ಬೆಂಗಳೂರಲ್ಲಿ ಲೀಟರ್‌ಗೆ 83ರೂ ಮೀರಿದ ಪೆಟ್ರೋಲ್
Recommended Video

ಬೆಂಗಳೂರು, ಸೆಪ್ಟೆಂಬರ್ 7: ಪೆಟ್ರೋಲ್ ದರ ನಿತ್ಯವೂ ಏರುತ್ತಿದ್ದು ಬೆಂಗಳೂರಿನಲ್ಲಿ ಈಗಾಗಲೇ 83ರೂ ದಾಟಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ ೦.21ಪೈಸೆ ಏರಿಕೆಯಾಗಿ 83.09ರೂ. ಆಗಿದೆ.
ನಿರಂತರವಾಗಿ ರೂಪಾಯಿ ಕುಸಿತ ಹಾಗೂ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈ ಪರಿಸ್ಥಿತಿ ಉಂಟಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮುಂಬೈನಲ್ಲಿ ದೇಶದಲ್ಲೇ ಅತ್ಯಧಿಕ ಅಂದರೆ ಲೀಟರ್ ಪೆಟ್ರೋಲ್ ಬೆಲೆ 87.39 ರೂ. ಆಗಿದೆ.
ಆಗಸ್ಟ್ 16ರಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಡೀಸೆಲ್ ದರ ಲೀಟರ್ ಗೆ 73.72ರೂ ಆಗಿದೆ. ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಬಸ್‌ಗಳ ದರ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಾಣುತ್ತಿದೆ.

ಇದೇ ರೀತಿ ಪೆಟ್ರೋಲ್ ಬೆಲೆ ಹೆಚ್ಚಳವಾದರೆ ಸೆಪ್ಟೆಂಬರ್ ಮುಗಿಯುವುದರ ಒಳಗಾಗಿ 100ರ ಗಡಿ ದಾಟಲಿದೆ. ಮಧ್ಯಮ ವರ್ಗದವರು, ಸಾಮಾನ್ಯ ಜನರು, ಬಡವರು ಬೈಕ್ ಗಳನ್ನೂ ಕೂಡ ಮನೆಯಲ್ಲಿಟ್ಟು ಸಮೂಹ ಸಾರಿಗೆ ಬಳಸುವ ಸಮಯ ಹತ್ತಿರ ಬಂದಿದೆ.
ಇಲ್ಲವೇ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗುವ ನಿರೀಕ್ಷೆ ಇದೆ. ಹಾಗಾಗಿ ಬೆಂಗಳೂರಿನಲ್ಲಿ ಸಾಕಷ್ಟು ಕಡೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ.












Click it and Unblock the Notifications