ಬೆಂಗಳೂರು ನಗರದಲ್ಲಿ 3 ಕಿ. ಮೀ. ಓಡಿ; ಪ್ಲಾಸ್ಟಿಕ್ ಸಂಗ್ರಹಿಸಿ

ಬೆಂಗಳೂರು, ಸೆಪ್ಟೆಂಬರ್ 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಕ್ಟೋಬರ್ 2ರಂದು ನಗರದಲ್ಲಿ ಪ್ಲಾಸ್ಟಿಕ್ ಸಂಗ್ರಹಣಾ ಅಭಿಯಾನವನ್ನು ಆಯೋಜನೆ ಮಾಡಿದೆ. ಜನರು ಇದರಲ್ಲಿ ಕೈ ಜೋಡಿಸುವಂತೆ ಕರೆ ನೀಡಿದೆ.

ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಲು ಬಿಬಿಎಂಪಿ ಈ ಅಭಿಯಾನ ಕೈಗೊಂಡಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಅಭಿಯಾನಕ್ಕೆ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಎಂ. ಜಿ. ರಸ್ತೆಯಲ್ಲಿ ಬೆಳಗ್ಗೆ 7.30ಕ್ಕೆ ಚಾಲನೆ ನೀಡಲಿದ್ದಾರೆ.

ನಗರದ 50 ಕಡೆ ಓಡುವ ಜೊತೆಗೆ ಪ್ಲಾಸ್ಟಿಕ್ ಸಂಗ್ರಹ ಮಾಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಜಾಗದಲ್ಲಿ ಕನಿಷ್ಠ 200 ರಿಂದ 250 ಜನರು ಇರಲಿದ್ದು, 3 ಕಿ.ಮೀ. ಓಡುವ ಮೂಲಕ ಪ್ಲಾಸ್ಟಿಕ್ ಸಂಗ್ರಹ ಮಾಡಲಿದ್ದಾರೆ.

Plastic Collection Campaign In Bengaluru On October 2

ಜನರು ಮೂರು ಕಿಲೋಮೀಟರ್ ಓಡುವಾಗ ಅಕ್ಕಪಕ್ಕದಲ್ಲಿ ಕಾಣುವ ಪ್ಲಾಸ್ಟಿಕ್ ಸಂಗ್ರಹಿಸಿ ಕೈ ಚೀಲದಲ್ಲಿ ಹಾಕಲಿದ್ದಾರೆ. ಓಡುವ ಎಲ್ಲರಿಗೂ ಪಾಲಿಕೆ ಕೈ ಚೀಲ ವಿತರಣೆ ಮಾಡಲಿದೆ. ಅಂದು ನಗರದಲ್ಲಿ ಲಕ್ಷಾಂತರ ಟನ್ ಪ್ಲಾಸ್ಟಿಕ್ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ.

ಅಕ್ಟೋಬರ್ 2ರ ತನಕ ಮನೆಗಳಿಂದ ಪ್ಲಾಸ್ಟಿಕ್ ಸಂಗ್ರಹ ಮಾಡಲು ಪೌರ ಕಾರ್ಮಿಕರಿಗೆ ಬಿಬಿಎಂಪಿ ಸೂಚನೆ ನೀಡಿದೆ. ಸಂಗ್ರಹವಾದ ಪ್ಲಾಸ್ಟಿಕ್‌ಗಳನ್ನು ತ್ಯಾಜ್ಯ ಮರುಬಳಕೆ ಇಲ್ಲವೇ ಸಿಮೆಂಟ್ ತಯಾರಿಕೆಗೆ ನೀಡಲು ಚಿಂತನೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+