ಬೆಂಗಳೂರಿನಲ್ಲಿ ಜೊಮ್ಯಾಟೊ, ಸ್ವಿಗ್ಗಿ ಹುಡುಗರ ವಿರುದ್ಧ ಲಕ್ಷಕ್ಕೂ ಹೆಚ್ಚು ಪ್ರಕರಣ- ದಂಡ ಕಟ್ಟವಲ್ಲೂ ಅವರೇ ಮುಂದು,ಕಾರಣ ತಿಳಿಯಿರಿ
ಕಳೆದ ಐದು ವರ್ಷಗಳಲ್ಲಿ ಟ್ರಾಫಿಕ್ ಉಲ್ಲಂಘಿಸುವವರ ಪಟ್ಟಿಯಲ್ಲಿ ಜೊಮ್ಯಾಟೊ ಡೆಲಿವರಿ ಹುಡುಗರು ಅಗ್ರಸ್ಥಾನದಲ್ಲಿದ್ದಾರೆ. ಫುಡ್ ಅಗ್ರಿಗೇಟರ್ ಕಂಪನಿಯ ಡೆಲಿವರಿ ಹುಡುಗರು 72,000 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇನ್ನುಳಿದ ಮಾಹಿತಿ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 8: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದ ಮೇಲೆ ಶೇ 50 ರಷ್ಟು ರಿಯಾಯಿತಿಯನ್ನು ಬೆಂಗಳೂರಿನ ಸಂಚಾರ ಅಧಿಕಾರಿಗಳು ಇತ್ತೀಚೆಗೆ ಘೋಷಿಸಿದ್ದು, ದಂಡ ಪಾವತಿಸಲು ಕಚೇರಿಗಳಿಗೆ ನಗರದ ನಿವಾಸಿಗಳ ದಂಡೇ ಹರಿದು ಬರುತ್ತಿದೆ. ಸಿಟಿ ಟ್ರಾಫಿಕ್ ಅಧಿಕಾರಿಗಳ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಟ್ರಾಫಿಕ್ ಉಲ್ಲಂಘಿಸುವವರ ಪಟ್ಟಿಯಲ್ಲಿ ಝೊಮಾಟೊ ಡೆಲಿವರಿ ಹುಡುಗರು ಅಗ್ರಸ್ಥಾನದಲ್ಲಿದ್ದಾರೆ.ಫುಡ್ ಅಗ್ರಿಗೇಟರ್ ಕಂಪನಿಯ ಡೆಲಿವರಿ ಹುಡುಗರು 72,000 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಂಚಾರ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಟ್ಟಾರೆಯಾಗಿ, ದಂಡದ ಮೊತ್ತವು 3 ಕೋಟಿ ರೂಪಾಯಿಗೂ ಅಧಿಕವಾಗಿದೆ.
ನಗರದಲ್ಲಿನ ಆ್ಯಪ್ ಆಧಾರಿತ ಆಹಾರ ಮತ್ತು ವಾಹನ ಸಂಗ್ರಾಹಕರು ಒಟ್ಟಾರೆಯಾಗಿ 7.07 ಕೋಟಿ ರೂಪಾಯಿ ದಂಡವನ್ನು ಪಾವತಿಸಬೇಕಿದೆ. ಈ ಕಂಪನಿಗಳ ವಿರುದ್ಧ ಸ್ವಿಗ್ಗಿ, ಜೊಮಾಟೊ, ಡೊಮಿನೋಸ್, BOX8, ಬೌನ್ಸ್, ಓಲಾ ಮತ್ತು ವೋಗೊ ಸೇರಿದಂತೆ 1,54,031 ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸ್ವಿಗ್ಗಿ ವಾಹನಗಳಿಗೆ 56,147 ಬಾರಿ ದಂಡ ವಿಧಿಸಿದ್ದರೆ, ಬೌನ್ಸ್ ವಿರುದ್ಧ 10,338 ಮತ್ತು ಓಲಾ ವಿರುದ್ಧ 9,469 ಪ್ರಕರಣಗಳು ದಾಖಲಾಗಿವೆ.

ನಿಯಮ ಉಲ್ಲಂಘನೆಗಾಗಿ ದಂಡ ಪಾವತಿಸುವಂತೆ ನಗರ ಸಂಚಾರ ಪೊಲೀಸರು ಈ ಕಂಪನಿಗಳಿಗೆ ನೋಟಿಸ್ ಕಳುಹಿಸಿದ್ದಾರೆ. ಸವಾರರ ವಿರುದ್ಧ ಪ್ರಕರಣಗಳು ದಾಖಲಾಗಿರುವುದರಿಂದ ಅಧಿಕಾರಿಗಳು ಕಂಪನಿಗಳಿಂದ ಸವಾರರ ವಿವರವನ್ನೂ ಕೇಳಿದ್ದಾರೆ. 50 ರಿಯಾಯಿತಿ ಈ ಕಂಪನಿಗಳಿಗೂ ಅನ್ವಯಿಸುತ್ತದೆ.
ಫೆಬ್ರವರಿ 2 ರಂದು, ಸಂಚಾರ ಅಧಿಕಾರಿಗಳು ಫೆಬ್ರವರಿ 11 ರ ಮೊದಲು ಪಾವತಿಸಿದರೆ ಬಾಕಿ ಇರುವ ಟ್ರಾಫಿಕ್ ಚಲನ್‌ಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಘೋಷಿಸಿದರು. ಮೂರು ದಿನಗಳಲ್ಲಿ ಟ್ರಾಫಿಕ್ ಪೊಲೀಸರು 22.32 ಕೋಟಿ ದಂಡವನ್ನು ಸಂಗ್ರಹಿಸಿದರು ಮತ್ತು 7,41,048 ಪ್ರಕರಣಗಳನ್ನು ತೆರವುಗೊಳಿಸಿದರು.

ವಿಶೇಷ ಪೊಲೀಸ್ ಆಯುಕ್ತ (ಸಂಚಾರ), ಡಾ.ಎಂ.ಎ.ಸಲೀಂ ಪ್ರಕಾರ, ನಗರದಲ್ಲಿ ಎರಡು ಕೋಟಿಗೂ ಹೆಚ್ಚು ಇ-ಚಲನ್ ಪ್ರಕರಣಗಳು 500 ಕೋಟಿ ರೂ.ವರೆಗೆ ದಂಡ ವಿಧಿಸಬಹುದು. ನಗರದ ನಿವಾಸಿಗಳು ಕರ್ನಾಟಕ ಒನ್ ವೆಬ್‌ಸೈಟ್, ಪೇಟಿಎಂ ಆಪ್ ಅಥವಾ ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ಮೂಲಕ ದಂಡವನ್ನು ಕಟ್ಟಬಹುದು ಅಥವಾ ಪಾವತಿಸಬಹುದು.
ಏತನ್ಮಧ್ಯೆ, ಟ್ರಾಫಿಕ್ ಪೊಲೀಸರು ಕಳೆದ ವಾರ ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ರಹಿತ ಸವಾರರು ನಗರದಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳನ್ನು ಅಳವಡಿಸಿರುವ ಪ್ರತಿಯೊಂದು ಜಂಕ್ಷನ್ ಮೂಲಕ ಹಾದುಹೋದಾಗ ಅವರಿಗೆ ಹಲವಾರು ಬಾರಿ ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ.












Click it and Unblock the Notifications