಳು ಸುಸ್ಥಿತಿಯಲ್ಲಿ ಇರುತ್ತವೆಯೇ?, ಅವುಗಳು ಜಖಂಗೊಂಡರೆ ಯಾರ ಜವಾಬ್ದಾರಿ? ಎಂಬುದಕ್ಕೆ ಪೊಲೀಸರೇ ಉತ್ತರ ಕೊಡಬೇಕು.

2ನೇ ಹಂತದ ಲಾಕ್ ಡೌನ್ ಮೇ 3ರ ತನಕ ಜಾರಿಯಲ್ಲಿರುತ್ತದೆ. ಕರ್ನಾಟಕದಲ್ಲಿ ಲಾಕ್ ಡೌನ್ ಸ್ಪಲ್ಪ ಸಡಿಲಿಕೆ ಮಾಡಲಾಗಿದೆ. ಹಾಗೆಂದು ಸುಮ್ಮನೆ ಬೈಕ್ ಹತ್ತಿಕೊಂಡು ತಿರುಗಲು ಹೊರಟರೆ ಬೈಕ್ ಪೊಲೀಸರ ಕೈ ಸೇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+