ಒರಾಯನ್ ಮಾಲ್ ನಲ್ಲಿ ಕ್ರಿಸ್‍ಮಸ್ ಸಡಗರ ಸಂಭ್ರಮ
ಬೆಂಗಳೂರು, ಡಿಸೆಂಬರ್ 24: ಕ್ರಿಸ್‍ಮಸ್ ಬಂದೇಬಿಡ್ತು. ಈ ಬಾರಿಯ ಕ್ರಿಸ್‍ಮಸ್ ಭರ್ಜರಿಯಾಗಿ ಸ್ವಾಗತ ಮಾಡಲು ಒರಾಯನ್ ಮಾಲ್ ಸಂಪೂರ್ಣ ಸಜ್ಜಾಗಿದೆ. ಕ್ರಿಸ್‍ಮಸ್ ಗೆ ಗ್ರಾಹಕರು ಕುಟುಂಬ ಸಮೇತರಾಗಿ ಬಂದು ಎಂಜಾಯ್ ಮಾಡಲು ಒರಾಯನ್ ಮಾಲ್ ಸಿದ್ಧತೆ ನಡೆಸಿದೆ.
ಬ್ರಿಗೇಡ್ ಗ್ರೂಪ್ ನ ಬ್ರಿಗೇಡ್ ಗೇಟ್ ವೇ ಎನ್ ಕ್ಲೇವ್ ಭಾಗವಾಗಿರುವ ಒರಾಯನ್ ಮಾಲ್, ಕ್ರಿಸ್‍ಮಸ್ ಗಾಗಿ ಸಾಂತಾ ಕ್ಲಾಸ್, ಸ್ನೋಮ್ಯಾನ್ ಕ್ಯಾರಕ್ಟರ್ ಮತ್ತು ಕ್ರಿಸ್‍ಮಸ್ ಕ್ಯಾರೋಲ್ಸ್ ಮುಂತಾದ ವಿಭಿನ್ನ ಕಾನ್ಸೆಪ್ಟ್ ಗಳಿಂದ ಕ್ರಿಸ್‍ಮಸ್ ಆಚರಣೆಯನ್ನು ಅನನ್ಯವಾಗಿಸಲು ತಯಾರಿ ನಡೆಸಿದೆ.

ಒರಾಯನ್ ಮಾಲ್ ನಲ್ಲಿ ಕ್ರಿಸ್‍ಮಸ್ ಆಚರಣೆಯ ಕುರಿತು ಮಾತನಾಡಿದ ಒರಾಯನ್ ಮಾಲ್ ಜನರಲ್ ಮ್ಯಾನೇಜರ್ ಸುನಿಲ್ ಮುನ್ಷಿ, "ಹಬ್ಬದೊಂದಿಗಿನ ಮೋಜು ಹಾಗೂ ಹುರುಪಿನೊಂದಿಗೆ ಕ್ರಿಸ್‍ಮಸ್ ಆಚರಣೆಗಾಗಿ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ವಿವಿಧ ರೀತಿಯ ಅಲಂಕಾರ ಮತ್ತು ಜನಪ್ರಿಯ ಕ್ರಿಸ್‍ಮಸ್ ಸಂಕೇತಗಳಲ್ಲದೆ, ನಾವು ಕಿಡ್ಸ್ ಎಕ್ಸ್ ಮಾಸ್ ಡ್ರೆಸ್-ಅಪ್ ಫೋಟೋ ಆಪ್ಶನ್ ಅನ್ನೂ ಆಯೋಜಿಸಿದ್ದೇವೆ. ಇದು ನಮ್ಮ ಗ್ರಾಹಕರಿಗೆ ಕೌಟುಂಬಿಕ ವಾತಾವರಣ ನಿರ್ಮಿಸಲಿದೆ'' ಎಂದರು.















Click it and Unblock the Notifications