Part time job scam: ಬೆಂಗಳೂರಿನ 16 ಕಡೆ ED ದಾಳಿ, 1 ಕೋಟಿ ಹಣವಿದ್ದ 80 ಬ್ಯಾಂಕ್ ಖಾತೆ ಬ್ಲಾಕ್
ಬೆಂಗಳೂರು, ನವೆಂಬರ್ 18: ಅರೆಕಾಲಿಕ (ಪಾರ್ಟ್‌ಟೈಮ್) ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎರಡು ದಿನದ ಹಿಂದೆ ಬೆಂಗಳೂರಿನ 16 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಒಟ್ಟು 80 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಒಂದೇ ತಿಂಗಳ ಅವಧಿಯಲ್ಲಿ ನಡೆಸಿದ ಎರಡನೇ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಇದಾಗಿದೆ. ಒಟ್ಟು 16 ಕಡೆಗಳಲ್ಲಿ ದಾಳಿ ನಡೆಸಿದ ಇಡಿ ಅಧಿಕಾರಿಗಳು ಅಗತ್ಯ ದಾಖಲೆ ಸಂಗ್ರಹಿಸಿದ್ದಾರೆ. ಒಂದು ಕೋಟಿ ರೂ. ಹಣ ಹೊಂದಿರುವ ಒಟ್ಟು 80 ಬ್ಯಾಂಕ್ ಖಾತೆ ವಹಿವಾಟು ತಡೆ ಹಿಡಿದಿದ್ದಾರೆ.
ಆನ್‌ಲೈನ್‌ನಲ್ಲಿ ಹಣಗಳಿಕೆ ಆರೋಪದ ಮೇಲೆ 2021ರ ಮಾರ್ಚ್‌ನಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ದೂರಿನ ಆಧಾರದಡಿ ಮನಿ ಲಾಂಡರಿಂಗ್ ಕುರಿತು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಬಳಿಕ ಆರೋಪಿಗಳು ತಮ್ಮ ನಿವಾಸದ ಸುತ್ತಮುತ್ತ ಎಲ್ಲೆಲ್ಲಿ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ, ಜಮೆ ಆಗುವ ಪ್ರದೇಶ ಮತ್ತು ಕಚೇರಿಗಳು ಸೇರಿ ಒಟ್ಟು 16 ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

'ಸೂಪರ್ ಲೈಕ್' ಅಪ್ಲಿಕೇಷನ್ ಬಳಸಿ ಮೋಸ
'ಸೂಪರ್ ಲೈಕ್' ಎನ್ನುವ ಮೊಬೈಲ್ ಅಪ್ಲಿಕೇಷನ್ ಮೂಲಕ ಕಂಪನಿಯೊಂದು ಅರೇಕಾಲಿಕವಾಗಿ ಕೆಲಸ ಕೊಡಿಸುವುದಾಗಿ ನಂಬಿಸಿದೆ. ಈ ಮೊಬೈಲ್ ಆಪ್‌ನಲ್ಲಿ ಲಾಗಿನ್ ಆದ ನಂತರ ಒಬ್ಬ ವ್ಯಕ್ತಿ ಮೊದಲು ಸ್ವಲ್ಪ ಹಣ ಚಂದಾದಾರಿಕೆಯ ಶುಲ್ಕವಾಗಿ ಪಾವತಿಸಲು ಸೂಚಿಸುತ್ತಾನೆ. ಚಂದಾದಾರಿಕೆಯ ಹನ ಪಾವತಿಯಾದ ನಂತರ ಕೆಲಸ ಹಾಗೂ ಅದಕ್ಕೆ ಇಂತಿಷ್ಟು ಹಣ ಕೊಡುವುದಾಗಿಯು ಆ ಕಂಪನಿಯು ಸಾಕಷ್ಟು ಮಂದಿಯನ್ನು ನಂಬಿಸಿದೆ.
ಮೊದ ಮೊದಲು ಕೆಲವು ಜನರು ಕಂಪನಿಯಿಂದ ಸ್ವಲ್ಪ ಪ್ರಮಾಣದಲ್ಲಿ ಹಣ ಪಡೆದಿದ್ದಾರೆ. ಇದನ್ನೇ ನಂಬಿಕೊಂಡು ಅನೇಕ ಚಂದಾದಾರಿಕೆ ಹಣ ನೀಡಿದ್ದಾರೆ. ಕಂಪನಿ ಹೇಳಿದಂತೆ ಕೇಳಿದ್ದಾರೆ. ಒಂದು ವೇಳೆ ಹಣ ಹಿಂಪಡೆಯಲು ಪ್ರಯತ್ನಿಸಿದಾಗಿ ಕಂಪನಿಯು ಸಂತ್ರಸ್ತರ ಖಾತೆ ನಿರ್ಬಂಧಿಸಿದೆ.

ಪ್ರಕರಣ ಸಂಬಂಧ ಚೀನಾ ಮೂಲದ ಶೆನ್ ಲಾಂಗ್ ಮತ್ತು ಹಿಮಾನಿ ಎಂಬ ಇಬ್ಬರು ಸೇರಿದಂತೆ ಒಟ್ಟು 50 ಆರೋಪಿಗಳ ವಿರುದ್ಧ ಇದೇ ವರ್ಷ ಜನವರಿ 13 ರಂದು ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಸದ್ಯ ಆರೋಪಿಗಳ ವಹೀವಾಟು ಕಂಡು ಬಂದ ಕಡೆಗಳೆಲ್ಲ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಅಗತ್ಯ ಬಿದ್ದವರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications