ಚಲಿಸುವ ರೈಲಿಂದ ಟಿಕೆಟ್ ಕಲೆಕ್ಟರ್‌ನ್ನು ತಳ್ಳಿದ ಪ್ರಯಾಣಿಕರು

ಬೆಂಗಳೂರು, ಏಪ್ರಿಲ್ 14: ಚಲಿಸುವ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ನನ್ನು ರೈಲಿನಿಂದ ತಳ್ಳಿದ ಪ್ರಯಾಣಿಕರು ಕೊಲೆಗೆ ಯತ್ನಿಸಿದ ಘಟನೆ ಯಶವಂತಪುರ-ಹೌರಾ ರೈಲಿನಲ್ಲಿ ಸಂಭವಿಸಿದೆ.

ಕಳೆದ ಏಪ್ರಿಲ್ 11 ರಂದು ರಾತ್ರಿ ಯಶವಂತಪುರದಿಂದ ಹೊರಟಿದ್ದ ಹೌರಾ ಎಕ್ಸ್ಪ್ರೆಸ್ ನಲ್ಲಿ ಎಸ್ 12 ಕೋಚ್ ನಲ್ಲಿ ಟಿಕೆಟ್ ಕಲೆಕ್ಟರ್ ಸಂತೋಷ್ ಬಾಬು ಎಂಬುವವರು ಟಿಕೇಟ್ ಪರಿವೀಕ್ಷಣೆ ನಡೆಸುತ್ತಿದ್ದಾಗ ಆರು ಜನ ಪ್ರಯಾಣಿಕರು ಇಬ್ಬರು ಟಿಕೆಟ್ ರಹಿತ ವಾಗಿ ಹಾಗೂ ಇನ್ನಿಬ್ಬರು ಬದಲಿ ಟಿಕೆಟ್ ಆಧಾರದ ಮೇಲೆ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಕಲೆಕ್ಟರ್ ರೈಲ್ವೆ ನಿಗದಿ ಪಡಿಸಿದ ದಂಡ ಪಾವತಿಸುವಂತೆ ಕೋರಿದರು.

ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಟಿಕೆಟ್ ಕಲೆಕ್ಟರ್ ಮೇಲೆ ಆರು ಜನ ಪ್ರಯಾಣಿಕರು ಹಲ್ಲೆ ನಡೆಸಿ ಅವರ ಬಳಿ ಇದ್ದ 6550 ರೂ. ಹಾಗೂ ಅವರಿಂದ ಹಲವಾರು ವಸ್ತುಗಳನ್ನು ಕಸಿಯಲು ಯತ್ನಿಸಿದ್ದಾರೆ.

passengers pushed out ticket collector from train

ಘಟನೆ ನಡೆದ ಕೂಡಲೇ ಸಮೀಪದ ಜೋಲಾರ್ ಪೇಟೆ ರೈಲ್ವೆ ನಿಲ್ದಾಣಕ್ಕೆ ಟಿಕೆಟ್ ಕಲೆಕ್ಟರ್ ಮಾಹಿತಿ ನೀಡಿದರಾದರೂ ರೈಲು ಜೋಲಾರ್ ಮುನ್ನವೇ ರೈಲಿನಿಂದ ಟಿಕೆಟ್ ಕಲೆಕ್ಟರ್ ನನ್ನು ಪ್ರಯಾಣಿಕರು ಹೊರನೂಕಿದರೆಂದು ಆರೋಪಿಸಲಾಗಿದೆ. ರೈಲ್ವೆ ಗೇಟ್ ಬಳಿ ಇದ್ದ ರೈಲ್ವೆ ಸಿಬ್ಬಂದ ಟಿಕೆಟ್ ಕಲೆಕ್ಟರ್ ಬಿದ್ದುದನ್ನು ಗಮನಸಿಸಿ ಜೋಲಾರ್ ಪೇಟೆ ಸ್ಟೇಷನ್ ನಿರೀಕ್ಷಕರಿಗೆ ವಿಷಯ ತಿಳಿಸಿದ್ದಾರೆ.

passengers pushed out ticket collector from train

ಇದರಿಂದ ಮಹಿತಿ ಪಡೆದ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕೂಡಲೇ ವೆಲ್ಲೂರು ಆಸ್ಪತ್ರೆಗೆ ಗಾಯಗೊಂಡಿದ್ದ ಟಿಕೆಟ್ ಕಲೆಕ್ಟರ್ ಸಂತೋಷ್ ಬಾಬು ಅವರನ್ನು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ವಿಷಯ ತಿಳಿದ ರೈಲ್ವೆ ಇಲಾಖೆಯವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮಾಹಿತಿ ಪಡೆದು ತಿರುಪತಿ ರೈಲ್ವೆ ನಿಲ್ದಾಣದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಬಳಿಕ ಅವರನ್ನು ವೆಲ್ಲೂರಿಗೆ ಕರೆತಂದು ಟಿಕೆಟ್ ಕಲೆಕ್ಟರ್ ಸಂತೋಷ್ ಬಾಬು ಸಮ್ಮುಖದಲ್ಲಿ ದೂರು ದಾಖಲಿಸಲಾಗಿದೆ. ಈ ಘಟನೆ ನಡೆದ ದೃಶ್ಯವು ರೈಲ್ವೆ ಇಲಾಖೆಗೆ ಲಭ್ಯವಾಗಿದ್ದು ಇದರ ಆಧೃಆದ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಇಲಾಖೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+