ಬೆಂಗಳೂರಿನಲ್ಲಿರುವ ದೀಪಿಕಾ ಪಡುಕೋಣೆ ಕುಟುಂಬಕ್ಕೆ ಪೊಲೀಸ್ ಬಿಗಿ ಭದ್ರತೆ
ಬೆಂಗಳೂರು, ನವೆಂಬರ್ 21 : ಪದ್ಮಾವತಿ ಚಿತ್ರದ ವಿವಾದದ ಹಿನ್ನಲೆಯಲ್ಲಿ ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ಬೆದರಿಕೆ ಇರುವುದರಿಂದ ಬೆಂಗಳೂರಿನಲ್ಲಿರುವ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಿದೆ.
ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆ ಮೇರೆಗೆ ದೀಪಿಕಾ ಕುಟುಂಬ ವಾಸವಿರುವ ಬೆಂಗಳೂರಿನ ಜೆ.ಸಿ.ನಗರದ ನಂದಿದುರ್ಗ ರಸ್ತೆಯಲ್ಲಿರುವ 'ವುಡ್ಸ್ ವೇಲ್' ಅಪಾರ್ಟ್ ಮೆಂಟ್ ಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಮುಖ್ಯ ಪಾತ್ರ ನಿರ್ವಹಿಸಿರುವ ದೀಪಿಕಾ ಪಡುಕೋಣೆ ಅವರ ಶಿರಚ್ಛೇದ ಹಾಗೂ ಮೂಗು ಕತ್ತರಿಸುವ ಬೆದರಿಕೆಗಳನ್ನು ರಜಪೂತ್ ಕರ್ಣಿ ಸೇನೆ ಬೆದರಿಕೆ ಹಾಕಿದೆ.
ಈ ಹಿನ್ನೆಯಲ್ಲಿ ಮುಂಜಾಗ್ರತ ಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ದೀಪಿಕಾ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.












Click it and Unblock the Notifications