ಮ್ಯಾಡಿಸನ್ ವೆಬ್ ಸೈಟ್ ಮೇಲೆ ಭಾರತೀಯರಿಗೆ 'ಮ್ಯಾಡ್ ಲವ್'
ಬೆಂಗಳೂರು, ಆಗಸ್ಟ್ 24: 'ಜೀವನ ಚಿಕ್ಕದು. ಒಂದಾದ್ರೂ ಅಫೇರ್ ಇಟ್ಕೊಳ್ಳಿ' ಎಂಬ ಟ್ಯಾಗ್ ಲೈನ್ ನೊಂದಿಗೆ ವಿಶ್ವದೆಲ್ಲೆಡೆ ಬಿರುಗಾಳಿ ಎಬ್ಬಿಸಿರುವ ಆಷ್ಲೆ ಮ್ಯಾಡಿಸನ್ 'ಡಾರ್ಕ್' ವೆಬ್ ಸೈಟ್ ಹ್ಯಾಕ್ ಆಗಿರುವ ಸುದ್ದಿ ತಿಳಿದಿರಬಹುದು. ಈಗ ಹ್ಯಾಕರ್ ಗಳು ಕದ್ದ ಮಾಹಿತಿಯನ್ನು ಸೋರಿಕೆ ಮಾಡಿದ್ದು, ಭಾರತೀಯರು ಕೂಡಾ ಅಪಾರ ಸಂಖ್ಯೆಯಲ್ಲಿ ಅಫೇರ್ ಇಟ್ಟುಕೊಳ್ಳಲು ಈ ಆನ್ ಲೈನ್ ಡೇಟಿಂಗ್ ಸೈಟ್ ಮೇಲೆ ಹುಚ್ಚು ಪ್ರೀತಿ ತೋರಿಸುವ ಸಂಗತಿ ಬೆಳಕಿಗೆ ಬಂದಿದೆ.
ವಿವಾಹೇತರ ಸಂಬಂಧ ಬೆಸೆಯಲು ಈರುವ ಆಶ್ಲೆ ಮ್ಯಾಡಿಸನ್ ಅವರ ವೆಬ್ ಸೈಟ್ ಅನ್ನು ಸ್ಪೇನಿನ ಡಿಜಿಟಲ್ ಏಜೆನ್ಸಿ ಟೆಕ್ನಿಲೊಜಿಕಾ ಸಂಸ್ಥೆ ನಿರ್ವಹಿಸುತ್ತಿದ್ದು, ಲಭ್ಯ ಮಾಹಿತಿ ಪ್ರಕಾರ ಪುರುಷರಲ್ಲದೆ ಮಹಿಳೆಯರು ಕೂಡಾ ಡೇಟಿಂಗ್ ಗಾಗಿ ಅವಕಾಶ ಕೋರಿ ನೋಂದಣಿ ಮಾಡಿಕೊಂಡಿದ್ದಾರೆ. ಜೊತೆಗೆ ಒಂದು ಮ್ಯಾಪ್ ನೀಡಲಾಗಿದ್ದು, ಭಾರತ ಸೇರಿದಂತೆ ವಿಶ್ವದ ಎಲ್ಲೆಡೆಯಿಂದ ಈ ವೆಬ್ ಸೈಟ್ ಗೆ ಮುಗಿ ಬಿದ್ದ ಜನರ ಅಂಕಿ ಅಂಶ ಬಯಲಾಗಿದೆ. [ಡೇಟಿಂಗ್ ಹೋದರೂ ಕಷ್ಟ ಹೋಗದಿದ್ದರೂ ಕಷ್ಟ!]
ಜಗತ್ತಿನಾದ್ಯಂತ 3.7 ಕೋಟಿ ಗೂ ಹೆಚ್ಚು ಹೆಸರುಗಳು ಹೊರ ಬಂದಿವೆ. ಜುಲೈ 20 ರ ಸುಮಾರಿಗೆ ಹ್ಯಾಕ್ ಆದ ವೆಬ್ ಸೈಟ್ ಒಂದು ತಿಂಗಳ ನಂತರ ಹೊರ ಬಂದಿದ್ದು, ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ಭಾರತದಲ್ಲಿ ಯಾವ ಯಾವ ನಗರ ಯಾವ ಯಾವ ಸ್ಥಾನದಲ್ಲಿದೆ ಮುಂದೆ ನೋಡಿ...

ಇಪ್ಯಾಕ್ಟ್ ಟೀಂ ನಿಂದ ಮ್ಯಾಡಿಸನ್ ವೆಬ್ ಸೈಟ್ ಹ್ಯಾಕ್
ಇಪ್ಯಾಕ್ಟ್ ಟೀಂ ನಿಂದ ಮ್ಯಾಡಿಸನ್ ವೆಬ್ ಸೈಟ್ ಹ್ಯಾಕ್ ಮಾಡಲಾಗಿದ್ದು, ಪಶ್ಚಿಮ ಯುರೋಪ್ ಹಾಗೂ ಯುನೈಟೆಡ್ ಸ್ಟೇಟ್ಸ್ ನ ಅಕ್ರಮ ಸಂಬಂಧಾರ್ಥಿಗಳೇ ಹೆಚ್ಚಾಗಿದ್ದಾರೆ. ಸರಿ ಸುಮಾರು 1.2 ಮಿಲಿಯನ್ ಜನ ಬ್ರಿಟನ್ ಮೂಲದವರಾಗಿದ್ದು, ವಿವಾಹ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತಿದೆ ಎಂಬ ಅಂಶ ಆತಂಕ ಉಂಟು ಮಾಡಿದೆ.

ಭಾರತೀಯ ನಗರಗಳಿಂದ ನೋಂದಾಯಿತರು
ದೆಹಲಿಯ 38,652, ಮುಂಬೈಯ 33,036, ಚೆನ್ನೈನ 16,434, ಕೊಲ್ಕತ್ತಾದ 11,807 ಜನ ಈ ವಿವಾದಿತ ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಂಡು ಸದಸ್ಯರಾಗಿದ್ದಾರೆ. 11,561 ಮಂದಿ ಬೆಂಗಳೂರಿನವರು ಆನ್ ಲೈನ್ ಡೇಟಿಂಗ್ ಬಯಸಿದ್ದಾರೆ. ಉಳಿದಂತೆ ಅಹಮದಾಬಾದ್ 7,009, ಚಂಡೀಗಢ 2,918, ಜೈಪುರ್ 5,0,45, ಲಕ್ನೋ 3,885 ಹಾಗೂ ಪಾಟ್ನ 2,524 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಒಟ್ಟಾರೆ 3.7 ಮಿಲಿಯನ್ ಹೆಸರುಗಳು ಬಹಿರಂಗ
ಒಟ್ಟಾರೆ 3.7 ಮಿಲಿಯನ್ ಸದಸ್ಯರ ಅಂಕಿ ಅಂಶವನ್ನು ಹ್ಯಾಕರ್ಸ್ ಪಡೆದುಕೊಂಡಿದ್ದಾರೆ. ಪಶ್ಚಿಮ ಯುರೋಪ್ ಹಾಗೂ ಯುಎಸ್ ನ ಸದಸ್ಯರು ಅಧಿಕವಾಗಿದ್ದಾರೆ. ಬ್ರಿಟನ್ನಿನ 1.2 ಮಿಲಿಯನ್ ಸದಸ್ಯರಿದ್ದಾರೆ.

ಗಂಡಸರು ಹಾಗೂ ಹೆಂಗಸರು ಇಬ್ಬರೂ ಇದ್ದಾರೆ
ಬೆಂಗಳೂರಿನ ಪೈಕಿ ಶೇ 88ರಷ್ಟು ಮಂದಿ ಗಂಡಸರು ಸದಸ್ಯರಿದ್ದರೆ ಮಿಕ್ಕಂತೆ ಹೆಂಗಸರು ಡೇಟಿಂಗ್ ಬಯಸಿದ್ದಾರೆ. ವಿಶ್ವದೆಲ್ಲೆಡೆ ಅಂಕಿ ಅಂಶ ಗಮನಿಸಿದರೆ ವಿಜ್ಞಾನಿಗಳು, ಸರ್ಕಾರಿ ಉದ್ಯೋಗಿ, ಪೊಲೀಸ್ ಅಧಿಕಾರಿ, ಡಾಕ್ಟರ್ಸ್ ಕೂಡಾ ವಿವಾಹೇತರ ಡೇಟಿಂಗ್ ಬಯಸಿದ್ದಾರೆ.

ಕಾನೂನು ಕ್ರಮಕ್ಕೆ ಮುಂದಾದ ಸಂಸ್ಥೆ
ಕದ್ದ ಅಂಕಿ ಅಂಶದಿಂದ ಖಾಸಗಿ ಮಾಹಿತಿ ಸೋರಿಕೆಯಾಗಿರುವುದನ್ನು ಖಂಡಿಸಿ ವೆಬ್ ಸೈಟ್ ನಿಯಂತ್ರಿಸುವ ಕೆನಡಾ ಮೂಲದ ಅವಿಡ್ ಲೈಫ್ ಮೀಡಿಯಾ ಸಂಸ್ಥೆ ಇದು ಕ್ರಿಮಿನಲ್ ಸಂಚು, ಇದರ ವಿರುದ್ಧ ಕಾನೂನು ಕ್ರಮ ಅಗತ್ಯ ಎಂದಿದೆ. ಬ್ರಿಟನ್ನಿನಲ್ಲಿ ಹೆಸರು ಪತ್ತೆಯಾದ ಮೇಲೆ ಪತಿ ವಿರುದ್ಧ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಉದಾಹರಣೆಗಳು ಸಿಕ್ಕಿವೆ.

ಸಿಇಒ ನೋಯೆಲ್ ಬಿಡರ್‍ಮನ್ ಸಭ್ಯ
ಆಷ್ಲೆ ಮ್ಯಾಡಿಸನ್ ವೆಬ್ ಸೈಟ್ ಸಿಇಒ ನೋಯೆಲ್ ಬಿಡರ್‍ಮನ್ ಒಬ್ಬ ವಿವಾಹಿತ. ಆದರೆ ಆತನಿಗೆ ಯಾವುದೇ ವಿವಾಹೇತರ ಸಂಬಂಧಗಳಿಲ್ಲ. ಈ ವೆಬ್ ಸೈಟ್ ನಲ್ಲಿ ಅವನು ಖಾತೆಯನ್ನೂ ಹೊಂದಿಲ್ಲ ಎಂಬ ಸಂಗತಿ ಅಚ್ಚರಿ ಮೂಡಿಸುತ್ತದೆ.
ಮುಗಿ ಬಿದ್ದ ಜನರ ಅಂಕಿ ಅಂಶ ಒಂದು ಮ್ಯಾಪ್
ಈ ವೆಬ್ ಸೈಟ್ ಗೆ ಮುಗಿ ಬಿದ್ದ ಜನರ ಅಂಕಿ ಅಂಶ ಬಯಲಾಗಿದೆ.












Click it and Unblock the Notifications