ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ಸಾಮಾನ್ಯ ದರದ ರೈಲು, ವೇಳಾಪಟ್ಟಿ

ಬೆಂಗಳೂರು, ಮಾರ್ಚ್ 07: ನೈಋತ್ಯ ರೈಲ್ವೆ ಬೆಂಗಳೂರು ನಗರದಿಂದ ಹುಬ್ಬಳ್ಳಿ ಮತ್ತು ಹೊಸಪೇಟೆಗೆ ಪ್ರತಿನಿತ್ಯ ಸಾಮಾನ್ಯ ದರದಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ರೈಲುಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಎಸ್‌. ಎಸ್. ಎಸ್. ಹುಬ್ಬಳ್ಳಿ-ಕೆ. ಎಸ್. ಆರ್. ಬೆಂಗಳೂರು ನಡುವೆ ಮಾರ್ಚ್ 10ರಿಂದ ಪ್ರತಿದಿನ ರೈಲು ಸಂಚಾರ ನಡೆಸಲಿದೆ. ಕೆ. ಎಸ್. ಆರ್. ಬೆಂಗಳೂರು-ಹೊಸಪೇಟೆ ನಡುವೆ ಮಾರ್ಚ್ 11ರಿಂದ ರೈಲು ಸಂಚಾರ ನಡೆಸಲಿದೆ ಎಂದು ತಿಳಿಸಲಾಗಿದೆ.

ಮಾರ್ಚ್ 10ರಂದು ಸಂಜೆ 6 ಗಂಟೆಗೆ 06242 ನಂಬರ್ ರೈಲು ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಬೆಂಗಳೂರು ತಲುಪಲಿದೆ. ಮಾರ್ಚ್ 12ರಂದು ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ 06241 ನಂಬರ್ ರೈಲು ರಾತ್ರಿ 11.55ಕ್ಕೆ ಹೊರಟು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

Ordinary Fare Daily Train From Bengaluru To Hubballi And Hospet

ಬೆಂಗಳೂರು-ಹೊಸಪೇಟೆ; ಮಾರ್ಚ್ 11ರಂದು ಬೆಳಗ್ಗೆ 5 ಗಂಟೆಗೆ ಕೆ. ಎಸ್‌. ಆರ್. ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು 06243 ನಂಬರ್ ರೈಲು ಮಧ್ಯಾಹ್ನ 3.45ಕ್ಕೆ ಹೊಸಪೇಟೆ ತಲುಪಲಿದೆ. ಮಾರ್ಚ್ 12ರಂದು ಮಧ್ಯಾಹ್ನ 12.10ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು ಬೆಂಗಳೂರಿಗೆ ರಾತ್ರಿ 10.45ಕ್ಕೆ ಆಗಮಿಸಲಿದೆ.

ಹೊಸಪೇಟೆ-ಹರಿಹರ ರೈಲು; ನೈಋತ್ಯ ರೈಲು ಹೊಸಪೇಟೆ-ಹರಿಹರ ನಡುವೆ ಪ್ರತಿದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. ಮಾರ್ಚ್ 11ರಂದು ಹೊಸಪೇಟೆಯಿಂದ ಸಂಜೆ 4 ಗಂಟೆಗೆ ಹೊರಡುವ ರೈಲು ರಾತ್ರಿ 9.15ಕ್ಕೆ ಹರಿಹರ ತಲುಪಲಿದೆ. ಮಾರ್ಚ್ 12ರಂದು ಹರಿಹರದಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ರೈಲು 11.45ಕ್ಕೆ ಹೊಸಪೇಟೆ ತಲುಪಲಿದೆ.

ಈ ರೈಲು ತುಂಗಭದ್ರಾ ಡ್ಯಾಂ, ವ್ಯಾಸನಕೇರಿ, ವ್ಯಾಸ ಕಾಲೋನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಮಳವಿ, ಕೊಟ್ಟೂರು, ಬೆಣ್ಣೆಹಳ್ಳಿ, ಹನಪನಹಳ್ಳಿ, ತೆಲಿಗಿ, ಅಮರಾವತಿ ಕಾಲೋನಿ, ದಾವಣಗೆರೆ, ತೋಳಹುಣಸೆ, ದಾವಣಗೆರೆ ನಿಲ್ದಾಣದಲ್ಲಿ ನಿಲ್ಲಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+