ಫೇಸ್‌ಬುಕ್‌ನಲ್ಲಿ ಯುವತಿ ಅಶ್ಲೀಲ ಫೋಟೊ ಹಾಕಿದವ ಸೆರೆ
ಬೆಂಗಳೂರು, ಸೆ.4: ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಯುವತಿಯ ಅಶ್ಲೀಲ ಚಿತ್ರ ಹಾಕಿದವನ್ನು ಒಡಿಸ್ಸಾ ಸೈಬರ್ ಅಪರಾಧ ದಳದ ಪೊಲೀಸರು ನಗರದಲ್ಲಿ ಬಂಧಿಸಿದ್ದಾರೆ.
ಅಶ್ಲೀಲ ಚಿತ್ರ ಅಪ್ ಲೋಡ್ ಮಾಡಿದ ಪಂಚು ಪಾನ್(36) ಬಂಧಿತ ಆರೋಪಿ. ಯುವತಿಯೊಬ್ಬಳ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು ಆಕೆಯ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದ. ಈ ಬಗ್ಗೆ ಯುವತಿ ಒವತಿ ಒಡಿಸ್ಸಾ ಪೊಲೀಸರಿಗೆ ದೂರು ನೀಡಿದ್ದಳು.

ಯುವಕನ ಜಾಡು ಹಿಡಿದು ಬೆಂಗಳೂರಿಗೆ ಆಗಮಿಸಿದ ಪೊಲೀಸರು ಆರೋಪಿ ಪಂಚು ಪಾನ್ ನನ್ನು ಕರೆದೊಯ್ದಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೆಗ್ಗಡೆ ವಿರುದ್ಧ ಕಮೆಂಟ್ ಹಾಕುತಿದ್ದವರ ವಿರುದ್ಧ ದೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹಗಳನ್ನು ಹಾಕುತ್ತಿದ್ದ 10 ಜನರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications