ಮಹಿಳೆಯರ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕದ್ದು ನೋಡಿದ, ಜೈಲು ಸೇರಿದ

ಬೆಂಗಳೂರು, ಆಗಸ್ಟ್ 18: ಮಾಲ್‌ಗಳು, ಅಂಗಡಿಗಳಲ್ಲಿ ಡ್ರೆಸ್ಸಿಂಗ್‌ ರೂಮ್ಗೆ ತೆರಳುವ ಮುನ್ನ ಎಚ್ಚರವಿರಲಿ. ಸುತ್ತಲೂ ಒಮ್ಮೆ ದೃಷ್ಟಿಹಾಯಿಸುವುದು ಒಳಿತು. ಯಾಕೆಂದರೆ ಬನ್ನೇರುಘಟ್ಟ ಕ್ರೀಡಾ ಸಾಮಗ್ರಿ ಮಾರಾಟ ಮಳಿಗೆಯ ಡ್ರೆಸ್ಸಿಂಗ್‌ ರೂಮಿನ ಕಿಂಡಿಯಲ್ಲಿ ಇಣುಕಿದ ವ್ಯಕ್ತಿಯೊಬ್ಬನನ್ನು ಪೊಲೀಸರ ಕೈಗೆ ಒಪ್ಪಿಸಿರುವ ಘಟನೆಯೊಂದು ನಡೆದಿದೆ.

ಕ್ರೀಡಾ ಸಾಮಗ್ರಿ ಮಾರಾಟ ಮಳಿಯಲ್ಲಿ ಡ್ರೆಸ್ಸಿಂಗ್‌ ರೂಂನ ಕಿಂಡಿಯಲ್ಲಿ ಇಣುಕಿದ ಮೆಕ್ಯಾನಿಕ್‌ ಒಬ್ಬ ವೈದ್ಯೆ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು ಇದೀಗ ಜೈಲು ಪಾಲಾಗಿದ್ದಾನೆ. ಸ್ವಾಂತಂತ್ರ್ಯ ದಿನಾಚರಣೆ ದಿನ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ದೊಡ್ಡಕಮ್ಮನಹಳ್ಳಿ ನಿವಾಸಿ ಶಿವಕುಮಾರ್‌(26)ಆರೋಪಿ. ಈತ ವೃತ್ತಿಯಲ್ಲಿ ಮೆಕ್ಯಾನಿಕ್‌, ಬಟ್ಟೆ ಬದಲಾಯಿಸುತ್ತಿದ್ದ ರೂಪಿಗೆ ಹೊಂದಿಕೊಂಡಿರುವ ಪಕ್ಕದ ರೂಮಿನಿಂದ ಇಣುಕಿದ್ದ ಎಂದು ವೈದ್ಯೆ ತಿಳಿಸಿದ್ದಾರೆ.

Peeer sent to behind the bar who peeped in sports shop

ಆದರೆ ಆರೋಪಿ ವೈದ್ಯೆ ಇದ್ದ ರೂಮಿನ ಬಾಗಿಲು ಮುಚ್ಚಿರಲಿಲ್ಲ ಆಕಸ್ಮಿಕವಾಗಿ ಅವರು ಬಟ್ಟೆ ಬದಲಾಯಿಸುತ್ತಿರುವುದು ನನ್ನ ಕಣ್ಣಿಗೆ ಬಿತ್ತು ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಆ.15ರಂದು ರಾತ್ರಿ 8.50ರ ಸುಂಆರಿಗೆ ವೈದ್ಯೆ ಡ್ರೆಸ್ಸಿಂಗ್‌ ವಿಭಾಗಕ್ಕೆ ತೆರಳಿದ್ದರು.

ಆ ಕೊಠಡಿಗೆ ಹೊಂದಿಕೊಂಡೇ ಇದ್ದ ಪಕ್ಕದ ಕೊಠಡಿಯ ನೆಲಕ್ಕೆ ತಲೆ ಒರಗಿಸಿ ಯಾರೋ ಇಣುಕಿ ನೋಡಿದಂತೆ ಕಾಣಿಸಿತು, ಮೊದಲಿಗೆ ಇಲಿ ಎಂದು ತಿಳಿದಿದ್ದೆ ಬಳಿಕ ಯಾರದ್ದೋ ನೆರಳಿರಬೇಕು ಅಂದುಕೊಂಡೆ ಸುಮ್ಮನಾದೆ ಕೆಲವು ಸಮಯದ ಬಳಿಕ ಅದೇ ಮತ್ತೆ ಅದೇ ರೀತಿ ಕಾಣಿಸಿದಾಗ ಬಟ್ಟೆ ಬದಲಿಸಿಕೊಂಡು ಹೊರಗೆ ಬಂದು ನೋಡಿದೆ ಆಗ ಆತ ಸಿಕ್ಕಿಬಿದ್ದಿದ್ದಾನೆ ಎಂದು ವೈದ್ಯೆ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+