ಸೈಕಲ್‌ನಲ್ಲಿ ಬೆಂಗಳೂರು ಪೊಲೀಸರ ಬೀಟ್
ಬೆಂಗಳೂರು, ಡಿಸೆಂಬರ್ 16 : ಬೆಂಗಳೂರು ನಗರದ ಪೊಲೀಸರು ಇನ್ನು ಮುಂದೆ ಸೈಕಲ್ ಮೂಲಕ ಬೀಟ್ ಕೈಗೊಳ್ಳಲಿದ್ದಾರೆ. ಹೌದು, ಇದರಿಂದಾಗಿ ಪೊಲೀಸರಿಗೆ ವ್ಯಾಯಾಮವಾಗಲಿದ್ದು, ಪರಿಸರ ಮಾಲಿನ್ಯವೂ ಕಡಿಮೆಯಾಗಲಿದೆ.
ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಸೈಕಲ್ ಮೂಲಕ ಬೀಟ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇದನ್ನು ಜಾರಿಗೆ ತರಲಾಗಿದೆ. ಪೊಲೀಸರು ಆಧುನಿಕ ಸೈಕಲ್ ಏರಿ ಬೀಟ್ ಕೈಗೊಳ್ಳಲಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಸೈಕಲ್ ಮೂಲಕ ಬೀಟ್ ಮಾಡುವ ವ್ಯವಸ್ಥೆಗೆ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ನಗರದ ಪ್ರತಿ ಪೊಲೀಸ್ ಠಾಣೆಗೆ 5 ಸೈಕಲ್‌ಗಳಂತೆ 500 ಸೈಕಲ್‌ಗಳನ್ನು ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ.
ದಶಕಗಳ ಹಿಂದೆ ಬೆಂಗಳೂರು ಪೊಲೀಸರು ಬೀಟ್‌ಗೆ ಸೈಕಲ್ ಬಳಕೆ ಮಾಡುತ್ತಿದ್ದರು. ಬಳಿಕ ಬುಲೆಟ್‌ಗಳು ಬಂದವು. ನಂತರ ಚೀತಾ, ಹೊಯ್ಸಳ ವಾಹನಗಳು ಬಂದವು. ಈಗ ಪುನಃ ಸೈಕಲ್‌ಗಳನ್ನು ಪೊಲೀಸರಿಗೆ ನೀಡಲಾಗುತ್ತಿದೆ.
ಹಿಂದೆ ಜ್ಯೋತಿ ಪ್ರಕಾಶ್ ಮಿರ್ಜಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಪೊಲೀಸರ ಬೀಟ್‌ಗೆ ಸೈಕಲ್ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಈಗ ಅದು ಜಾರಿಗೆ ಬರುತ್ತಿದ್ದು, ಆಧುನಿಕ ಸೈಕಲ್‌ಗಳನ್ನು ನೀಡಲಾಗುತ್ತಿದೆ.












Click it and Unblock the Notifications