ಬೆಂಗಳೂರು: ಕಾನೂನು ಬಾಹಿರ ಕೃತ್ಯ, 107 ಆಫ್ರಿಕನ್ನರ ಬಂಧನ

ಬೆಂಗಳೂರು, ಜು.23: ಅನಧಿಕೃತ ವಾಸ್ತವ್ಯ, ಮಾದಕ ವಸ್ತು ಮಾರಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 107 ಆಫ್ರಿಕನ್ನರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪೈಕಿ ಮಾದಕವಸ್ತು ಮಾರಾಟ ಆರೋಪದಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇವರಿಂದ 650 ಗ್ರಾಂ ಗಾಂಜಾ, 60 ಗ್ರಾಂ ಕೊಕೇನ್‌ ಮತ್ತು 10 ಗ್ರಾಂ ಎಲ್‌ಎಸ್‌ಡಿ ಜಪ್ತಿ ಮಾಡಲಾಗಿದೆ. ವೈಟ್‌ಫೀಲ್ಡ್‌ ಉಪ ವಿಭಾಗದಲ್ಲಿ 25, ಈಶಾನ್ಯ 50 ಮತ್ತು ಪೂರ್ವ ವಿಭಾಗದಲ್ಲಿ 32 ಸೇರಿದಂತೆ ಒಟ್ಟು 107 ಮಂದಿ ವಿರುದ್ಧ ವಿದೇಶಿಯರ ನೋಂದಣಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Over 107 Africans in city arrested, face deportation

ಮೂರು ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರಜೆಗಳು ನೆಲೆಸಿರುವ ಕಾರಣ ಬೆಳಗ್ಗೆ 6 ಗಂಟೆಯಿಂದಲೇ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ವೀಸಾ ಅವಧಿ ಮುಕ್ತಾಯವಾಗಿದ್ದರೂ ಅಕ್ರಮವಾಗಿ ವಿದೇಶಿಯರು ನೆಲೆಸಿರುವ ಕುರಿತು ಪ್ರಾದೇಶಿಕ ನೋಂದಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪ್ರತಿ ಉಪ ವಿಭಾಗದಲ್ಲಿ 100 ರಿಂದ 120ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡಗಳು ಶೋಧ ಕಾರ್ಯ ನಡೆಸಿದವು.

ಬೆಂಗಳೂರಿನ ಒಟ್ಟು 10 ಕಡೆ ಶೋಧ ಕಾರ್ಯ ನಡೆಸಲಾಯಿತು. ನೈಜೀರಿಯಾ, ಸುಡಾನ್‌, ರವಾಂಡಾ, ಉಗಾಂಡಾ, ಘನಾ ಸೇರಿದಂತೆ ಆಫ್ರಿಕನ್‌ ರಾಷ್ಟ್ರಗಳ ಪ್ರಜೆಗಳು ವಾಸವಿರುವ ಮನೆಗಳಿಗೆ ತೆರಳಿ ಪಾಸ್‌ಪೋರ್ಟ್‌, ವೀಸಾ ಪರವಾನಗಿ ದಾಖಲೆಗಳನ್ನು ಪರಿಶೀಲಿಸಲಾಯಿತು. ಇದಕ್ಕೆ ವಿದೇಶಿಯರ ಕಾಯ್ದೆ, ವಿದೇಶಿಯರ ಆದೇಶ ಕಾಯ್ದೆ ಹಾಗೂ ಮಾದಕವಸ್ತು ನಿಯಂತ್ರಣ ಕಾಯ್ದೆಯಲ್ಲಿ ದೂರು ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+