ಕರ್ನಾಟಕದಿಂದ ಕೇರಳಕ್ಕೂ ವಲಸೆ ಬರುತ್ತಿದ್ದಾರೆ, ವಲಸೆ ಸಾಮಾನ್ಯ: ಗ್ರೇಟ್ ಕೇರಳ ಟ್ವೀಟ್
ಬೆಂಗಳೂರಿಗೆ ಕೇರಳದಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ವಿಚಾರವು ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆ ಆಗುತ್ತಿದೆ. ಇನ್ನು ಈಚೆಗೆ ಬೆಂಗಳೂರಿನಿಂದ ಎಲ್ಲರೂ ಹೊರಗೆ ಹೋದರೆ / ಅವರವರ ಊರುಗಳಿಗೆ ಹಿಂದಿರುಗಿದರೆ ಬೆಂಗಳೂರು ಶೂನ್ಯವಾಲಿದೆ ಎಂದು Great Kerala (
@GreatKerala1) ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗಳ ನಂತರ ಇದೀಗ ಗ್ರೇಟ್ ಕೇರಳ ಖಾತೆಯಿಂದ ಯೂಟರ್ನ್ ತೆಗೆದುಕೊಳ್ಳಲಾಗಿದೆ. ಅಲ್ಲದೇ ಈ ಹೊಸ ಟ್ವೀಟ್ ಸಹ ವಿವಾದಕ್ಕೆ ಕಾರಣವಾಗಿದೆ. ಇದರೊಂದಿಗೆ ಕನ್ನಡಿಗರೂ ಕೇರಳಕ್ಕೆ ವಲಸೆ ಬರುತ್ತಿದ್ದಾರೆ ಎನ್ನಲಾದ ಡೇಟಾವನ್ನೂ ಹಂಚಿಕೊಳ್ಳಲಾಗಿದೆ. ಇದಕ್ಕೆ ಕನ್ನಡಿಗರು ಹೇಳಿದ್ದೇನು ಅಂತ ನೋಡೋಣ.

ಬೆಂಗಳೂರಿನಲ್ಲಿ ವಲಸೆ ಹೆಚ್ಚಾಗುತ್ತಿದೆ ಎನ್ನುವ ವಿಚಾರ ಹಾಗೂ ಬೆಂಗಳೂರಿನಲ್ಲಿ ಕೆಲವು ಪರಭಾಷಿಕರು ಮಾಡುತ್ತಿರುವ ಅಸಭ್ಯ ವರ್ತನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ನಡುವೆ ಕೆಲವು ಕನ್ನಡಿಗರೂ ಸೇರಿದಂತೆ ಕೆಲವು ಪರಭಾಷಿಕರು ಉದ್ದೇಶಪೂರ್ವಕವಾಗಿ ಭಾಷಾ ವಿವಾದ ಸೃಷ್ಟಿ ಮಾಡುವ, ಅನವಶ್ಯಕವಾದ ವಿವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ. ಅದರಲ್ಲಿ ಈಚೆಗೆ ಗ್ರೇಟ್ ಕೇರಳ ಎನ್ನುವ ಖಾತೆಯಿಂದ ಮಾಡಲಾಗಿದ್ದ ಟ್ವೀಟ್ ಸಹ ಒಂದು. ಇದೀಗ ಈ ನೆಟ್ಟಿಗ ಯೂಟರ್ನ್ ತೆಗೆದುಕೊಂಡಿದ್ದು, ದ್ವೇಷ ಬೇಡ ಎಂದಿದ್ದಾರೆ.
ಕೇರಳದಿಂದ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ಚರ್ಚೆಯ ನಡುವೆಯೇ, ಕರ್ನಾಟಕದಿಂದಲೂ ಕೇರಳಕ್ಕೆ ವಲಸೆ ಬರುವವರು ಇದ್ದಾರೆ. ದ್ವೇಷ ಬೇಡ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿದೆ. ಗ್ರೇಟ್ ಕೇರಳ ಎನ್ನುವ ಖಾತೆಯಿಂದ "ನಮ್ಮ ಕನ್ನಡಿಗರಿಂದ ಕೇರಳದ ವಿರುದ್ಧ ಸಾಕಷ್ಟು ದ್ವೇಷ ಅಭಿಯಾನ ನಡೆದಿದೆ. ಹೋಲಿಸಲಾಗದಿದ್ದರೂ, 2011ರ ಜನಗಣತಿಯ ಪ್ರಕಾರ 1.6 ಲಕ್ಷ ಕನ್ನಡಿಗರು ಕೇರಳದಲ್ಲಿ ವಲಸಿಗರಾಗಿದ್ದಾರೆ. ಆದ್ದರಿಂದ ದಯವಿಟ್ಟು ಶಾಂತವಾಗಿರಿ, ಅಂತರ ರಾಜ್ಯ ಮತ್ತು ಅಂತರರಾಷ್ಟ್ರೀಯ ವಲಸೆ ಸಾಮಾನ್ಯವಾಗಿದೆ ಮತ್ತು ಕೇರಳ ವಲಸೆಯಲ್ಲಿ ಪ್ರಮುಖ ರಾಜ್ಯವಲ್ಲ" ಎಂದು ಪೋಸ್ಟ್ ಮಾಡಲಾಗಿದೆ. ಈ ಟ್ವೀಟ್ ಇದೀಗ ಇನ್ನಷ್ಟು ಆಕ್ರೋಶಕ್ಕೂ ಕಾರಣವಾಗಿದೆ.
ಕನ್ನಡಿಗರು ಹೇಳಿದ್ದೇನು ?
ಮಲ್ಲೇಶ್ ನಾಯಕ್ ಎನ್ನುವವರು ಕೇವಲ 100% ಶಿಕ್ಷಣ ಮಾತ್ರ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಹೂಡಿಕೆ ಮತ್ತು ಕೈಗಾರಿಕೆಗಳು ಉದ್ಯೋಗ ಸೃಷ್ಟಿಸುತ್ತವೆ.
ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸಲು ಪ್ರಯತ್ನಿಸಿದಾಗ, ನಿಮ್ಮ ರಾಜ್ಯದವರು ವಿರೋಧಿಸುತ್ತಾರೆ. ನಿಮ್ಮ ರಾಜ್ಯವು ಉದ್ಯೋಗ ಸೃಷ್ಟಿಸಲು ಏಕೆ ಸಾಧ್ಯವಿಲ್ಲ. ನೀವು ಇದನ್ನು ಟೀಕೆ ಎಂದು ಭಾವಿಸಬಹುದು, ಆದರೆ ನಿಮ್ಮ ಸರ್ಕಾರ ಏನು ಮಾಡುತ್ತಿದೆ ಎಂದು ಯೋಚಿಸಿ. ಉದ್ಯೋಗವಿಲ್ಲ ಆದಾಯವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಆ 1.6 ಲಕ್ಷ ಜನರು ಕೇರಳದಲ್ಲಿ ಕನ್ನಡ ಜಾರಿಗೆ ತರಲು ಕೇಳುತ್ತಿಲ್ಲ ಸರ್ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಅದಕ್ಕೆ ಕರ್ನಾಟಕದಲ್ಲಿ ಮಲಯಾಳಂ ಜಾರಿಗೆ ತರಲು ಯಾರೂ ಕೇಳಲಿಲ್ಲ ಎಂದು ಪ್ರತಿಕ್ರಿಯಿಸಲಾಗಿದೆ.
ಮುಂದುವರಿದು ಮತ್ತೊಬ್ಬ ನೆಟ್ಟಿಗರು ನಾನು ಒಪ್ಪುತ್ತೇನೆ. ಬಹಳಷ್ಟು ಜನರು ಮಲಯಾಳಿಗಳನ್ನು ದ್ವೇಷಿಸುತ್ತಾರೆ/ಅಪಹಾಸ್ಯ ಮಾಡುತ್ತಾರೆ. ತಮಿಳರಾಗಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಆದರೆ 20 ವರ್ಷಗಳ ಹಿಂದೆ ಅನೇಕ ತಮಿಳರು ಬಡತನದಿಂದಾಗಿ ಕೇರಳಕ್ಕೆ ವಲಸೆ ಹೋಗುತ್ತಿದ್ದರು. ಅನೇಕ ಮಲಯಾಳಿ ಜನರು ತಮಿಳರನ್ನು 'ಪಾಂಡಿ' ಎಂದು ಕರೆದು ಅಪಹಾಸ್ಯ ಮಾಡುತ್ತಿದ್ದರು. ಈಗಲೂ ಸಹ, ತಮಿಳರು ನಿಮಗಿಂತ ಹಲವು ಹೆಜ್ಜೆ ಮುಂದೆ ಹೋಗಿದ್ದಾರೆ ಎಂದು ತಮಿಳಿಗರೊಬ್ಬರು ತಿರುಗೇಟು ನೀಡಿದ್ದಾರೆ.
Lot of Hate campaign against Kerala by our Kannadiga friends.
— Great Kerala (@GreatKerala1) January 12, 2026
Even though not comparable, from 2011 census 1.6 lakh Kannadigas are migrants in Kerala.
So please be calm, inter state and international migration is common and Kerala is not the leading state in migration! pic.twitter.com/5NmW3sWz4g
ವಲಸೆ ಸಾಮಾನ್ಯವಾಗಿದೆ, ಅದು ಮುಖ್ಯ ವಿಷಯವಲ್ಲ ಖಾತೆದಾರರೇ ಕಳೆದ ಒಂದು ಅಥವಾ ಎರಡು ದಶಕಗಳಿಂದ ಕೇರಳದಿಂದ ವಲಸೆ ಬಂದವರಲ್ಲಿ ಹಲವರು ಕನ್ನಡದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ. ಆದರೆ ಅದಕ್ಕಿಂತ ಹಿಂದಿನವರು ಕನ್ನಡದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಲ್ಲಿ ಅದ್ಭುತವಾಗಿದ್ದರು. ಇದು ವಲಸೆಯ ಬಗ್ಗೆ ಅಲ್ಲ, ಅದನ್ನು ಅಳವಡಿಸಿಕೊಳ್ಳದಿರುವ ಧೈರ್ಯದ ಬಗ್ಗೆ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Keralam Assembly Elections 2026: ಎಲ್ಡಿಎಫ್ vs ಯುಡಿಎಫ್ ಪೈಪೋಟಿ, ಶಬರಿಮಲೆ ಚಿನ್ನಾಭರಣ ಕಳ್ಳತನ ವಿಷಯವೇ ಪ್ರಮುಖ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್












Click it and Unblock the Notifications