ಕೊಳೆಗೇರಿ ಮಕ್ಕಳಲ್ಲಿ ದೂರವಾಗದ ಅಪೌಷ್ಟಿಕತೆ: ಸಮೀಕ್ಷೆ
ಬೆಂಗಳೂರು, ನವೆಂಬರ್, 3 : ಬೆಂಗಳೂರು ನಗರದಲ್ಲಿನ ಕೊಳೆಗೇರಿಗಳಲ್ಲಿ ಇರುವ ಮಕ್ಕಳಲ್ಲಿ ಶೇ. 30ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ. 'ಚೈಲ್ಡ್ ರೈಟ್ಸ್ ಅಂಡ್ ಯೂ' ಸಂಸ್ಥೆ ಆರು ವರ್ಷದ ಒಳಗಿನ ಮಕ್ಕಳನ್ನು ಗಮನದಲ್ಲಿ ಇರಿಸಕೊಂಡು ನಡೆಸಿದ ಸಮೀಕ್ಷಾ ವರದಿ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.
ಕೊಳೆಗೇರಿಯ ಶೇ. 52ರಷ್ಟು ಮಕ್ಕಳು ಕುಂಠಿತವಾದ ಬೆಳವಣಿಗೆ ಹೊಂದಿದ್ದಾರೆ. ಶೇ 19ರಷ್ಟು ಮಕ್ಕಳು ವೇಸ್ಟಿಂಗ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2005-06ನೇ ಸಾಲಿನ ವೇಳೆ ಶೇ 17ರಷ್ಟು ಇದ್ದ ವೇಸ್ಟಿಂಗ್ ಅಷ್ಟೇನೂ ಸುಧಾರಿಸಿಲ್ಲ ಎಂದು ವರದಿ ಹೇಳಿದೆ.[ಅವಧಿ ಮುಗಿಯುವ ಮೊದಲೇ ಪ್ಯಾಕೇಟಲ್ಲಿ ಬೂಸ್ಟ್ ಹಿಡಿದ ಬಿಸ್ಕೆಟ್]

ಚೈಲ್ಡ್ ರೈಟ್ಸ್ ಅಂಡ್ ಯೂ ಎನ್ ಜಿಒ ಕೊಳೆಗೇರಿ ಮಕ್ಕಳ ಕಲ್ಯಾಣಕ್ಕೆ ಸದಾ ಶ್ರಸುತ್ತಿದ್ದು ಮಕ್ಕಳಿಗೆ ಲಸಿಕೆ ಮತ್ತು ಮಾತ್ರೆಗಳನ್ನು ಒದಗಿಸುತ್ತಿದೆ. ಶೇ. 75ರಷ್ಟು ಮಕ್ಕಳಿಗೆ ಲಸಿಕೆ ಹಾಕಿ ಸಾಧನೆ ಮಾಡಲಾಗಿದೆ.
ದೇಶದ ಐದು ಪ್ರಮುಖ ಮಹಾನಗರಗಳಲ್ಲಿ ಅಂದರೆ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಮಕ್ಕಳ ಆರೋಗ್ಯದ ಸಮೀಕ್ಷೆ ನಡೆಸಲಾಯಿತು. ಮಕ್ಕಳ ಪೌಷ್ಟಿಕಾಂಶದ ವಿಷಯದಲ್ಲಿ ಯಾವುದೇ ನಗರದಲ್ಲಿಯೂ ಸಕಾರಾತ್ಮಕ ಬೆಳವಣಿಗೆ ಕಾಣಿಸಿಕೊಳ್ಳಲಿಲ್ಲ. ದೆಹಲಿಯ ಇರುವ ಕೊಳೆಗೇರಿಗಳ ಶೇ 50ರಷ್ಟು ಮಕ್ಕಳು ಕಡಿಮೆ ತೂಕ, ಚೆನ್ನೈನಲ್ಲಿ ಶೇ 62.2ರಷ್ಟು ಮಕ್ಕಳು, ಕೋಲ್ಕತ್ತಾ, ಮತ್ತು ಮುಂಬೈ ಕೊಳೆಗೇರಿಗಳಲ್ಲಿ ಕ್ರಮವಾಗಿ ಶೇ 49 ಮತ್ತು 41ರಷ್ಟು ಕಡಿಮೆ ತೂಕದಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನು ಅಧ್ಯಯನ ಹೊರಹಾಕಿತು.[ಮತ್ತೆ ಮಾರುಕಟ್ಟೆಗೆ ಬಂತು ಮ್ಯಾಗಿ, ತಿಂದು ಹಾಯಾಗಿ ಮಲಗಿ]
ಕಳೆದ 30 ವರ್ಷಗಳಿಂದ ಮಕ್ಕಳ ಕಲ್ಯಾಣಕ್ಕೆ ದುಡಿಯುತ್ತಿರುವ ಸಂಸ್ಥೆ 'ಚೈಲ್ಡ್ ರೈಟ್ಸ್ ಅಂಡ್ ಯೂ' ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ 20 ಲಕ್ಷ ಮಕ್ಕಳಿಗೆ ಲಸಿಕೆ ಮತ್ತು ಮಾತ್ರೆ ಒದಗಿಸಿದ ಸಾಧನೆ ಮಾಡಿದೆ.












Click it and Unblock the Notifications