ಸ್ಪರ್ಧೆಯಲ್ಲಿ ಗೆದ್ದ ಬಕ್ಕ ತಲೆಯವರಿಗೆ ಕೂದಲು ಕಸಿ ಉಚಿತ

ಬೆಂಗಳೂರು, ಮೇ. 12 : ಮೊಳಕಾಲು ಅಲ್ಲಾಡಿಸುತ್ತಾ ಹಾಯಾಗಿ ಆರಾಮ್ ಚೇರಿನ ಮೇಲೆ ಕುಳಿತವರೆ... ಒಮ್ಮೆ ತಲೆಯ ಮೇಲೆ ಕೈಯಾಡಿಸಿ ನೋಡಿ. ತಲೆತುಂಬ ಕೂದಲಿದ್ದರೆ ತಲೆಕೆಡಿಸಿಕೊಳ್ಳಬೇಡಿ. ಒಂದು ವೇಳೆ ಬಕ್ಕಾಬಯಲಾಗಿದ್ದರೂ ಚಿಂತೆ ಮಾಡಬೇಡಿ. ಕೂದಲನ್ನು ಮತ್ತೆ ಹುಲ್ಲುಗಾವಲಿನಂತೆ ಬೆಳೆಸಿಕೊಳ್ಳುವ ಅವಕಾಶ ಒದಗಿಬಂದಿದೆ.

ಬೆಂಗಳೂರು ಮೂಲದ ಹೇರ್‌ಲೈನ್ ಇಂಟರ್‌ನ್ಯಾಷನಲ್ ಕೂದಲು ಕಸಿ ಹಾಗೂ ಸ್ಕಿನ್ ಕ್ಲಿನಿಕ್ ಮಂಗಳವಾರದಿಂದ ಉಚಿತವಾಗಿ ಕೂದಲು ಕಸಿ ಮಾಡಿಸಿಕೊಳ್ಳುವ ಅಭಿಯಾನ ಪ್ರಾರಂಭಿಸಿದೆ. ನಗರದಲ್ಲಿರುವ ಯಾವುದಾದರೊಂದು ಕೂದಲು ಕಸಿ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ಲಭಿಸಲಿದೆ. ಆದರೆ, 3 ತಿಂಗಳು ನಡೆಯಲಿರುವ ಅಭಿಯಾನದಲ್ಲಿ ಭಾಗವಹಿಸಿ ಜಯಸಿದವರಿಗೆ ಮಾತ್ರ!

Participate in competition and Win a Free Hair Transplant

ಅಭಿಯಾನದ ಬಗ್ಗೆ ಹೇರ್‌ಲೈನ್ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕ ನಿರ್ದೇಶಕಿ ಕುಮಾರಿ ಬನಿ ಆನಂದ್, ಜೂನ್ 15ಕ್ಕೆ ಲಕ್ಕೀ ಡ್ರಾ ಮೂಲಕ ಸ್ಪರ್ಧೆಯ ವಿಜೇತರನ್ನು ತಿಳಿಸಲಾಗುತ್ತದೆ. ಸ್ಪರ್ಧೆಯಲ್ಲಿ ಕೇವಲ ಪುರುಷರು ಮಾತ್ರ ಪಾಲ್ಗೊಳ್ಳಬಹುದಾಗಿದೆ. ವಿಜೇತರಾದವರಿಗೆ ಉಚಿತ ಕೂದಲು ಕಸಿ ಚಿಕಿತ್ಸೆ ಹಾಗೂ ಕೂದಲು ಕಸಿ ಬಗ್ಗೆ ಸಂದರ್ಶನ ಇತ್ಯಾದಿಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಇತರರೂ ಅನೇಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ ಎಂದು ಅವರು ತಿಳಿಸಿದರು.

ಸ್ಕೀಮ್ ಹೆಂಗೆಂಗಿದೆ ನೋಡಿ : ಲಕ್ಕೀಡ್ರಾ ವಿಜೇತರು ಒಂದು ಸೆಷನ್‌ನಲ್ಲಿ 10 ಸಾವಿರ ಕೂದಲು ಕಸಿಯನ್ನು ಪಡೆದುಕೊಳ್ಳಬಹುದಾಗಿದ್ದು, ಇನ್ನುಳಿದ ಶೇ. 10ಕ್ಕೆ ಶೇ.40ರಷ್ಟು ರಿಯಾಯಿತಿ, ಅಂತೆಯೇ ನಂತರದ 10ಕ್ಕೆ ಶೇ.30, ಬಳಿಕದ ಚಿಕಿತ್ಸೆಯಲ್ಲಿ ಶೇ.20ರಷ್ಟು ರಿಯಾಯಿತಿಗಳನ್ನು ಗೆಲ್ಲುವ ಅವಕಾಶವಿದೆ. ಇತರರಿಗೆ ಬೇರೆ ಬೇರೆ ರೀತಿಯ ಸ್ಕೀಮ್‌ಗಳನ್ನು ನೀಡಲಾಗುತ್ತದೆ.

ಸ್ಕೀಮ್‌ನಲ್ಲಿ ಅತ್ಯುತ್ತಮ ಚರ್ಮಶಾಸ್ತ್ರಜ್ಞರು, ಮತ್ತು ಕಾರ್ಪೋರೇಟ್ ಚಿಕಿತ್ಸಾಲಯಗಳು ಹೊಂದಿರುತ್ತದೆ. ಹೇರ್‌ಲೈನ್ ಇಂಟರ್‌ನ್ಯಾಷನಲ್‌ನ ಎಲ್ಲಾ ಸೆಂಟರ್‌ಗಳಲ್ಲಿ ಬಾಕ್ಸ್‌ಗಳನ್ನು ಇಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರು ಮತ್ತು ವಿಳಾಸವನ್ನು ಬರೆದು ಬಾಕ್ಸ್‌ಗೆ ಹಾಕಬೇಕು. ಜೂನ್ 1ರಂದು ಬಾಕ್ಸ್‌ನ್ನು ತೆರೆದು ಜೂನ್ 15ಕ್ಕೆ ವಿಜೇತರ ಹೆಸರನ್ನು ತಿಳಿಸಲಾಗುತ್ತದೆ. ವಿಜೇತರನ್ನು ನಮ್ಮ ಸೆಂಟರ್‌ಗೆ ಕರೆಯಿಸಿ ಚಿಕಿತ್ಸಾ ವಿಧಾನ ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದು ಬನಿ ಆನಂದ್ ವಿವರಿಸಿದರು.

ಹೆಚ್ಚಿನ ಮಾಹಿತಿಗಾಗಿ ರುಹಿನಾ ಖಾನ್ 08025299002 ಅಥವಾ www.hairline.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಹೇರ್‌ಲೈನ್ ಇಂಟರ್‌ನ್ಯಾಷನಲ್ ಬಗ್ಗೆ : ಹೇರ್‌ಲೈನ್ ಇಂಟರ್‌ನ್ಯಾಷನಲ್ ಕೇಂದ್ರವು ಕೂದಲು ಕಸಿ ಹಾಗೂ ಅಂತರಾಷ್ಟ್ರೀಯ ಮಟ್ಟದ ಉತ್ತಮ ಗುಣಮಟ್ಟದ ಕೂದಲು ಕಸಿ ವಿಧಾನ ಅನುಸರಿಸುವ ಸಂಸ್ಥೆಯಾಗಿದೆ. ಉತ್ತಮ ಗುಣಮಟ್ಟದ ಯಂತ್ರೋಪಕರಣ, ಅತ್ಯುತ್ತಮ ಚಿಕಿತ್ಸಾ ಪ್ಯಾಕೇಜ್‌ಗಳು, ಪುರುಷರು ಮತ್ತು ಮಹಿಳೆಯರಿಗೆ ಚರ್ಮ ಹಾಗೂ ಕೂದಲಿನ ಸಮಸ್ಯೆಗೆ ಚಿಕಿತ್ಸೆಯನ್ನು ನುರಿತ ಚರ್ಮ ಹಾಗೂ ಕೂದಲು ಶಾಸ್ತ್ರಜ್ಞರಿಂದ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಇಂದಿರಾನಗರ, ಆರ್.ಟಿ.ನಗರ, ವೈಟ್‌ಫೀಲ್ಡ್, ರಿಚ್‌ಮಂಡ್ ರಸ್ತೆ, ಮಾರತಹಳ್ಳಿ ಮತ್ತು ಜಯನಗರ ಸೇರಿದಂತೆ ಒಟ್ಟು 6 ಕೇಂದ್ರಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+