ರೋಗಿಗಳಿಗೆ ವರದಾನವಾದ 'ಪ್ಯಾಲಿಯೇಟಿವ್ ಕೇರ್ ಕೇಂದ್ರ' ರಾಜ್ಯಾದ್ಯಂತ ವಿಸ್ತರಣೆ: ದಿನೇಶ್ ಗುಂಡೂರಾವ್

ಬೆಂಗಳೂರು: ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ಇರುವ ಹಂತದಲ್ಲಿ, ಅಸಾಧಾರಣ ನೋವು, ಮಾನಸಿಕ ಒತ್ತಡದಿಂದ ಬಳಲುವ ರೋಗಿಗಳ ಮತ್ತು ಅಂತಹ ರೋಗಿಗಳ ಆರೈಕೆ ಮಾಡುತ್ತಿರುವ ಕುಟುಂಬ ವರ್ಗದವರಿಗೆ 'ಪ್ಯಾಲಿಯೇಟಿವ್ ಕೇರ್ ಕೇಂದ್ರ' (ಉಪಶಮನ ಆರೈಕೆ ಕೇಂದ್ರ) ವರದಾನವಾಗಲಿದೆ. ಇಂಥಹ ಆರೈಕೆ ಕೇಂದ್ರವನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಬೆಂಗಳೂರಿನ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಸರನಂ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಸ್ಥಾಪಿಸಲಾದ 'ಪ್ಯಾಲಿಯೇಟಿವ್ ಕೇರ್ ಯುನಿಟ್' ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ಪ್ಯಾಲಿಯೇಟಿವ್ ಕೇರ್ ಕೇಂದ್ರ ವಿಸ್ತರಣೆಗೆ ಚಿಂತನೆ ಇದೆ ಎದು ಮಾಹಿತಿ ನೀಡಿದರು.

Palliative Care Unit

ಪ್ಯಾಲಿಯೇಟಿವ್ ಕೇರ್ ಕೇಂದ್ರದ ಪ್ರಯೋಜನಗಳೇನು?

ಪ್ಯಾಲಿಯೇಟಿವ್ ಕೇರ್ ಕೇಂದ್ರದಲ್ಲಿ ಚಿಕಿತ್ಸೆ ನೀಡುವುದಿಲ್ಲ. ರೋಗಿಗಳ ಆರೈಕೆ ಮಾಡುತ್ತಿರುವ ಕುಟುಂಬ ವರ್ಗದವರಿಗೆ ನೇರವಾಗುತ್ತದೆ. ಉದ್ಘಾಟನೆಗೊಂಡ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕವಾಗಿ ಐದು ಬೆಡ್ ಗಳ ಒಂದು ವಾರ್ಡ್ ನಿರ್ಮಾಣ ಮಾಡಿದ್ದೇವೆ. ಮಾರಣಾಂತಿಕ ಅಥವಾ ತೀವ್ರವಾದ ಕಾಯಿಲೆಗಳಿಂದ ಬಳಲುತ್ತ, ಅಂತಿಮ ಹಂತದಲ್ಲಿರುವ ರೋಗಿಗಳಿಗೆ ಇದು ವಿಶೇಷ ಯೂನಿಟ್ ಆಗಿದೆ. ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ಇತರ ರೋಗಿಗಳ ಆರೈಕೆಗೆ ಈ ವಾರ್ಡ್ ಸಹಕಾರಿಯಾಗುತ್ತದೆ.

Airport: ಬೆಂಗಳೂರು ವಿಮಾನ ನಿಲ್ದಾಣ ಮತ್ತಷ್ಟು ಸ್ಮಾರ್ಟ್‌, AI ಸುರಕ್ಷತೆ ವ್ಯವಸ್ಥೆ ಜಾರಿ; ಪ್ರಯೋಜನವೇನು?
Airport: ಬೆಂಗಳೂರು ವಿಮಾನ ನಿಲ್ದಾಣ ಮತ್ತಷ್ಟು ಸ್ಮಾರ್ಟ್‌, AI ಸುರಕ್ಷತೆ ವ್ಯವಸ್ಥೆ ಜಾರಿ; ಪ್ರಯೋಜನವೇನು?

ತೀವ್ರವಾದ ನೋವು, ಉಸಿರಾಟ ತೊಂದರೆ, ನರ ಸಂಬಂಧಿ ಕಾಯಿಲೆಯಿಂದ ಬಳಲುವವರು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಈ ಕೇಂದ್ರ ಅನುಕೂಲ. ರೋಗವನ್ನು ಗುಣಪಡಿಸುವುದಕ್ಕೆ ಸಾಧ್ಯವಿಲ್ಲದ ಹಂತದಲ್ಲಿ ರೋಗಿಯ ದೈಹಿಕ ನೋವು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಇದನ್ನು ಮಾಡಿದ್ದೇವೆ. ರೋಗಿಗಳ ಕುಟುಂಬದವರಿಗೂ ಸೂಕ್ತ ತರಬೇತಿ ನೀಡಲಾಗುತ್ತದೆ.

ಬೆಂಗಳೂರಿನ 4-5 ಕಡೆ ಈಗಾಗಲೇ ಆರಂಭ

ಪ್ಯಾಲಿಯೇಟಿವ್ ಕೇರ್ ಕೇಂದ್ರವನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕರಿಂದ ಐದು ಕಡೆಗಳಲ್ಲಿ ಪ್ರಾರಂಭಿಸಿದ್ದೇವೆ. ಶೀಘ್ರವೇ ರಾಜ್ಯದ ಇತರ ಭಾಗಗಳಲ್ಲೂ ಈ ಕೇಂದ್ರದ ಸೇವೆ ಸಿಗುವಂತೆ ಮಾಡಲಾಗುವುದು ಎಂದರು.

ಉದ್ಘಾಟನೆಯಾದ ಕೇಂದ್ರದಲ್ಲಿ ಏನೆಲ್ಲ ಇದೆ?

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸರನಂ ಸಂಸ್ಥೆಯ ಸಹಕಾರದೊಂದಿಗೆ ಉದ್ಘಾಟನೆಯಾದ ಈ ಯುನಿಟ್ ನಲ್ಲಿ ತಜ್ಞರ ತಂಡದಿಂದ ಹೊರರೋಗಿ ವಿಭಾಗ, ಡೇ ಕೇರ್ ವಿಭಾಗ (ಅತಿಯಾದ ನೋವು ಮತ್ತು ವಯಕ್ತಿಕ ಸಮಾಲೋಚನೆ), ಸುಸಜ್ಜಿತ ಒಳರೋಗಿ ವಿಭಾಗ ಮತ್ತು ಕೆ.ಸಿ ಜನರಲ್‌ ಆಸ್ಪತ್ರೆಯಿಂದ 5-8 ಕಿಲೋ ವ್ಯಾಪ್ತಿಯಲ್ಲಿ ಮನೆಗೆ ತೆರಳಿ ಆರೈಕೆ ಮಾಡುವ ಮತ್ತು ಆರೈಕೆಗೆ ಪೂರಕ ತರಬೇತಿ ನೀಡುವ ಮೊಬೈಲ್ ಯುನಿಟ್ ಸಹ ಇರಲಿದೆ. ಮಾನವೀಯತೆ ದೃಷ್ಟಿಯಿಂದ ಈ ಸೇವೆ ನೀಡಲಾಗುತ್ತಿದ್ದು ಸರ್ವಜನಿಕರು ಇದರ ಉಪಯೋಗ ಪಡೆಯಬೇಕೆಂದು ಸಚಿವರು ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+