ಬೆಂಗಳೂರು ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಕಲಾಸಿಪಾಳ್ಯದ ಬಾಲಕಿಯರ ಹಾಸ್ಟೆಲ್‌ನ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶುಕ್ರವಾರ ಅತಿಸಾರದಿಂದ ಅಸ್ವಸ್ತರಾದ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

28 ವಿದ್ಯಾರ್ಥಿಗಳು ಟ್ರಾಮಾ ಕೇರ್ ಸೆಂಟರ್, 13 ಎಚ್ ಬ್ಲಾಕ್ ಮತ್ತು ಮೂವರು ಐಸಿಯುನಲ್ಲಿದ್ದಾರೆ ಎಂದು ಬಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Over 40 BMC Girls Hostel Students Hospitalized for Diarrhea

ಎಲ್ಲರೂ ಬೇಧಿ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ನೊಂದಿಗೆ ರೋಗನಿರ್ಣಯ ಮಾಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿವೆ. ತಪಾಸಣೆಗೆ ಮಾದರಿಗಳನ್ನು ಕಳುಹಿಸಲಾಗಿದೆ ಮತ್ತು ದ್ರವಗಳ ರೂಪದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ತೀವ್ರ ನೀರಿನ ಕೊರತೆಯ ನಡುವೆ ಬೆಂಗಳೂರಿನಲ್ಲಿ ಅಪಾಯವನ್ನುಂಟುಮಾಡುವ ಫುಡ್ ಪಾಯಿಸನ್ ಅಥವಾ ಕಾಲರಾ ಪ್ರಕರಣಗಳಿಗೆ ಸಂಬಂಧಿಸಿವೆಯೇ ಎಂದು ವೈದ್ಯರು ಇನ್ನೂ ಖಚಿತಪಡಿಸಬೇಕಿದೆ.

ನೀರಿನ ಸಮಸ್ಯೆ, ವಿಪರೀತ ಬಿಸಿಲಿನ ನಡುವೆ ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮಲ್ಲೇಶ್ವರಂ ಭಾಗದಲ್ಲಿ ಕಾಲರಾ ಪ್ರಕರಣ ದೃಢಪಟ್ಟಿದೆ. ಅದೇ ಪ್ರದೇಶದಲ್ಲಿ ಇನ್ನೂ ಎರಡು ಶಂಕಿತ ಪ್ರಕರಣಗಳನ್ನು ಮಾದರಿಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+