Namma Metro: ಟಿಕೆಟ್ ದರ 45% ಏರಿಕೆಗೆ ಆಕ್ಷೇಪ, ಮೆಟ್ರೋ ಆದಾಯಕ್ಕೆ ಬೇರೆ ಮಾರ್ಗಗಳಿವು, ವಿವರ
ಬೆಂಗಳೂರು, ಜನವರಿ 19: ಖರ್ಚು ವೆಚ್ಚದ ಹೆಚ್ಚಳದ ಕಾರಣದಿಂದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ರೈಲಿನ ದರ ಏರಿಕೆಗೆ ನಿರ್ಧರಿಸಿದೆ. ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇಕಡಾ 40ರಿಂದ 45ರಂದು ಏರಿಕೆ ಮಾಡುವ ಪ್ರಸ್ತಾವನೆ ಇದೆ. ನಿಗಮದ ಈ ನಿರ್ಧಾರಕ್ಕೆ ಬೆಂಗಳೂರಿನ ನೌಕರರ ಸಂಘ, ಸಾರ್ವಜನಿಕರು ಇನ್ನಿತರ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಆದಾಯಕ್ಕೆ ಬೇರೆ ಮಾರ್ಗಗಳನ್ನು ಕಂಡು ಕೊಳ್ಳುವಂತೆ ಆಗ್ರಹಿಸಿವೆ.
ಬೆಂಗಳೂರು ನಮ್ಮ ಮೆಟ್ರೋ 76 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸುಮಾರು 55ಕ್ಕೂ ಅಧಿಕ ರೈಲುಗಳನ್ನು ಓಡಿಸುತ್ತಿದೆ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ ರೈಲುಗಳು ಕಾರ್ಯಾಚರಣೆ ಮಾಡುತ್ತಿದ್ದು, ಶೀಘ್ರವೇ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗ ತೆರೆಯಲಿದೆ. ಈ ಹೊಸ ಮಾರ್ಗ ತೆರೆಯುವ ಮೊದಲೇ ಜನರಿಗೆ ಟಿಕೆಟ್ ದರ ಹೆಚ್ಚಳ ಬರೆ ನೀಡಲು BMRLC ಮುಂದಾಗಿದೆ.

ಇತ್ತೀಚೆಗಷ್ಟೇ ಶೇಕಡಾ 15% ಬಸ್ ದರ ಏರಿಕೆಯಿಂದ ಆರ್ಥಿಕ ಹೊಡೆತ ಎದುರಿಸುತ್ತಿರುವ ಬೆಂಗಳೂರು ನಿವಾಸಿಗಳಿಗೆ ನಮ್ಮ ಮೆಟ್ರೋ ಗಾಯ ಮೇಲೆ ಬರೆ ಎಳೆಯಲು ಮುಂದಾಗಿದೆ. ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆಗೆ ನಮ್ಮ ವಿರೋಧವಿದೆ ಎಂದು ತಿಳಿಸಿದ್ದಾರೆ.
ಗರಿಷ್ಠ 90 ರೂಪಾಯಿಗೆ ಏರಿಕೆ ಆದರೆ ಇದು ಸಾಮಾನ್ಯ ಮೆಟ್ರೋ ಪ್ರಯಾಣಿಕರಾದ ಕಾರ್ಮಿಕರು, ದಿನಗೂಲಿ ನೌಕರರು, ಇನ್ನಿತರ ಕಾರ್ಮಿಕರ ವರ್ಗಕ್ಕೆ ಆರ್ಥಿಕ ಹೊರೆಯಾಗಲಿದೆ. ನಿಮ್ಮ ದರ ಏರಿಕೆ ಪ್ರಸ್ತಾವನೆ ಮರು ಪರಿಶೀಲಿಸಬೇಕೆಂಬ ಆಗ್ರಹ ಜೋರಾಗಿದೆ.

ದರ ಏರಿಕೆ ಸಂಸದ ಬೇಸರ: ತ್ವರಿತ ಸೇವೆ ಒತ್ತು ಕೊಡಿ
ಈ ಕುರಿತು ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಶೇಕಡಾ 45 ರಷ್ಟು ಪ್ರಯಾಣ ದರ ಹೆಚ್ಚಳದಿಂದ ಜನರಿಗೆ ಹೊರೆಯಾಗುತ್ತದೆ. ಬಿಎಂಆರ್‌ಸಿಎಲ್ ನಿರ್ಧಾರದಿಂದ ನಾನು ಸಹ ನಿರಾಶೆಗೊಂಡಿದ್ದೇನೆ. ಈ ನಿರ್ಧಾರವನ್ನು ಮೆಟ್ರೋ ಅಧಿಕಾರಿಗಳು ಪುನರ್ ಪರಿಶೀಲಿಸುವಂತೆ ಅವರು ಸೂಚಿಸಿದ್ದಾರೆ.
ಬಿಎಂಆರ್‌ಸಿಎಲ್ ದೈನಂದಿನ ಸೇವೆಯಲ್ಲಿ ಸೇವೆಗಳಲ್ಲಿನ ಎದುರಾಗುವ ಸಮಸ್ಯೆಗಳಿಗೆ ತುರ್ತು ಸ್ಪಂದಿಸಬೇಕು. ಜನ ದಟ್ಟಣೆ ವೇಳೆ ಬಾಗಿಲುಗಳು ಸಮರ್ಪಕವಾಗಿ ಮುಚ್ಚುವಂತೆ, ಪ್ರಯಾಣಿಕರ ಮಧ್ಯೆ ವಿವಾದ ಆಗದಂತೆ ನೋಡಿಕೊಳ್ಳಬೇಕು. ಹಾಲಿ ರೈಲುಗಳಿಗೆ ಮೆಟ್ರೋ ಬೋಗಿಗಳನ್ನು ಸೇರಿಸುವುದು, ವಿಳಂಬವಾಗದಂತೆ ತ್ವರಿತ ಸೇವೆ ನೀಡಲು, ಕಾರ್ಯಾಚರಣೆಯ ದಕ್ಷತೆ ಸುಧಾರಿಸಲು ಒತ್ತು ನೀಡುವಂತೆಯೂ ಸಂಸದರು ಕೋರಿದ್ದಾರೆ.
ನಮ್ಮ ಮೆಟ್ರೋ ಮಾಸಿಕ ನಿರ್ವಹಣೆ ವೆಚ್ಚ?
ಬೆಂಗಳೂರು ಮೆಟ್ರೋ ಜಾಲದಲ್ಲಿ ನಿತ್ಯ ಕಾರ್ಯನಿರ್ವಹಿಸುತ್ತಿರುವ ರೈಲುಗಳ ನಿರ್ವಹಣೆಗೆ ಬಿಎಂಆರ್‌ಸಿಎಲ್ 2 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಇದರಲ್ಲಿ ನಿಯಂತ್ರಣ ಸಾಧಿಸಿದರೆ ಸುಮಾರು 50%ರಷ್ಟು ಹಣ ಉಳಿತಾಯ ಮಾಡಬಹುದು. ನಿಗಮ ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ವ್ಯಕ್ತಿಗಳು ಸುಮಾರು 60 ವರ್ಷ ಮೇಲ್ಪಟ್ಟವಾರಗಿದ್ದಾರೆ. ಅತ್ಯಧಿಕ ವೇತನ ಪಡೆಯುವವರು ಇದ್ದಾರೆ. ಖರ್ಚು ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆಗೆ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರೆ.
ಮೆಟ್ರೋ ಆದಾಯ ಹೆಚ್ಚಳ ಬೇರೆ ಮಾರ್ಗಗಳು ಯಾವುವು?
ನೌಕರರ ಸಂಘಟನೆ, ಮೆಟ್ರೋ ಎಂಪ್ಲಾಯೀಸ್ ಯೂನಿಯನ್ಸ್ ಮತ್ತು ಸಾರ್ವಜನಿಕರು ಮೆಟ್ರೋ ದರ ಏರಿಕೆಗೆ ವಿರೋಧಿಸಿದ್ದಾರೆ. ಮಾತ್ರವಲ್ಲದೇ, ಆದಾಯ ಹೆಚ್ಚಳಕ್ಕೆ ಕೆಲವು ಸಲಹೆ ಸಹ ನೀಡಿದ್ದಾರೆ. ಮೆಟ್ರೋ ನಿಲ್ದಾಣಗಳು, ಕಟ್ಟಡಗಳ ಮೇಲೆ ಸೋಲಾರ್ ಘಟಕ ಅಳವಡಿಸಬೇಕು. ಮೆಟ್ರೋ ಅಧಿನದಲ್ಲಿರುವ ಭೂಮಿಯನ್ನು ಸಮಪರ್ಕವಾಗಿ ಬಳಕೆ ಮಾಡಬೇಕು.
ಜಾಹೀರಾತು, ನಿಲ್ದಾಣದಲ್ಲಿನ ಕಟ್ಟಡಗಳು, ಪಾರ್ಕಿಂಗ್ ಶುಲ್ಕ ಸೇರಿದಂತೆ ಇತರ ಮಾರ್ಗಗಳಿಂದ ಹೆಚ್ಚಿನ ಆದಾಯ ಗಳಿಕೆಗೆ ಮುಂದಾಗಬೇಕು. ಹೀಗೆ ಮಾಡಿದಲ್ಲಿ ತಿಂಗಳಿಗೆ ಐದಾರು ಕೋಟಿ ಎಂದರೂ ವರ್ಷಕ್ಕೆ ಸುಮಾರು 70 ಕೋಟಿಯಷ್ಟು ಆದಾಯ ಗಳಿಸಬಹುದಾಗಿದೆ. ಅದರ ಬದಲಾಗಿ ಜನರ ಮೇಲೆ ಹೊರೆಯ ಬರೆ ಎಳೆಯುವುದು ಸರಿಯಲ್ಲ ಸಲಹೆ ನೀಡಿವೆ.












Click it and Unblock the Notifications