ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾಮಠ ಶಿವಮೂರ್ತಿ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

|
Google Oneindia Kannada News

ಬೆಂಗಳೂರು, ಆಗಸ್ಟ್ 27: ಮುರುಘಾಮಠ ಶಿವಮೂರ್ತಿ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಎಫ್ ಐಆರ್ ದಾಖಲಾಗಿದೆ.

ಶಿವಮೂರ್ತಿ ಮುರುಘಾ ಶರಣರ ವಿರುದ್ದ ದೂರಿನಲ್ಲೇನಿದೆ
ಚಂದ್ರಶೇಖರ್ ಎಂಬುವವರು ದೂರನ್ನು ನೀಡಿದ್ದಾರೆ. 26.08.22 ರಂದು ಚಂದ್ರ ಕುಮಾರ್ ರವರು ಜಿಲ್ಲಾ ಮಕ್ಕಳ ಕಲ್ಯಾಣ ಘಟಕ ಮೈಸೂರು ಜಿಲ್ಲೆ ಕಾನೂನು ಮತ್ತು ಪರಿವೀಕ್ಷಣಾಧಿಕಾರಿಯಾಗಿದ್ದು ಒಡನಾಡಿ ಸಂಸ್ಥೆಯವರು ಅಪ್ರಾಪ್ತ ಬಾಲಕಿರು ಅಕ್ಕಮಹಾದೇವಿ ವಸತಿ ನಿಲಯದ ನಿವಾಸಿಗಳಾಗಿರುತ್ತಾರೆ. ಈ ವಸತಿ ನಿಲಯವು ಚಿತ್ರದುರ್ಗ ಮುರುಘಾಮಠದ ಅಧೀನದಲ್ಲಿರುತ್ತದೆ. ಈ ಸಂಸ್ಥೆಯ ಮುಖ್ಯಸ್ಥರಾದ ಮಠದ ಸ್ವಾಜೀಜಿಗಳಾದ ಶಿವಮೂರ್ತಿ ಮುರುಗ ಶರಣರು ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಮೂರುವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ. ಇವರಿಗೆ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿಗಳಾದ ಬಸವಾದಿತ್ಯ , ಲಾಯರ್ ಗಂಗಾಧರಯ್ಯ, ಲೀಡರ್ ಪರಮ ಶಿವಯ್ಯ ಸಹಾಯವನ್ನು ಮಾಡಿರುತ್ತಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿರುತ್ತಾರೆ. ಮಕ್ಕಳ ಹೇಳಿಕೆಯನ್ನು ಪಡೆದಿರುವ ವೇಳೆ ಲೈಂಗಿಕ ದೌರ್ಜನ್ಯ ನೀಡಿರುವುದು ತಿಳಿದು ಬಂದಿರುತ್ತದೆ. ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿಯನ್ನು ಮಾಡಿದ್ದು ಮಕ್ಕಳಿಗೆ ತಾತ್ಕಾಲಿಕವಾಗಿ ಒಡನಾಡಿ ಸಂಸ್ಥೆಯಲ್ಲಿ ವಸತಿಯನ್ನು ಕಲ್ಪಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

POCSO case registered against Murugha Mutt Seer Sri Shivamurthy Murugha Sharanaru at Nazarabad Police Station in Mysore

ಮಕ್ಕಳ ಹೇಳಿಕೆ ದಾಖಲು
"ಇಬ್ಬರು ಹೆಣ್ಣುಮಕ್ಕಳು ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. ಕಾನೂನು ಪ್ರಕಾರ 24 ಗಂಟೆ ಒಳಗೆ ಇದನ್ನು ಸಂಬಂಧ ಪಟ್ಟ ಇಲಾಖೆ ಗಮನಕ್ಕೆ ತರಬೇಕಾದದ್ದು ನಮ್ಮ ಕರ್ತವ್ಯ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮುಂದೆಯೇ ಹೆಣ್ಣುಮಕ್ಕಳು ಲಿಖಿತ ಹೇಳಿಕೆ‌ ನೀಡಿದ್ದಾರೆ. ಅದರಂತೆ ನಿನ್ನೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ" ಎಂದು ಒಡನಾಡಿ ಸಂಸ್ಥಾಪಕ ಸ್ಟಾನ್ಲಿ ತಿಳಿಸಿದ್ದಾರೆ.

English summary
POCSO case registered against Murugha Mutt Seer Sri Shivamurthy Murugha Sharanaru at Nazarabad Police Station in Mysore for Allegation of sexual harassment to Akkamahadevi Vidyarthi Nilaya minor students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X