• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾನಪದ ಲೋಕದ ಮೇರು ನೃತ್ಯ ಹುಲಿವೇಷದ ಸುತ್ತ

By Vanitha
|

ಬೆಂಗಳೂರು, ಸೆ, 01 : ಜಾನಪದ ಲೋಕದ ಸೌಂದರ್ಯ, ಬೆಡಗಿಗೆ ಮಾರು ಹೋಗದ ಜನರಿಲ್ಲ. ಜನರಿಂದಲೇ ಹುಟ್ಟಿದ ಕಲೆಗಳು ಇದೀಗ ಸರ್ವವ್ಯಾಪಿಯಾಗಿ ಕಲಾಭಿಮಾನಿಗಳ ಮನತಣಿಸುತ್ತಿದೆ.

ನಮ್ಮ ಜಾನಪದರು ಮೂಲತಃ ಹಳ್ಳಿಗರು, ಇವರಿಗೆ ಸಮಯ ಕಳೆಯಲು ತಮ್ಮ ಬದುಕಿನ ನೋವು-ನಲಿವುಗಳನ್ನು ಪದ ಮಾಡಿ ಹಾಡಿದರು. ಒಂದೊಂದೇ ಹೆಜ್ಜೆ ಹಾಕಿ ನೃತ್ಯದ ಮೂಲಕ ಸಂಸ್ಕೃತಿ ಕೊಂಡೊಯ್ಯುವ ಕೂಸುಗಳಾದರು ನಮ್ಮ ಜನಪದರು.

ಹೌದು...ಜಾನಪದ ಲೋಕದಲ್ಲಿ ಜನಪದ ನೃತ್ಯ ಹಾಡು, ಗಾದೆ, ಆಟ ಹೀಗೆ ನಾನಾ ವೈವಿದ್ಯತೆ ಮೇಳೈಸಿಕೊಂಡಿದೆ. ಇವು ರಾಜ್ಯ, ದೇಶದ ಅಚಾರ, ವಿಚಾರ ಸಂಸ್ಕೃತಿಗೆ ಅನುಗುಣವಾಗಿ ಬದಲಾಗುತ್ತಾ ಸಾಗುತ್ತದೆ.[ಉಳಿಸ ಬನ್ನಿ ಮೂಡಲಪಾಯ ಯಕ್ಷಗಾನ]

ಕರ್ನಾಟಕ ಜಾನಪದ ಲೋಕದಲ್ಲಿ ಜಾನಪದ ನೃತ್ಯಗಳು ತನ್ನ ಹೆಜ್ಜೆ, ಕುಣಿತ, ವೇಷಗಳು ಇನ್ನಿತರ ಅಂಶಗಳಿಂದಾಗಿ ಮೇರು ಸ್ಥಾನದಲ್ಲಿ ನಿಂತಿದೆ. ಇದರಲ್ಲಿ ಡೊಳ್ಳು ಕುನಿತ, ವೀರಗಾಸೆ ,ಕಂಸಾಳೆ, ಪೂಜಾ ಕುಣಿತ, ಹುಲಿವೇಷ ಹೀಗೆ ಹೇಳುತ್ತಾ ಹೋದರೆ ಜಾನಪದ ನೃತ್ಯಗಳ ದೊಡ್ಡ ಪಟ್ಟಿಯೇ ಬರೆದು ಬಿಡಬಹುದು.

ಜಾನಪದ ನೃತ್ಯಗಳಲ್ಲಿ ಈಗಾಗಲೇ ಕೊರವ, ಹುಲಿವೇಷ, ಗೊರವರ ಕುಣಿತದಂತಹ ಹಲವಾರು ನೃತ್ಯಗಳು ಅಪಾಯದ ಅಂಚಿಗೆ ತಲುಪಿದೆ. ಈ ನಿಮಿತ್ತ ಪ್ರತಿಯೊಂದು ಸಂಘ ಸಂಸ್ಥೆಗಳು ಜಾನಪದ ಕಲೆಯನ್ನು ಉಳಿಸುವ ನಿರ್ಣಯ ತೆಗೆದುಕೊಂಡು, ನಾನಾ ಸಮಾರಂಭಗಳು, ಸ್ಪರ್ಧೆಗಳ ಮೂಲಕ ಜನರಿಗೆ ಜನಪದದ ವೈವಿಧ್ಯತೆಯನ್ನು ಉಣಿಸುತ್ತಿದೆ.

ಬನ್ನಿ ಜಾನಪದ ಲೋಕದಲ್ಲಿ ಒಂದು ಸುತ್ತು ವಿಹರಿಸುತ್ತಾ, ಜಾನಪದ ಲೋಕದಲ್ಲಿ ಮೇರು ಸ್ಥಾನದಲ್ಲಿರುವ ಹುಲಿವೇಷದ ಕುರಿತಾಗಿ ತಿಳಿದುಕೊಂಡು ಬರೋಣ.[ಚಿತ್ರ: ಪಿಟಿಐ]

ಹುಲಿವೇಷಕ್ಕೆ ಎಲ್ಲೆಲ್ಲಿ, ಏನೇನು ಹೆಸರು?

ಹುಲಿವೇಷಕ್ಕೆ ಎಲ್ಲೆಲ್ಲಿ, ಏನೇನು ಹೆಸರು?

ಇದಕ್ಕೆ ದ್ರಾವಿಡರು ಹಾಗೂ ತಮಿಳುನಾಡಿನಲ್ಲಿ ಪುಲಿಯಾಟಂ, ಕರ್ನಾಟಕ ಹಾಗೂ ತುಳು ನಾಡಿನಲ್ಲಿ ಹುಲಿವೇಷ, ಕೇರಳದಲ್ಲಿ ಪುಳಿ ಕಳಿ, ಒಡಿಸ್ಸಾದಲ್ಲಿ ಬಾಗ್ ನಾಚ್ ಎಂದು ಕರೆಯುತ್ತಾರೆ.

ಯಾವಾಗ ಈ ನೃತ್ಯ ಮಾಡ್ತಾರೆ?

ಯಾವಾಗ ಈ ನೃತ್ಯ ಮಾಡ್ತಾರೆ?

ನವರಾತ್ರಿಯ ಸಮಯದಲ್ಲಿ ಇದು ಹೆಚ್ಚು ಪ್ರಾಮುಖ್ಯ ಪಡೆದುಕೊಂಡಿದ್ದು, ಶಾರದಾ ದೇವಿಯನ್ನು ನೆನೆದು ಈ ನೃತ್ಯ ಮಾಡಲಾಗುತ್ತದೆ. ಗಂಡು ಕಲೆ ಎಂದು ಪ್ರಸಿದ್ಧಿಗೊಂಡಿರುವ ಇದರಲ್ಲಿ ತಮಟೆ ಸದ್ದು ಕೇಳುತ್ತಲೇ ಜನರು ಪುಳಕಿತರಾಗುತ್ತಾರೆ. ಇನ್ನು ಹೆಜ್ಜೆ, ನೃತ್ಯಗಾರರ ಗರ್ಜನೆ ಕಂಡು ರೋಮಾಂಚನಗೊಳ್ಳುತ್ತಾರೆ.

ಕೇರಳದ ಹುಲಿವೇಷದ ಅವತಾರ

ಕೇರಳದ ಹುಲಿವೇಷದ ಅವತಾರ

ಎದೆ ಹೊಟ್ಟೆ ಹಾಗು ಬೆನ್ನಿನ ಭಾಗದಲ್ಲಿ ಹಾಗೂ ಭುಜಗಳ ಸೇರಿದಂತೆ ಮೈಯೆಲ್ಲಾ ಹುಲಿ ಚಿತ್ರ ಬಿಡಿಸಿಕೊಳ್ಳುತ್ತಾರೆ. ಹುಲಿಗಳಲ್ಲಿ ಬಿಳಿ ಹಾಗೂ ಹಳದಿ ಹುಲಿಗಳೆಂದುನ ಎರಡು ತೆರನಾಗಿ ವೇಷ ಹಾಕಲಾಗುತ್ತದೆ.

ಮೊದಲು ಈ ನೃತ್ಯ ಯಾರು ಮಾಡುತ್ತಿದ್ದರು?

ಮೊದಲು ಈ ನೃತ್ಯ ಯಾರು ಮಾಡುತ್ತಿದ್ದರು?

ಆರಂಭದಲ್ಲಿ ದೇವಾಡಿಗ ಸಮುದಾಯದವರು ಮಾತ್ರ ಈ ಹುಲಿವೇಷ ಕಾಕುತ್ತಿದ್ದರು. ಕಾಲಕ್ರಮೇಣ ಇದರಲ್ಲಿ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಲು ಶುರುವಿಟ್ಟರು. ಇದೀಗ ಎಲ್ಲೆಡೆ ಜಾನಪದ ನೃತ್ಯ ಸಮೂಹ ಇದ್ದಲ್ಲಿ ಹುಲಿವೇಷವೂ ಕಾಣಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hulivesha is one of the folk dance of Karnataka. This folk dance is performed during Navratri to honour the goddess Sharada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more