ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ...

ಬೆಂಗಳೂರು, ಸೆಪ್ಟೆಂಬರ್ 03 : ದಿನವೂ ನೀವು ಕಚೇರಿಗೆ ಹೇಗೆ ಹೋಗುತ್ತೀರಿ? ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಬಳಸಿಯಾ? ಆಟೋ ಅಥವಾ ಟ್ಯಾಕ್ಸಿ ಬಳಸಿಯಾ? ನಡೆದುಕೊಂಡಾ ಅಥವಾ ಸೈಕಲ್ ಬಳಸಿಯಾ? ಅಥವಾ ವೈಯಕ್ತಿಕ ವಾಹನದಿಂದಲಾ?

ನೀವು ದಿನಂಪ್ರತಿ ವೈಯಕ್ತಿಕ ವಾಹನಗಳಾದ ಬೈಕು, ಕಾರುಗಳನ್ನು ಬಳಸುತ್ತಿದ್ದರೆ, ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವ ಮುನ್ನ ಹೃದಯವನ್ನು ಗಟ್ಟಿಯಾಗಿ ಹಿಡಿದುಕೊಂಡು ಇಂಧನ ತುಂಬಿಸಿ. ಅಲ್ಲದೆ, ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವ ಮುನ್ನ ಅಪ್ಪಿತಪ್ಪಿ ಕೂಡ ದರ ಎಷ್ಟಿದೆಯೆಂದು ಪರೀಕ್ಷಿಸಬೇಡಿ.

ಏಕೆಂದರೆ, ಬೆಂಗಳೂರು ಸೇರಿದಂತೆ ಇಡೀ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಆಕಾಶ ಮುಟ್ಟಿವೆ. ಮುಂಬೈನಲ್ಲಿ ಭಾನುವಾರ ಪೆಟ್ರೋಲ್ ದರ ಗರಿಷ್ಠ 86.25 ರು. ತಲುಪಿದೆ. ಇದು ದಾಖಲಾದ ಅತೀಹೆಚ್ಚು ದರ ಮಾತ್ರವಲ್ಲ, ಕಳೆದ ದರ 86.24 ರುಪಾಯಿಯನ್ನು ಮೆಟ್ಟಿ ಮೇಲೆ ಚಿಮ್ಮಿದೆ.

Petrol and Diesel rates sky rocket

ಡೀಸೆಲ್ ಕೂಡ ಲೀಟರಿಗೆ 75.12 ರುಪಾಯಿ ಮುಟ್ಟಿದ್ದು, ಡೀಸೆಲ್ ಬಳಸುವ ವಾಹನ ಮಾಲಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸೋಮವಾರ ಇನ್ನೂ ಮುನ್ನುಗ್ಗಲಿದ್ದು, ಪೆಟ್ರೋಲ್ ಲೀಟರಿಗೆ 86.56 ರುಪಾಯಿ ಆಗಲಿದ್ದು, ಡೀಸೆಲ್ 75.54 ರುಪಾಯಿ ಆಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನ ಜನತೆ ಕೂಡ ಉಸಿರು ಬಿಗಿಹಿಡಿದು ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ತುಂಬಿಸಿಕೊಳ್ಳುವಂಥ ಪರಿಸ್ಥಿತಿ ಎದುರಾಗಿದೆ. ಭಾನುವಾರ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಲೀಟರಿಗೆ 81.79 ರುಪಾಯಿ ತಲುಪಿದ್ದು, ಡೀಸೆಲ್ 73.49 ರುಪಾಯಿಗೆ ಲಗ್ಗೆ ಇಟ್ಟಿದೆ. ಈ ದರ ಸೋಮವಾರ ಸಂಜೆಯ ಹೊತ್ತಿಗೆ ಮತ್ತೆ ಪರಿಷ್ಕೃರಣೆಯಾದರೂ ಅಚ್ಚರಿಯಿಲ್ಲ.

ಭಾನುವಾರವಷ್ಟೇ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೀಗಿದ್ದವು. ಪೆಟ್ರೋಲ್​ ದರ ಲೀಟರಿಗೆ 81.12 ರೂ.ಗಳಾಗಿದ್ದರೆ, ಡಿಸೇಲ್​ ದರ ಪ್ರತಿ ಲೀಟರ್ ಗೆ 72.51 ತಲುಪಿದ್ದವು. ಇದೀಗ ಆ ದಾಖಲೆಯನ್ನು ಕೂಡ ಇಂಧನ ದರಗಳು ಅಳಿಸಿಹಾಕಿವೆ.

Petrol and Diesel rates sky rocket

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆ ಆಗುತ್ತಿರುವುದು ಒಂದೆಡೆಯಾದರೆ, ಡಾಲರ್ ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಆಘಾತಕಾರಿಯಾಗಿ ಕುಸಿಯುತ್ತಿರುವುದು ಇಂಧನ ದರಗಳ ಏರಿಕೆಗೆ ಕಾರಣವಾಗಿವೆ ಎಂದು ಸಿದ್ಧ ಉತ್ತರವಾಗಿದೆ. ಆದರೆ, ಅನುಭವಿಸುತ್ತಿರುವುದು ಶ್ರೀಸಾಮಾನ್ಯರು.

ಈಗಾಗಲೆ, ಕಾರನ್ನು ಉಪಯೋಗಿಸುತ್ತಿರುವವರು ಅದನ್ನು ಗ್ಯಾರೇಜಿನಲ್ಲಿ ನಿಲ್ಲಿಸಿ ಅಥವಾ ಅಪಾರ್ಟ್ಮೆಂಟ್ ಪಾರ್ಕಿಂಗ್ ನಲ್ಲಿ ಕವರ್ ಹಾಕಿ ನಿಲ್ಲಿಸಿಬಿಟ್ಟಿದ್ದಾರೆ ಮತ್ತು ಬೈಕಿಗೆ ಮೊರೆ ಹೋಗಿದ್ದಾರೆ. ಇನ್ನು ಹಲವಾರು ಜನರು ಬೈಕು ತರುವುದನ್ನೂ ನಿಲ್ಲಿಸಿ ಮೆಟ್ರೋ ಅಥವಾ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ.

ಸಾರ್ವಜನಿಕರು ದೃಢ ನಿರ್ಧಾರ ಮಾಡಿ ಖಾಸಗಿ ವಾಹನಗಳನ್ನು ಓಡಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸಾರ್ವಜನಿಕರ ವಾಹನಗಳನ್ನು ಓಡಾಡುವುದನ್ನು ಅಥವಾ ಸೈಕಲ್ ತೆಗೆದುಕೊಂಡು ಅಡ್ಡಾಡುವುದನ್ನು ರೂಢಿ ಮಾಡಿಕೊಳ್ಳದೆ ಗತ್ಯಂತರವಿಲ್ಲ. ಇದಕ್ಕೆ ಪೂರಕವಾಗಿ, ಸೈಕಲ್ ಬಳಸುವುದನ್ನು ಕೆಲ ಕಂಪನಿಗಳು ಕಡ್ಡಾಯ ಮಾಡಬೇಕು ಮತ್ತು ಸರಕಾರ ಸೈಕಲ್ ಟ್ರಾಕ್ ಗಳನ್ನು ಮುಕ್ತ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+