ಮೋದಿ ಮುಖ ನೋಡಿ ಅಯೋಗ್ಯರಿಗೂ ಮತ ಚಲಾಯಿಸ್ತಾರೆ: ಯತ್ನಾಳ್
ಬೆಂಗಳೂರು, ಮಾರ್ಚ್ 26: ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯ ಯೋಗ್ಯ ಅಭ್ಯರ್ಥಿಗಳಿಲ್ಲ, ಕೆಲವು ಅಯೋಗ್ಯ ಅಭ್ಯರ್ಥಿಗಳಿಗೂ ಮೋದಿ ಮುಖ ನೋಡಿ ಮತ ಬೀಳುತ್ತಿವೆ ಎಂದು ಬಿಜೆಪಿ ಸಂಸದ ಬಸನಗೌಡ ಪಾಟೀಲ್ ಯಾತ್ನಾಳ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿರುವ ತೇಜಸ್ವಿನಿ ಅನಂತ್‌ಕುಮಾರ್ ಅವರನ್ನು ಭೇಟಿಯಾಗಿ ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಹೀಗೆ ಹೇಳಿದರು. ಬಸನಗೌಡ ಪಾಟೀಲ್ ಅವರು ತೇಜಸ್ವಿ ಸೂರ್ಯ ಅವರನ್ನುದ್ದೇಶಿಸಿಯೇ ಹೇಳಿದ್ದಾರೆ ಎಂಬುದು ಸುಲಭದ ಊಹೆ.
ದೇಶದ ಎಲ್ಲಾ ಕಡೆ ಸಭ್ಯ ಅಭ್ಯರ್ಥಿಗಳೇ ಇರುವುದಿಲ್ಲ, ಕೆಟ್ಟ ಅಭ್ಯರ್ಥಿಗಳೂ ಇರುವುದಿಲ್ಲ, ಆದರೆ ಮೋದಿ ಅವರ ಮುಖ ನೋಡಿಕೊಂಡು ಅವರಿಗೆ ಮತ ಹಾಕಲಾಗುತ್ತಿದೆ ಎಂದು ಯಾತ್ನಾಳ್ ಅವರು ಹೇಳಿದರು.

ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಕ್ಕಿರುವುದು ರಾಜ್ಯ ಬಿಜೆಪಿಯ ಹಿರಿಯ ಮುಖಂಡರಿಗೆ ಸಹ್ಯವಾಗಿಲ್ಲ ಎನ್ನಲಾಗಿದೆ. ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆಗೆ ಸಹ ಪ್ರಮುಖ ನಾಯಕರು ಹೋಗಿರಲಿಲ್ಲ, ಈಗ ಯಾತ್ನಾಳ್ ಅವರು ಪರೋಕ್ಷವಾಗಿ ತೇಜಸ್ವಿ ಸೂರ್ಯ ಅವರನ್ನು ಟೀಕಿಸಿದ್ದಾರೆ.












Click it and Unblock the Notifications